ಅಭಿಪ್ರಾಯ

ಹಡೆದವ್ವ ಬೀದಿಗೆ; ಪರದೆವ್ವಗಳು ಮನೆಯೊಳಗೆ!

- ಪಿನಾಕ ಪಾಣಿ

'ಯಾರು ನಿಂದವರಲ್ಲಿ ತಾಯೇ! ಎಂದೆ

ಯಾರು ಕೇಳುವರೆನಗೆ ಯಾಕೆ ತಂದೆ?

ಬೇಸರದ ದನಿಯೇಕೆ ಹೆಸರ ಹೇಳಲ್ಲ,

ಹೆಸರಾಗಿಯೂ ಕೂಡ, ಹೇಳ ಹೆಸರಿಲ್ಲ . . . .

ಇರುವರೇ ಇದ್ದರೇ ಮಕ್ಕಳೆಂಬವರು

ಇರುವರೆಂದು ಕೂಡ ಯಾರು ನಂಬುವರು . . ' 

ಅಂಬಿಕಾತನಯದತ್ತರ 'ಕನಸಿನೊಳಗೊಂದು ಕನಸು' ಕವನ ಕನ್ನಡದ ನಿಜ ಚಿತ್ರಣವನ್ನು, ತಾಯಿ ಪಂಪಾಂಬಿಕೆಯ ವ್ಯಥೆಯನ್ನು ಯಥಾವತ್ತಾಗಿ ತಿಳಿಸುತ್ತದೆ. ಅದು ಇಂದಿಗೂ ಯಥಾವತ್ತಾಗಿದೆ. 63ನೆಯ ರಾಜ್ಯೋತ್ಸವ ಎಂದು ಕನ್ನಡ ಶಲ್ಯಗಳನ್ನು ಹೆಗಲಮೇಲೆ ಹಾಕಿಕೊಂಡು, ನವಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋಸ್ತವಗಳನ್ನು ಆಚರಿಸುವ ನಮ್ಮ ಜನ ಕಣ್ತರೆಯಬೇಕಾಗಿದೆ. ನಮ್ಮ ಹಡೆದವ್ವ ಬೀದಿಗೆ ಬಂದಿದ್ದರೆ, ಪರದವ್ವ ಮನೆಯೊಳಗೆ ವಿಜೃಂಭಿಸುತ್ತಿದ್ದಾಳೆ.

ಏನಾಗಿದೆ ಕನ್ನಡದ ಸ್ಥಿತಿ! ಗತಿ? ಕನರ್ಾಟಕದ ರಾಜಧಾನಿಯಲ್ಲೇ ಕನ್ನಡ ಬೀದಿಗೆ ಬಿದ್ದಿದೆ.  ಅಪ್ಪ-ಅಜ್ಜ-ಮುತ್ತಜ್ಜರ ಕಾಲದಿಂದಲೂ ಇಲ್ಲಿಯೇ ನೆಲೆಸಿರುವ ಕನ್ನಡಿಗ ತನ್ನ ಮನೆಯಲ್ಲೇ ತಾನು ಪರಕೀಯನಾಗಿದ್ದಾನೆ.  ಇವನ ಮನೆಯ ನೆರೆಯಲ್ಲಿ ದೂರದ ಕೇರಳದಿಂದ ಬಂದಿರುವ ಮಲೆಯಾಳಿ ತನ್ನ ವ್ಯವಹಾರವನ್ನು ವೃದ್ಧಿಸಿಕೊಳ್ಳುತ್ತಲೇ ಇರುತ್ತಾನೆ. ಸಕರ್ಾರಿ ಕಛೇರಿಗಳಲ್ಲೂ ಅವನ ಕೆಲಸ ಸುಗಮವಾಗಿ ನಡೆಯುತ್ತದೆ. ಬ್ಯಾಂಕುಗಳಲ್ಲೂ ಅವನಿಗೆ ಎಲ್ಲ ಸೌಲಭ್ಯಗಳು ದೊರೆಯುತ್ತವೆ. ಪಾಪ! ಬಡ ಕನ್ನಡಿಗ ತಾಲ್ಲೂಕು ಕಛೇರಿಯಲ್ಲಿ ಒಂದು ಆದಾಯ ಪತ್ರ ಮಾಡಿಸಿಕೊಳ್ಳಲೂ ಹೆಣಗಾಡುತ್ತಿದ್ದಾಗ, ಅವನ ಮುಂದೆಯೇ ಅವನ ನೆರೆಯವ, ಬೆಂಗಳೂರಿಗೆ ಬಂದು ನಾಲ್ಕೈದು ತಿಂಗಳಾಗಿದ್ದರೂ ತನ್ನ ಕೆಲಸವನ್ನು ಸುಸೂತ್ರವಾಗಿ ಮಾಡಿಸಿಕೊಳ್ಳುತ್ತಾನೆ.  ಅವನಿಗೆ ತಾಲ್ಲೂಕು ಕಛೇರಿ ಎನ್.ಓ.ಸಿ., ನೀಡುತ್ತದೆ; ಬಿಡಿಎ ಸೈಟು ಕೊಡುತ್ತದೆ; ಬ್ಯಾಂಕ್ ಸಾಲ ನೀಡುತ್ತದೆ; ಮಾಫಿಯಾ ರಕ್ಷಣೆ ಕೊಡುತ್ತದೆ.  ಈ ಕನ್ನಡಿಗ ಆದಾಯಪತ್ರ ತರಲು ಹತ್ತು ಹದಿನೈದು ದಿನಗಳು ಕಂಬ-ಕಂಬಗಳ ಸುತ್ತಿ, ಬ್ಯಾಂಕಿಗೆ ಬರುವಷ್ಟರಲ್ಲಿ ತಲೆ ತಿರುಗಿ ಬಿದ್ದಿರುತ್ತಾನೆ. ಸಿದ್ಧರಾಮಯ್ಯನವರ  ಒಂದು ರೂಪಾಯಿಯ ಅನ್ನಭಾಗ್ಯ ಬಹುತೇಕ ವಲಸಿಗರ ಪಾಲಾಗಿದೆ. ಕನ್ನಡಿಗರಿಗೆ ಆ ರೇಷನ್ಕಾಡರ್್ ದೊರೆಯುವುದಿಲ್ಲ. ಇದು ಕನ್ನಡಿಗನ ಕಥೆಯಲ್ಲ; ಕನ್ನಡಮ್ಮನ ಸ್ಥಿತಿ.

ಬನ್ನಿ, ನೀವು ಬೆಂಗಳೂರಿನ ಸಕರ್ಾರಿ ಕಛೇರಿಗಳಿಗೆ.  'ಏಮ್ಮಂಡಿ' ಎಂದು ರಾಗ ತೆಗೆದವ ಸರಾಗವಾಗಿ ಒಳನುಗ್ಗಿ ಹೊರ ಬರುತ್ತಾನೆ. 'ವಾಕಾರು! ವಾಂಗ' ಎಂದವ ಕಛೇರಿಯನ್ನೇ ತನ್ನದಾಗಿಸಿಕೊಳ್ಳುತ್ತಾನೆ. ಇನ್ನು ವ್ಯಾಪಾರವೇ ದಂಧೆಯಾಗುಳ್ಳ ಮಾವರ್ಾಡಿ ಮಂದಿ ಸಮಗ್ರ ಕಟ್ಟಡವನ್ನೇ ವಶೀಕರಿಸಿಕೊಳ್ಳುತ್ತಾರೆ. ಸಾರ! ಎಂದವ, ಸ್ವಾಮಿ ಎಂದವ! ಪಾಪ ಮಣ್ಣನ್ನೇ ತಿನ್ನುತ್ತಾನೆ. ಕನ್ನಡದ ಸ್ಥಿತಿ ಇದಾಗಿದೆ. ಪರಭಾಷಿಕ ನೌಕರರು ತಮ್ಮತಮ್ಮವರನ್ನು ಆದರಿಸಿ ಕೆಲಸ ಮಾಡಿಕೊಡುತ್ತಾರೆ; ದಬಾಯಿಸಿ ಕಾರ್ಯ ನಿರ್ವಹಿಸುತ್ತಾರೆ. ನಮ್ಮ ಕನ್ನಡದ ನೌಕರರು ವ್ಯಾಮೋಹದ ಬಲೆಗೆ ಸಿಲುಕದೆ ಕನ್ನಡಿಗರನ್ನೇ ದೂರ ಇಡುತ್ತಾರೆ. ಕ್ಯಾ ಸಾಬ್! ಎಂದವರನ್ನು ಪ್ರೀತಿಸುತ್ತಾರೆ.

ಇದು ರಾಜ್ಯ ಸಕರ್ಾರಿ ಕಛೇರಿಗಳ ಕತೆಯಾದರೆ, ಕೇಂದ್ರ ಕಛೇರಿಗಳಂತೂ ಕೇಳುವುದೇ ಬೇಡ.  ಯಾವುದೋ ದ್ವೀಪಕ್ಕೆ ಹೋದ ಹಾಗೆ ಭಾಸವಾಗುತ್ತದೆ. ಕಛೇರಿಯ ಮುಂಭಾಗಿನಲ್ಲೇ ಒಂದು ಕಪ್ಪು ಹಲಗೆಯ ಮೇಲೆ ದಿನವೂ 'ಹಿಂದಿ' ಕಲಿಸಲಾಗುತ್ತದೆ. ಇಂಗ್ಲೀಷನ್ನು ನಾವು ಕಲಿತೇ ಇರುತ್ತೇವಲ್ಲಾ ! ಕನ್ನಡ ಅವರಿಗರ್ಥವಾಗುವುದಿಲ್ಲ. ಹಿಂದಿ-ಇಂಗ್ಲೀಷ್, ತಮಿಳು-ತೆಲುಗು-ಮಲೆಯಾಳಿ-ಮರಾಠಿ ನಮಗೆ ಬರುವುದಿಲ್ಲ. ನಮ್ಮ ಕತೆ ಮತ್ತೆ ವ್ಯಥೆಯೇ!

ಇದು ಸಕರ್ಾರಿ ಕಛೇರಿಗಳ ಗೋಳಾದರೆ, ಉದ್ಯಮ ವಲಯದತ್ತ ಬರೋಣ. ಇಂದು ಬೆಂಗಳೂರು ಕನ್ನಡದಿಂದ ಸಂಪೂರ್ಣ ಮುಕ್ತವಾಗಿದೆ. 'ಕನ್ನಡ ರಹಿತ ವಲಯ' ಬೆಂಗಳೂರು ಉದ್ಯಮದ್ದಾಗಿದೆ.  ಮೊದಲು ಚಿಕ್ಕಪೇಟೆಯ ಆಸುಪಾಸು ವಹಿವಾಟನ್ನು ಆರಂಭಿಸಿದ ಗುಜರಾತಿ-ರಾಜಸ್ಥಾನಿಗಳು ಇಂದು ನಗರದ ವಿವಿದ ಬಡಾವಣೆಗಳಲ್ಲಿ, ಕೊಳಚೆ ಕೊಳಗೇರಿಗಳಲ್ಲಿ ಹಿಡಿತ ಸಾಧಿಸಿದ್ದಾರೆ.  ಎಲ್ಲೆಲ್ಲೂ ಬನಿಯಾಗಳ ಕಾಟ ಹೆಚ್ಚಾಗಿದೆ.  ನಮ್ಮ ಮನೆಯ ಸಮೀಪದಲ್ಲೇ ಓರ್ವ ದಿಲ್ಲಿವಾಲಾ ಒಂದು ಅಂಗಡಿಯನ್ನು ತೆರೆದ.  ಪುಸ್ತಕದಂಗಡಿ. ಘನ ಕನರ್ಾಟಕ ಸಕರ್ಾರಕ್ಕೆ ಈಗ ಅವನು ಪುಸ್ತಕಗಳನ್ನು - ಇತರೆ ಸಾಮಗ್ರಿಗಳನ್ನು ಸರಬರಾಜು ಮಾಡುತ್ತಾನೆ.  ಅವನು 'ಕ್ಯಾ ಭಾಯ್ ಎಂದೊಡನೆ ನಮ್ಮ ಮಂದಿ ಕೌಬಾಯ್ಗಳಾಗುತ್ತಾರೆ. ಅವನಿಗೆ ಕನ್ನಡ ಈಗ ತೋಡ ತೋಡ ಬರ್ತಿದೆ. ಆದರೂ ಅವನು ಮಾತನಾಡುವುದು ಕೇವಲ ಹಿಂದಿ ಮಾತ್ರ.

ಮೊದಲು ಕೇವಲ ಗಿರವಿ ಅಂಗಡಿಯಲ್ಲಿದ್ದ ಉತ್ತರ ಭಾರತೀಯರು ಇಂದು ವ್ಯಾಪಾರದ ಪ್ರತಿಯೊಂದು ಭಾಗದಲ್ಲೂ ಏಕಸ್ವಾಮ್ಯ ಸಾಧಿಸಿದ್ದಾರೆ. ಎಲೆಕ್ಟ್ರಿಕ್ನಿಂದ ಮುದ್ರಣದವರೆಗೂ, ಪ್ರಾವಿಷನ್ ಸ್ಟೋರ್ಸ್ನಿಂದ ಗ್ರಾನೈಟ್ನವರೆಗೂ ಅವರದೇ ಪಾರುಪತ್ಯ. ಅದಕ್ಕೂ ವಿಶೇಷವೆಂದರೆ ಇಂದು ಬೆಂಗಳೂರು ಮಹಾನಗರದ ವಿವಿಧ ಬಡಾವಣೆಗಳಲ್ಲಿ ಅವರು ಆಸ್ತಿ ಸಂಪಾದಿಸುತ್ತಿರುವುದು.  ಮೊದಲು ಬೆಂಗಳೂರಿನ ಹೃದಯಭಾಗಗಳಾದ ಅಕ್ಕಿಪೇಟೆ, ಅರಳೇಪೇಟೆ, ಮಾಮೂಲ್ಪೇಟೆ, ಗಾಣಿಗರ ಪೇಟೆ, ನಗರ್ತರ ಪೇಟೆ . . .. . . .  ಮೊದಲಾದ ಭಾಗಗಳಲ್ಲಿದ್ದ ಕನ್ನಡಿಗರು ತಮ್ಮ ಆಸ್ತಿಪಾಸ್ತಿಯನ್ನು ಮಾರ್ವಾಡಿಗಳಿಗೆ ಮಾರಿ ವಿಜಯನಗರ, ಜಯನಗರ, ರಾಜಾಜಿನಗರ, ಬಸವೇಶ್ವರನಗರ . . . .  ಮುಂತಾದ ಕಡೆ ಬಂದವರು. ಈಗ ಅದೇ ಕನ್ನಡಿಗರ ಮುಂದಿನ ತಲೆಮಾರು ಈ ಬಡಾವಣೆಗಳ ತಮ್ಮ ಆಸ್ತಿಪಾಸ್ತಿಗಳನ್ನು ಅದೇ ರಾಜಸ್ಥಾನಿಗಳಿಗೆ ಮಾರಿ ಮಾಗಡಿರಸ್ತೆಯ ತಾವರೆಕೆರೆ ಸಮೀಪ, ತುಮಕೂರು ರಸ್ತೆಯ ನೆಲಮಂಗಲ ಹತ್ತಿರ, ಕನಕಪುರ ರಸ್ತೆಯ ಹಾರೋಹಳ್ಳಿಗೆ ಸಮೀಪ, ಹೈದರಾಬಾದ್ ರಸ್ತೆಯ ದೊಡ್ಡಬಳ್ಳಾಪುರದ ಪಕ್ಕ, ಮೈಸೂರು ರಸ್ತೆಯ ರಾಮನಗರದಿಂದ ಆಚೆ ನಿವೇಶನಗಳನ್ನು ಖರೀದಿಸಿ ಗುಡಿಸಲು ಕಟ್ಟುತ್ತಿದ್ದಾರೆ.

ಇದು ಸಾಮಾನ್ಯ ಬೆಂಗಳೂರು ಮಹಾನಗರದ ಕಥೆಯಾದರೆ, ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನ ಕಥೆ ಮತ್ತಷ್ಟು ಭೀಕರ.  'ಬಂದವೋ ಬಂದವೋ! ಐಟಿ ಕಂಪನಿಗಳು ಬಂದವೋ! ಇಲ್ಲಿಯ ನೆಲ ಜಲ ಶಕ್ತಿಯ ಹೀರಿ ಬೆಳೆದವೊ! ಕನ್ನಡಿಗರಿಗೆ ಚಿಪ್ಪು ಕೊಟ್ಟು ಬಂಗಾರ ಉಂಡವೋ!'.  ಕಣ್ಣ ಮುಂದೆಯೇ ಬೆಂಗಳೂರು ಐಟಿ ಕನ್ನಡೇತರರಿಂದ ತುಂಬಿ ತುಳುಕುತ್ತಿದೆ.  ಎಲ್ಲ ಕಂಪನಿಗಳಲ್ಲೂ ಕನ್ನಡಿಗರು ಅಲ್ಪಸಂಖ್ಯಾತರು.  ಉತ್ತರ ಭಾರತೀಯರೆಂದರೆ ಕೇವಲ ಮಾರ್ವಾಡಿಗಳು - ಗುಜರಾತಿಗಳು ಎಂದು ಭಾವಿಸಿದ್ದ ಅಭಿಪ್ರಾಯ ಬದಲಾಗಿ ಬಿಹಾರಿಗಳು, ಬಂಗಾಳಿಗಳು, ಹಿಂದಿಗರು ಎಲ್ಲರೂ ಬೆಂಗಳೂರಿಗೆ ಲಗ್ಗೆ ಇಟ್ಟಿದ್ದಾರೆ. ಇಲ್ಲಿಯ ನೆಲಜಲವನ್ನು ಹೀರಿಕೊಂಡು ತಂಪಾಗಿದ್ದಾರೆ. ಮದ್ಯ-ಮಾನಿನಿಯರ   ಸೇವೆ ಹೆಚ್ಚಾಗಿ; ಕನ್ನಡ ಸಂಸ್ಕೃತಿ ನೆಲ ಕಚ್ಚುತ್ತಿದೆ. ಭೂಮಿಯ ಬೆಲೆ ಹಿರಿದಾಯ್ತು; ಬಾಡಿಗೆ ಬೆಲೆ ಹೆಚ್ಚಾಯ್ತು; ಬದುಕು ಸಾಗಿಸುವುದು ಕಷ್ಟವಾಯ್ತು; ಇದು ಸಿಲಿಕಾನ್ ಸಿಟಿಯ ಕೊಡುಗೆ.  ಎತ್ತೆತ್ತ ನೋಡಿದರತ್ತತ್ತ ಬಹುಮಹಡಿಗಳ ಸಾಲು; ಅದರಲ್ಲಿ ತುಂಬಿರುವವರು ಬರೀ ಭಾರತೀಯರು; ಸಾವಿರಕ್ಕೆ ಒಂದು ಕನ್ನಡಿಗರಿಲ್ಲ.  ಸ್ಥಳೀಯ ಜನಗಳ ಅನ್ನವನ್ನು ಕಿತ್ತುಕೊಂಡು ಪಬ್-ಹಬ್ಗಳಲ್ಲಿ ಮೆರೆದಾಡಿ ಶೂಟೌಟ್ಗಳನ್ನು ಬೆಂಗಳೂರಿಗೆ ತಂದ ಹಿರಿಮೆ ಈ ಭಾರತೀಯರದು.  ಉದಾರೀಕರಣದ ಕೊಡುಗೆಯಿಂದ ರಾಜಧಾನಿಯಲ್ಲಿ ಕನ್ನಡಿಗರು ಮತ್ತಷ್ಟು ಅನಾಥರು.

ಬರೀ ಸಾಫ್ಟ್ವೇರಷ್ಟೇ ಬೆಂಗಳೂರನ್ನು ಹೀರುತ್ತಿದೆ ಎಂದು ಭಾವಿಸದಿರಿ! ಇದೀಗ ಬೆಂಗಳೂರಿನಲ್ಲಿ ಮತ್ತಷ್ಟು ಭಾರತೀಯರು ತುಂಬಿದ್ದಾರೆ. ಜಾರ್ಖಂಡ್ನ ಕಾಮರ್ಿಕವಲಯ ಬೆಂಗಳೂರಿನಲ್ಲಿದೆ.  ಛತ್ತಿಸ್ಗಡದ ಶ್ರಮಿಕವರ್ಗ ಹರಿದಾಡುತ್ತಿದೆ. ಈಶಾನ್ಯಭಾಗಗಳ ಭಾರತೀಯರು ಬೆಂಗಳೂರಿನಲ್ಲಿ ಅಲೆದಾಡುತ್ತಿದ್ದಾರೆ. ನಮ್ಮ ಮನೆಯ ಗ್ರಾನೈಟ್ ಹಾಕುವವರು ಅವರು. ನಮ್ಮ ಮನೆಯ ಮರಗೆಲಸವನ್ನು ಡಿಸೈನ್ ಡಿಸೈನಾಗಿ ಕೆತ್ತುವವರು ಅವರು, ಕೊನೆಗೆ ನಮ್ಮ ಮನೆಗೆ ಅಂದ ಚಂದದ ಬಣ್ಣವನ್ನು ಬಳಿಯುವವರು ಅವರು. ಏಕೆಂದರೆ ನಾವು ಸೋಮನ ವಂಶಸ್ಥರು; ಸೋಮಾರಿಗಳು. ನಮಗೆ ಮೈ ಬಗ್ಗುವ ಹಾಗಿಲ್ಲ, ಅವರಿಗೆ ನಮ್ಮ ದುಡ್ಡು ಸೇರುತ್ತಾ ಹೋಗುತ್ತಿದೆ. ಬರಿಗೈಯಲ್ಲಿ ಬಂದವ ಇಲ್ಲೇ ಮನೆ ಕಟ್ಟುತ್ತಾನೆ, ಸಾಧ್ಯವಾದರೆ ಭೂಮಿಯನ್ನು ಕೊಳ್ಳುತ್ತಾನೆ. ಕೊನೆಗೆ ಸೋಮಾರಿಗಳಾದ ನಾವು ಅವನ ಬಳಿಯಲ್ಲಿ ದಿನಗೂಲಿಗೆ ಹೋಗುತ್ತೇವೆ.

ಇದು ರಾಜಧಾನಿ ಬೆಂಗಳೂರಿನ ಕತೆಯಾದರೆ, ಉಳಿದ ಭಾಗಗಳತ್ತ ಕಣ್ಣು ಹಾಯಿಸೋಣ.  ಶೌರ್ಯದ ಬೀಡು ಕೊಡಗಿನಲ್ಲಿ ಇಂದು ಪ್ರತ್ಯೇಕತೆಯ ಕೂಗೆದ್ದಿದೆ.  ಕಾರಣವಾದರೂ ಏನು? ಸಿರಿಮನೆಯ ಸಂಪತ್ತಾಗಿದ್ದ ಕೊಡಗು ಮಲೆಯಾಳಿಗಳ ಪಾಲಾಗಿದೆ.  ಸಕರ್ಾರಿ ಯಂತ್ರ ಹೊರನಾಡಿಗರೊಂದಿಗೆ ಶಾಮೀಲಾಗಿ ತನ್ನ ಅಪೂರ್ವ ಸಂಪತ್ತನ್ನು ಬಲಿಕೊಟ್ಟಿದೆ. ತನ್ನದೇ ಮನೆಯ, ತನ್ನದೇ ತೋಟದ ಮೇಲೆ ಕೊಡಗರಿಗೆ ಹಕ್ಕು ಸಾಧಿಸಲು ಸಾಧ್ಯವಾಗುತ್ತಿಲ್ಲ. ಪರಕೀಯ ಭಾವನೆಯಲ್ಲಿ ಅವರು ತೊಳಲಾಡುತ್ತಿದ್ದಾರೆ.  ಟೀ ಅಂಗಡಿ ಇಟ್ಟುಕೊಳ್ಳಲು ಬಂದವ ಇಡೀ ಟೀ ತೋಟಗಳನ್ನೇ ನಡೆಸುತ್ತಿದ್ದಾನೆ.  ಪಂಚರ್ ಹಾಕಲು ಬಂದವ ರಬ್ಬರ್ ತೋಟಗಳನ್ನು ನಡೆಸುತ್ತಿದ್ದಾನೆ. ಅಲ್ಲಿ ಮಲೆಯಾಳಿಗಳದ್ದೇ ದಬರ್ಾರು.

ರಾಜಧಾನಿಗೆ ಸಮೀಪವಿರುವ ಕೋಲಾರ ಜಿಲ್ಲೆಯಲ್ಲಿ ತೆಲುಗಿನದೇ ಪಾರುಪತ್ಯ.  ಎಲ್ಲೆಲ್ಲಿ ನೊಡಿದರಲ್ಲಿ ಚಿರಂಜೀವಿ, ನಾಗಾಜರ್ುನ, ಬಾಲಕೃಷ್ಣರೇ ಕಾಣುತ್ತಾರೆ.    ಮೊದಲಿದ್ದವರು ಎನ್ಟಿಆರ್-ನಾಗೇಶ್ವರರಾವ್.  ಕೋಲಾರ ಚಿನ್ನದ ಗಣಿಯಂತೂ ತಮಿಳು ಪಾಳೆಯಪಟ್ಟು. ಡಿವಿಜಿ - ವಿಶ್ವೇಶ್ವರಯ್ಯನವರ ಜನುಮದ ಬೀಡು ಎಂಬುದಷ್ಟೇ ನಮ್ಮ ಸಮಾಧಾನ.

ಅಚ್ಚಕನ್ನಡ ನಾಡು ತುಮಕೂರು ಗಡಿ ದಾಟುವ ಮುನ್ನವೇ, ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಪ್ರಾರಂಭವಾಗುವ ತಮಿಳುಮಯವು ವೇದಾವತಿ ಕೃಪೆಯಿಂದ ಮತ್ತಷ್ಟು ಬೆಳೆದು ಮಾರಿಕಣಿವೆಯಾಗಿ ಹಿರಿಯೂರನ್ನು ತಿಂದಿದೆ; ಭದ್ರಾವತಿಯ ಕಬ್ಬಿಣ ಕಾಖರ್ಾನೆಗಷ್ಟೇ ಸೀಮಿತವಾಗದೆ ಸುತ್ತಮುತ್ತಲ ಕನ್ನಡ ನೆಲೆಗಳನ್ನೇ ನುಂಗಿಕೊಂಡಿದೆ.  ಕನರ್ಾಟಕದ ಉಕ್ಕಿನ ಭೂಮಿ ಭದ್ರಾವತಿಯಲ್ಲಿ ದ್ರಾವಿಡ ಕಳಗಂಗಳ ಧ್ವಜ ಹಾರಾಡುತ್ತಿರುತ್ತದೆ.

ಮಾನ್ಯ ನಿವೃತ್ತ ಲೋಕಾಯುಕ್ತರು ಪ್ರಸ್ಥಾಪಿಸಿರುವ ರಿಪಬ್ಲಿಕ್ ಆಫ್ ಬಳ್ಳಾರಿಯಂತೂ ಕನ್ನಡ ರಾಜ್ಯ ರಮಾರಮಣ ಕೃಷ್ಣದೇವರಾಯನ ಹಾದಿಯಲ್ಲಿ ಎಂದೋ ಸಾಗಿದೆ. ಕನ್ನಡ ಸಾಮ್ರಾಜ್ಯವನ್ನು ತೆಲುಗುಮಯವಾಗಿ ಮಾಡಿದ ಸಾಳ್ವ ನರಸನಾಯಕನ ಉತ್ತರಾಧಿಕಾರಿ ತುಳುವ ಕೃಷ್ಣದೇವರಾಯನಷ್ಟೇ ಆಸಕ್ತಿಯಿಂದ ಗಣಿಧಣಿ ಜನಾರ್ಧನರೆಡ್ಡಿಗಾರು ತಮ್ಮ ಆಪ್ತಮಿತ್ರ ಶ್ರೀರಾಮುಲು ಜೊತೆಗೂಡಿ ತಿರುಪತಿಯತ್ತ ಮುಖಮಾಡಿ ಇಡೀ ಬಳ್ಳಾರಿಯನ್ನೇ ಬೋಳಿಸಿ ಇದೀಗ ಶ್ರೀಕೃಷ್ಣ ಜನ್ಮಸ್ಥಾನದಲ್ಲಿದ್ದಾರೆ.  `

ಸಮೃದ್ಧ ತುಂಗಭದ್ರೆಯ ಬೀಡು ಆಂಧ್ರದ ಹಣಗಾರರ ಪಾಲಾಗಿದೆ. ಅಲ್ಲಿಯ ಮಂದಿ ಇಲ್ಲಿ ಪಾಳೆಯಪಟ್ಟುಗಳನ್ನು ಕಟ್ಟಿ ವಿಜೃಂಭಿಸುತ್ತಿದ್ದಾರೆ. ಕನ್ನಡದ ಮಂದಿ ಅವರುಗಳ ಅಡಿಯಾಳಾಗಿ ಕೆಲಸ ಮಾಡುತ್ತಾರೆ. ಇಲ್ಲೆಲ್ಲಾ 'ಎಮಂಡಿಗಳದ್ದೇ' ದಬರ್ಾರು.  ಕೃಷ್ಣ ಯೋಜನೆಗಳಲ್ಲಂತೂ ರೆಡ್ಡಿಗಾರುಗಳದ್ದೇ ಮಾತು.  ಇಲ್ಲಿಯ ಹಣವನ್ನೇ ಇಲ್ಲಿಯವರಿಗೆ ಸೋಂಕಿಸಿ ತಮ್ಮ ಜೀಬಿಗಿಳಿಸಿ ಆಂಧ್ರದ ಹಿತ ಕಾಯುತ್ತಾರೆ. ನಮ್ಮ ಅಧಿಕಾರದ ಮಂದಿ ಕಮೀಷನ್ಗಳಲ್ಲೇ ತೃಪ್ತಿಪಟ್ಟುಕೊಳ್ಳುತ್ತಾರೆ.

ಆಗಾಗ್ಗೆ ಪ್ರತ್ಯೇಕತಾವಾದವನ್ನು ಹುಟ್ಟಿಹಾಕುವ ಹೈದ್ರಾಬಾದ್ ಕನರ್ಾಟಕ, ಕ್ಷಮಿಸಿ ಕಲ್ಯಾಣ ಕನರ್ಾಟಕದ ಬಗ್ಗೆ ಹೇಳುವುದೇ ಬೇಡ. ಸಕರ್ಾರದ ಕೋಟಿ ಕೋಟಿಗಳು ಅಲ್ಲಿ ಹರಿದಾಡಿದ್ದರೂ ಸರಿಯಾದ ರಸ್ತೆಯಿಲ್ಲ, ವ್ಯವಸ್ಥೆಯಿಲ್ಲ. ಎಲ್ಲ ನಾಯಕರು ರಾಜಧಾನಿ ಬೆಂಗಳೂರಿನಲ್ಲಿ ಬಂಗಲೆಗಳನ್ನು ಕಟ್ಟಿಕೊಂಡಿದ್ದಾರೆ.  ಮುಖ್ಯಮಂತ್ರಿಗಳಾಗಿ, ಕೇಂದ್ರಮಂತ್ರಿಗಳಾಗಿ ಮೆರೆಯುತ್ತಿರುವ ಈ ಭಾಗದ ನಾಯಕರುಗಳ ಕನ್ನಡ ಭುವನೇಶ್ವರಿಗೆ ಪ್ರೀತಿ. ಅದು ತೆಲುಗೋ, ಉದರ್ುವೋ, ಮರಾಠಿಯೋ ದೇವರಿಗೆ ಗೊತ್ತು. ಬಸವಣ್ಣನ ನಾಡೆಂಬುದಷ್ಟೇ ಸಮಾಧಾನ.  

ಇನ್ನು ಕಿತ್ತೂರು ಚೆನ್ನಮ್ಮನ ನಾಡನ್ನು ಕೇಳುವುದೇ ಬೇಡ! ಅವರು ವೀರರು - ಧೀರರು - ಶೂರರು; ನಾವು ವೀರ ಅಭಿಮನ್ಯುವಿನ ಬಾವಮೈದುನರು.  ವಿಶ್ವಸಮ್ಮೇಳನದ ಹೆಸರಿನಲ್ಲಿ ಕೋಟಿ ಕೋಟಿಗಳನ್ನು ತಿಂದು ಹಾಕಿದ್ದೇ ನಮ್ಮ ಸಾಧನೆ. ಬಾಯಿಗೆ ಬಂದಂತೆ ಬೊಗಳುವ ಒಂದು ನಾಯನ್ನಾದರೂ ಹಿಡಿದು ಸಂತಾನನಿರೋಧ ಲಸಿಕೆ ಚುಚ್ಚುವ ಶಕ್ತಿ ನಮ್ಮದಲ್ಲ. ಲಕ್ಷಾಂತರ ರೂಪಾಯಿಗಳ ಜಾಹಿರಾತನ್ನು ಝಾಂಡಾಗಳಿಗೆ ನೀಡುವ ಕನರ್ಾಟಕ ಸಕರ್ಾರ ತನ್ನದೇ ದುಡ್ಡಿನಲ್ಲಿ ಮುಖ ಕುಯ್ಯಿಸಿಕೊಳ್ಳುತ್ತದೆ. ಓಟಿಗಾಗಿ ಅಲ್ಲಿಯ ನಾಯಕರು ಬಾಯಿ ಮುಚ್ಚಿಕೊಳ್ಳುತ್ತಾರೆ. ಕಿರುಚಿಕೊಳ್ಳುವವರೆಲ್ಲ ಬೆಂಗಳೂರಿನ ಹೊರಾಟಗಾರರು. 

ಮಾದರಿ ಮೈಸೂರು ಸಂಸ್ಥಾನದ ಮೈಸೂರು ಜಿಲ್ಲೆ ಇದೀಗ ಎರಡಾಗಿದೆ. ಮೈಸೂರು ಜಿಲ್ಲೆಯ ನಂಜನಗೂಡಿನಿಂದ ಪ್ರಾರಂಭವಾಗುವ ತಮಿಳುಯಾಣವು ಚಾಮರಾಜ ನಗರದ ಮಲೆಯ ಮಹದೇಶ್ವರನನ್ನು ಸುತ್ತುವರಿದು ಹಬ್ಬಿದೆ. ಅಲ್ಲೆಲ್ಲಾ ಅವರು ಅಗತ್ಯ - ಅತ್ಯಗತ್ಯ. ಮೈಸೂರಿನಲ್ಲಿ  ತಾಯಿ ಭುವನೇಶ್ವರಿಯು ಚಾಮುಂಡೇಶ್ವರಿಯಲ್ಲಿ ಐಕ್ಯಳಾಗಿರುವುದಂತೂ ಸತ್ಯ.

ಕರಾವಳಿಯ ಉತ್ತರ ಮಂದಿ ಕೊಂಕಣಿಯನ್ನು ನೆನೆಯುತ್ತಾ ಸಾಧ್ಯವಾದರೆ! ಎನ್ನುತ್ತಿದ್ದರೆ; ಕರಾವಳಿಯ ದಕ್ಷಿಣ ಮಂದಿ ಯಕ್ಷಗಾನಕ್ಕಾಗಿ ಪ್ರತ್ಯೇಕ ಅಕಾಡೆಮಿ ಸ್ಥಾಪಿಸಿದಂತೆ  ತುಳುನಾಡಿನ ಕನಸನ್ನು ಆಗಾಗ್ಗೆ ಮೆಲುಕು ಹಾಕುತ್ತಾರೆ. ವಿಶ್ವದೆಲ್ಲೆಡೆ ಇರುವ ನಮ್ಮ ಜನ ಇವರು ಸಾಧ್ಯವಾದಷ್ಟು ಭಾತೃತ್ವವನ್ನು ಸಾರುತ್ತಾರೆ. 'ನುಡಿಸಿರಿ'ಯ ಕಂಪು ಮಾತ್ರ ಹರಡುತ್ತಿರುತ್ತದೆ. 

ಅತ್ತ ಮಹಾರಾಷ್ಟ್ರ ಗಡಿವಿವಾದವನ್ನು ಮತ್ತೆ ಮತ್ತೆ ಕೆಣಕುತ್ತಾ 'ಸುಪ್ರೀ'ವರೆಗೂ ಹೋಗಿದೆ. ಇತ್ತ ತಮಿಳುನಾಡು ಕಾವೇರಿ ನಮ್ಮದು, ನಮಗಾಗಿ ಕಟ್ಟಿರುವುದು ಕನ್ನಂಬಾಡಿ ಎನ್ನುತ್ತಿದೆ. ರಾಷ್ಟ್ರಕವಿ ಮಂಜೇಶ್ವರ ಗೋವಿಂದಪೈಗಳ ಕಾಸರಗೋಡನ್ನು ಇಬ್ಬಾಗಿಸಿ ಮಲೆಯಾಳಂ ಪ್ರಭುತ್ವವನ್ನು ಕೇರಳ ಪ್ರತಿಷ್ಠಾಪಿಸಿದೆ. ಆಂಧ್ರ ತಾನೇ ಕಿತ್ತಾಡುತ್ತಿದ್ದರೂ ತುಂಗಭದ್ರೆಯ ಅಣೆಕಟ್ಟು ನಮ್ಮದು, ಕೃಷ್ಣೆಯ ನೀರು ನಮ್ಮದು ಎಂದು ಅರಚಾಡುತ್ತಿದೆ. 

ಎಂಥ ನಾಡಿದು ಎಂಥ ಕಾಡಾಯಿತೋ!

ಹುಲುಸಾದ ಬೆಳೆ ಹೋಗಿ ಹುಲ್ಲುಕೊಳೆ ತುಂಬಿಹುದೋ!

ಹಗೆಯ ಹೆಸರನು ಕೇಳಿ ಹುಲಿಯಂತೆ ಹಸುಗೂಸು

ನೆಗೆದು ತೊಟ್ಟಿಲ ತುಳಿದು ಮೆಟ್ಟತಿಹ ನಾಡಿನಲಿ

ಹಗೆಯ ಊಳಿಗಗೊಂಡು ನಾಯಿ ಬಾಳಿಗಳೀದ

ಬಗೆಬಗೆಯ ಬಾಯ್ತೆರೆದು ಹೇಡಿ ನುಡಿ ಬೊಗಳುತಿಹುವೊ  . . . . .

ಹಿರಿಯ ಕವಿ ರಸಿಕರಂಗರು ಈ ನಾಡ ಸ್ಥಿತಿ ಕಂಡು ಆಲಾಪಿಸಿದ ಚಿತ್ರ ಅದೆಷ್ಟು ಅನ್ವರ್ಥಕ.  ಎಂಥಹ ನಾಡಿಗೆ ಅದೆಂತು ಸ್ಥಿತಿ.  ಹಡೆದವ್ವನನ್ನು ಬೀದಿಗೆ ತಳ್ಳಿ ಪರದೆವ್ವಗಳನ್ನು ಮನೆಯೊಳಗೆ ಕುಳ್ಳಿರಿಸಿಕೊಂಡಿರುವ ಕನ್ನಡಿಗರನ್ನು ಎಂತು ಬಣ್ಣಿಸಲಿ. ಇದಕ್ಕೆಲ್ಲ ಹೊಣೆ ಯಾರು? ಇದರಿಂದ ಕನ್ನಡಮ್ಮನನ್ನು ಪಾರು ಮಾಡಿ ಹಡೆದವ್ವನನ್ನು ಮನೆಯೊಳಗೆ ಮತ್ತೆ  ಪ್ರತಿಷ್ಠಾಪಿಸಿ ಪರದೆವ್ವಗಳನ್ನು  ಮಸಣಭೂಮಿಗೆ ಕಳುಹಿಸುವ ನಿಟ್ಟಿನ ಆಲೋಚನೆಯಲ್ಲಿ ನಿಮ್ಮಂತೆ ನಾನು . . .



ಸುದ್ದಿ ಓದಿ