ದೇಶದ ಹಿತಕ್ಕಾಗಿ ಯಾತ್ರೆ ಯಶಸ್ವಿಗೊಳಿಸಿ: ಸಿದ್ದು ಸವದಿ.
ಮಹಾಲಿಂಗಪುರ: ವಿದೇಶಿ ನೆಲದಲ್ಲಿ ನಿಂತು ತಾಯಿ ಭಾರತಾಂಬೆಯ ಮಾನ ಹರಾಜು ಹಾಕುತ್ತಿರುವ ರಾಹುಲ ಗಾಂಧಿಯಂಥವರಿಂದ ದೇಶವನ್ನು ರಕ್ಷಿಸಬೇಕಾಗಿದೆ, ಜಗತ್ತೇ ಮೆಚ್ಚಿದ ಮೋದಿಯವರ ಕೈ ಬಲಪಡಿಸಬೇಕಾಗಿದೆ ಆದ್ದರಿಂದ ಮಾ.14ರ ಮಂಗಳವಾರ ಜರುಗುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕನರ್ಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿದ್ದು ಸವದಿ ಹೇಳಿದರು.
ಸ್ಥಳೀಯ ಟೊಣಪಿನಾಥ ಸಾಂಸ್ಕೃತಿಕ ಭವನದಲ್ಲಿ ಕರೆದ ವಿಜಯ ಸಂಕಲ್ಪ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ನೆಚ್ಚಿನ ನಾಯಕರಾದ ಯಡಿಯೂರಪ್ಪ, ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ, ಸಿ.ಟಿ.ರವಿ,ಭೈರತಿ ಬಸವರಾಜ, ಅರುಣ ಶಹಾಪುರ ಮುಂತಾದ ನಾಯಕರ ನೇತೃತ್ವದಲ್ಲಿ ವಿಜಯ ಸಂಕಲ್ಪ ಯಾತ್ರೆ ಸಾಗಲಿದ್ದು ಇದು ದೇಶಭಕ್ತರ ಪರೀಕ್ಷಾ ಕಾಲ, ಎಲ್ಲಾ ಒಳ ಜಗಳಗಳನ್ನು ಬದಿಗಿಟ್ಟು ಪಕ್ಷಕ್ಕಾಗಿ ದುಡಿಯಿರಿ, ನಮ್ಮ ಮನೆಯ ಪಕ್ಷ ನಮಗೆ ಶ್ರೇಷ್ಠ. ಮೋದಿಜಿ ಮತ್ತು ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿ ಬಲ ತುಂಬಲಿದ್ದಾರೆ. ಬರುವ ಚುನಾವಣೆಯಲ್ಲಿ ತೇರದಾಳ ಮತ ಕ್ಷೇತ್ರದಲ್ಲಿ 25 ಸಾವಿರಕ್ಕೂ ಅಧಿಕ ಮತಗಳಿಂದ ನಮ್ಮ ಪಕ್ಷ ಜಯಶಾಲಿಯಾಗಲಿದೆ ಹಾಗಾಗಿ ಸರ್ವರೂ ಮೋದಿಜಿ ಆಡಳಿತ ಮತ್ತು ಪಕ್ಷದ ಮೇಲೆ ನಂಬಿಕೆ ಇಟ್ಟು ದುಡಿಯಿರಿ.ರಬಕವಿ ಬನಹಟ್ಟಿ, ತೇರದಾಳ ಮತ್ತು ಮಹಾಲಿಂಗಪುರ ಮಾರ್ಗವಾಗಿ ಸಾಗುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಸರ್ವರೂ ಭಾಗವಹಿಸಿ ಅದರಲ್ಲಿಯೂ ಮಹಿಳೆಯರು ರಥಯಾತ್ರೆಗೆ ಪುಷ್ಪವೃಷ್ಠಿ ಮಾಡುವುದರೊಂದಿಗೆ ಗೌರವಾರ್ಪಣೆ ಮಾಡಿ ಸ್ವಾಗತಿಸಿ, ಬೀಳ್ಕೊಡಬೇಕೆಂದು ಹೇಳಿದರು.
ಬಿಡಿಸಿಸಿ ಬ್ಯಾಂಕ್ ನಿದರ್ೇಶಕ ಬಸನಗೌಡ ಪಾಟೀಲ, ಪುರಸಭಾ ಅಧ್ಯಕ್ಷ ಬಸವರಾಜ ಹಿಟ್ಟಿನಮಠ, ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸುರೇಶ ಅಕ್ಕಿವಾಟ, ಪ್ರಧಾನ ಕಾರ್ಯದಶರ್ಿಗಳಾದ ಮಹಾಲಿಂಗಪ್ಪ ಕುಳ್ಳೊಳ್ಳಿ, ಆನಂದ ಕಂಪು, ಬಾಬಾಗೌಡ ಪಾಟೀಲ, ಅಶೋಕಗೌಡ ಪಾಟೀಲ, ಕಾಳವ್ವ ಕೇದಾರಿ, ಸುವಣರ್ಾ ಆಸಂಗಿ, ಮಹಾಲಿಂಗಪ್ಪ ಸನದಿ, ಶಿವಲಿಂಗ ಕೌಜಲಗಿ, ಜಿ.ಎಸ್.ಗೊಂಬಿ, ಅಶೋಕ ಅಂಗಡಿ, ಸಜನಸಾಬ ಪೆಂಡಾರಿ, ಗೌಡಪ್ಪಗೌಡ ಪಾಟೀಲ, ಪ್ರಭು ಪಾಲಬಾವಿ, ಬಸಪ್ಪ ಭಾಗೋಜಿ ಇತರರಿದ್ದರು