ಧಾರವಾಡ - ಹುಬ್ಬಳ್ಳಿ

ವಂದೇ ಮಾತರಂಗೀತೆಗೆ ಈಗ 150 ವರ್ಷ ತುಂಬಿದ ಸಂಭ್ರಮ

ವಂದೇ ಮಾತರಂಗೀತೆಗೆ ಈಗ 150 ವರ್ಷ ತುಂಬಿದ ಸಂಭ್ರಮ

ಧಾರವಾಡ 24: ದೇಶ ಪ್ರೇಮ ಹಾಗೂ ಸ್ವಾತಂತ್ರ್ಯದ ಸ್ಪೂರ್ತಿಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವ ವಂದೇ ಮಾತರಂಗೀತೆಗೆ ಈಗ 150 ವರ್ಷ ತುಂಬಿದ ಸಂಭ್ರಮ ಎಂದು ಚಿಂತಕ , ಹಿರಿಯ ರಂಗ ಕರ್ಮಿ ಡಾ.ಶಶಿಧರ ನರೇಂದ್ರ ಹೇಳಿದರು.  

ಧಾರವಾಡ ಲಯನ್ಸ್‌ ಸಂಸ್ಥೆಯು ನಾರಾಯಣಪುರದ ಲಯನ್ಸ್‌ ಶಾಲೆಯ ಸಭಾ ಭವನದಲ್ಲಿ ಮಂಗಳವಾರ ಸಂಜೆ ಏರಿ​‍್ಡಸಿದ "ವಂದೇ ಮಾತರಂ ಗೀತೆಗೆ 150 ರ ಸಂಭ್ರಮ " ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಬಂಕಿಮ ಚಂದ್ರ ಚಟರ್ಜಿಯವರ ಆನಂದಮಠ ಕಾದಂಬರಿಯಲ್ಲಿ ಬರುವ ಗೀತೆಯೊಂದು150 ವರ್ಷಗಳ ನಂತರವೂ ಪ್ರಸ್ತುತವಾಗಿದೆ.ಹೀಗೆ ವಿಶೇಷ ಗೌರವ ಪಡೆಯುವ ಈ ಗೀತೆಯ 150 ವರ್ಷಗಳ ಸಂಭ್ರಮವನ್ನು ಆಚರಿಸುತ್ತಿರುವ ಧಾರವಾಡ ಲಯನ್ಸ್‌ ಸಂಸ್ಥೆಯವರ ಕಾರ್ಯ ಶ್ಲಾಘನೀಯ ಎಂದು  ಹೇಳಿದರು.  

ಸ್ವಾತಂತ್ರ್ಯ ಪೂರ್ವದಲ್ಲಿ ಬಂಕಿಮ ಚಂದ್ರ ಚಟರ್ಜಿಯವರು ಬಂಗಾಳದಲ್ಲಿ ನಡೆಯುವ ದುರ್ಗಾ ಪೂಜೆಯಿಂದ ಪ್ರಭಾವಿತರಾಗಿ,1875ರ ನವೆಂಬರ್ 7ರಂದು ಈ ಗೀತೆಯನ್ನು ಬರೆದರು.ಆರು ಚರಣಗಳಿರುವ ವಂದೇ ಮಾತರಂ ಗೀತೆಯು ದೇಶವನ್ನು ತಾಯಿಯಂತೆ ಕಾಣುತ್ತದೆ ಎಂದು ವಿವರಿಸಿದರು.  

ಖಜಾಂಚಿ ಶ್ರೀಕಾಂತ ದೇವಗಿರಿ, ಶೈಲಾ ಕರಗುದರಿ, ಹರ್ಷ ದೇಸಾಯಿ, ಆರ್‌.ಕೆ.ಹೆಗಡೆ, ಡಾ.ರಮೇಶ ಹೆಬ್ಬಳ್ಳಿ,ಡಾ.ಕೆ.ವಿ.ಅಚ್ಯುತ,ವಿದ್ಯಾಧರ ಅಂಗಡಿ,ವಿಜಯ ಮುಧೋಳಕರ, ವಸಂತ ಭಟ್,ಗುರುರಾಜ ಪಿಸೆ,ಶ್ರೀಕಾಂತ ಸಿ.ಕೆ,ಉಷ್ಮಾ ದೇಸಾಯಿ, ನೀತಾ ಕೊಪ್ಪಿಕರ,ಶಕುಂತಲಾ ಕುಂದೂರ, ನಮ್ರತಾ ಪಾಟೀಲ,ಡಾ.ರಾಜಶ್ರೀ ಗುದಗನವರ, ಕವಿತಾ ಅಂಗಡಿ,ಶುಭದಾ ಮುಧೋಳಕರ,ರಶ್ಮೀ ಭಾರದ್ವಾಜ ಇತರರು ಇದ್ದರು.  

ಲಯನ್ಸ್‌ ಅಧ್ಯಕ್ಷ ಅಶ್ವಿನ್ ಕೊಪ್ಪಿಕರ ಸ್ವಾಗತಿಸಿದರು. ಡಾ.ಅಶ್ವಿನ್ ಕುಲಕರ್ಣಿ ಧ್ವಜ ವಂದನೆ ಸಲ್ಲಿಸಿದರು. ಡಾ.ಉಷಾ ಗದ್ದಗಿಮಠ ಪರಿಚಯಿಸಿದರು. ಲಯನ್ಸ್‌ ಕಾರ್ಯದರ್ಶಿ ಪ್ರೊ.ಸುರೇಶ ಗುದಗನವರ ನಿರೂಪಿಸಿದರು. ನಂದಿನಿ ಬಾಗಿ ವಂದಿಸಿದರು.  

ಲಯನ್ಸ್‌ ಸದಸ್ಯೆಯರು ವಂದೇ ಮಾತರಂ ಗೀತೆಯನ್ನು ಸುಶ್ರಾವ್ಯ ವಾಗಿ ಹಾಡಿದರು. 


ಸುದ್ದಿ ಓದಿ