“ತುರ್ತುಪರಿಸ್ಥಿತಿಯ ಕರಾಳ ಇತಿಹಾಸಕ್ಕೆ 50 ವರ್ಷ ಕಾರ್ಯಕ್ರಮ
ಬಳ್ಳಾರಿ 26: ಎಬಿವಿಪಿ ಬಳ್ಳಾರಿ ಶಾಖೆಯಿಂದ “ತುರ್ತುಪರಿಸ್ಥಿತಿಯ ಕರಾಳ ಇತಿಹಾಸಕ್ಕೆ 50 ವರ್ಷ” ಎಂಬ ಕಾರ್ಯಕ್ರಮವನ್ನು ನಗರದಬಿ.ಪಿ.ಎಸ್.ಸಿ ಶಾಲೆಯಲ್ಲಿ ಮಾಡಲಾಯಿತು.
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೋಲೆಯನ್ನು ಮಾಡಿದ್ದು ಕಾಂಗ್ರೆಸ್ ಎಂಬುದು ಇಡೀ ದೇಶ ಅರಿತಿರುವ ಸಂಗತಿ.ಇಂದಿರಾಗಾಂಧಿ ಕೇವಲ ತುರ್ತುಪರಿಸ್ಥಿತಿ ಹೇರಿಲ್ಲ..ಭಾರತೀಯರ ಧ್ವನಿ ಅಡಗಿಸುವ ಪ್ರಯತ್ನ ಮಾಡಿದ್ದಾರೆ ಎಂದು ಎಬಿವಿಪಿ ನಗರ ಅಧ್ಯಕ್ಷರಾದ ಜಗದೀಶ ಕನುಗೋಲು ಪ್ರಾಸ್ತಾವಿಕ ನುಡಿಯನ್ನಾಡಿದರು.
ಮುಖ್ಯವಕ್ತಾರರಾಗಿ ಖಖಖ ನಪ್ರಾಂತ ಸಹ ಕಾರ್ಯವಾಹಟಿ. ಪ್ರಸನ್ನ ಅವರು ಮಾತನಾಡಿ “ಸಂವಿಧಾನದ ಕತ್ತನ್ನು ಸೀಳಿ, ಜನರ ಬದುಕಿನ ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದು ಕಾಂಗ್ರೆಸ್ನ ಪ್ರಧಾನಿಯಾಗಿದ್ದ ಇಂದಿರಾಗಾಂಧಿ. 25 ಜೂನ್ 1975 ರಲ್ಲಿಹೇರಿದ್ದು ಕೇವಲ ತುರ್ತುಪರಿಸ್ಥಿತಿ ಅಲ್ಲ... ಅದು ನಾಗರಿಕ ಸಮಾಜದ ಎಲ್ಲಾ ಸ್ವಾತಂತ್ರ್ಯಕ್ಕೆ ಕತ್ತರಿ ಹಾಕಿರುವು ಸಹಜವಾಗಿ ಕಂಡು ಬರುವ ವಿಷಯ.ಆದರೆ ದೇಶದ ಯುವ ಕ್ಷಾತ್ರ ತೇಜಸ್ಸು ಸ್ವಾಭಿಮಾನಕ್ಕಾಗಿ, ನಾಗರಿಕ ಸತ್ವವನ್ನುಕಾಪಡಿಕೊಳ್ಳಲು ಕಾಂಗ್ರೆಸ್ನ ವಿರುದ್ದ ಆಂದೋಲನವನ್ನು ಕಟ್ಟಿದರು.
ಆ ಆಂದೋಲನವನು ್ನಸರ್ವಾಧಿಕಾರಿ ಮುಕ್ತ ದೇಶದ ದೃಷ್ಟಿಯಿಂದ ಮುನ್ನಡೆಸಿದವರು ಜಯಪ್ರಕಾಶ ನಾರಾಯಣರವರು. ಅಲ್ಲಿಂದ ಆರಂಭವಾದ ಆಂದೋಲನ ಅದು ದೇಶ್ಯಾದ್ಯಂತ ಯುವ ಮನಸ್ಸುಗಳನ್ನು ಕೂಡಿಸುವ ಹಂತಕ್ಕೆ ಬಂದಿತು.ಎಲ್ಲೆಲ್ಲೂ ಸರ್ಕಾರದ ವಿರುದ್ದ ಸಂಘರ್ಷ, ಆಂದೋಲನ ಹಾಗೂ ಹೋರಾಟಗಳು .ಎಬಿವಿಪಿ ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳು ಈ ಆಂದೋಲನದಲ್ಲಿ ಭಾಗವಹಿಸಿದ್ದು. ಸರ್ಕಾರದ ವಿರುದ್ದ ಧ್ವನಿ ಎತ್ತಿದರೆ ಸಾಕು ಜೈಲುಪಾಲು ಎನ್ನುವ ಮಟ್ಟಿಗೆ ಅವತ್ತಿನ ಸ್ಥಿತಿಗತಿಯಾಗಿತ್ತು. ದೇಶದ ಎಲ್ಲಾ ಜೈಲುಗಳು ತುಂಬಿತುಳಕುತ್ತಿದ್ದವು. ಆದರೆ ಅಂದು ಆಂದೋಲನದಿಂದ ಮೂಡಿದ ಆತ್ಮ ವಿಶ್ವಾಸ ಇವತ್ತು ಸರ್ವಾಧಿಕಾರಿ ಮುಕ್ತರಾಷ್ಟ್ರ ಕಟ್ಟಲು ಸಾಕ್ಷಿಯಾಯಿತು.
ಇಂದು ಕೇವಲಕ ರಾಳದಿನವಲ್ಲ...ನಾಗರಿಕ ಸಮಾಜದ ,ಪ್ರಜಾಪ್ರಭುತ್ವದ ಕಗ್ಗೋಲೆ ಎಂದರು. ಈ ಸಂದರ್ಭದಲ್ಲಿ ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ನಾಗರಾಜ ಬಟಗೇರಾ, ನಗರ ಸಂಘಟನಾ ಕಾರ್ಯದರ್ಶಿ ಟಿಭರತ್, ಕಾರ್ಯಕರ್ತರಾದ ಬಸವ ಕಿರಣಗೌಡ, ದೀಲೀಪ್, ದರ್ಶನ್, ಸಾಯಿರೂಪಾಲಿಕಾ, ರಮ್ಯಾಕೃಷ್ಣ, ಶಿವಾನಿ, ಹರ್ಷಿತ್, ರಾಘವರೆಡ್ಡಿ ಹಾಗೂ ವಿದ್ಯಾರ್ಥಿಗಳು ಇದ್ದರು.