"ಅನಿರೀಕ್ಷಿತ": ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ
ಬೆಂಗಳೂರು, ಅ. 07 ಮಿಮಿಕ್ರಿ ದಯಾನಂದ್ ಅವರು ಮೊಟ್ಟಮೊದಲ ಬಾರಿಗೆ ನಿರ್ದೇಶಿಸಿ, ನಟಿಸಿರುವ ಅನಿರೀಕ್ಷಿತ ಚಿತ್ರದ ಛಾಯಾಗ್ರಾಹಕ ಜೀವನ್ ಗೌಡ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.
"ಕೇರಳದ 7ನೇ ಕಲಾ ಸ್ವತಂತ್ರ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಹಾಗೂ ಅಮೇರಿಕಾದ ನ್ಯೂ ಜೆರ್ಸಿಯಲ್ಲಿ ನಡೆದ ಸ್ಟಾರ್ ಹಾಲಿವುಡ್ ಅವಾರ್ಡ್ಸ್ ಅಂತರರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲಿ ಬೆಸ್ಟ್ ಸಿನೆಮಾಟೊಗ್ರಫಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಸಂತೋಷ್ ಕೊಡೆಂಕಿರಿಯವರ ಕ್ರಿಯೇಟಿವ್ ಡೈರೆಕ್ಷನ್, ಗುರುಕಿರಣ್ ರವರ ಅದ್ಭುತ ಸಂಗೀತ “ಅನಿರೀಕ್ಷಿತ” ಚಿತ್ರಕ್ಕಿದೆ. ನೆಲ್ಲೋಲಿ ರಾಜಶೇಖರ್ ಸಂಭಾಷಣೆ, ರಘು ರವರು ಸಂಕಲನವಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಕೇವಲ 13 ತಂತ್ರಜ್ಞರು ಸೇರಿ ಮಾಡಿದ ಚಿತ್ರ ಎಂಬುದು ವಿಶೇಷ.