ಮಹಲಿಂಗಪುರ

ಕಷ್ಟ ಪಡೆದೆ ಯಾರು ಯಶಸ್ವಿಯಾಗಲು ಸಾಧ್ಯವಿಲ್ಲ :ಸಿದ್ದು ಸವದಿ

ಕಷ್ಟ ಪಡೆದೆ ಯಾರು ಯಶಸ್ವಿಯಾಗಲು ಸಾಧ್ಯವಿಲ್ಲ :ಸಿದ್ದು ಸವದಿ

ಮಹಾಲಿಂಗಪುರ ; ವಿದ್ಯಾರ್ಥಿಗಳೆ ನೀವು ನಿಮ್ಮ ತಂದೆ-ತಾಯಿ, ಗುರುಗಳ,ಸಮಾಜ, ನೆರೆಹೊರೆಯವರ ಋಣ ನಿಮ್ಮೇಲ್ಲರ ಮೇಲೆ ಬಹಳ ಇದೆ. ಇದನ್ನು ತೀರಿಸಬೇಕಾದರೆ ನೀವು ನಿಮ್ಮ ವಿದ್ಯಾರ್ಜನೆಯನ್ನು ಕಷ್ಟ ಪಟ್ಟು ಮಾಡಿ ಉನ್ನತ ಸ್ಥಾನ ಪಡೆದಾಗ ಮಾತ್ರ ಈ ಎಲ್ಲ ಋಣಗಳನ್ನು ತಿರಿಸಲು ಸಾಧ್ಯ ಅಲ್ಲದೆ ವಿದ್ಯಾರ್ಥಿಗಳು ಪಠ್ಯದ ಜೋತೆಗೆ ಪಠ್ಯೇತರ ವಿಷಯಗಳಲ್ಲಿಯೂ ಸಹ ಹೆಚ್ಚಿನ ಆಸಕ್ತಿ ಹೊಂದಿರಬೇಕು ಕಷ್ಟ ಪಡದೆ ಜೀವನದಲ್ಲಿ ಯಾರು ಮುಂದೆ ಬರಲು ಸಾಧ್ಯ ವಿಲ್ಲ  ಎಂದು ತೇರದಾಳ ಮತ ಕ್ಷೇತ್ರ ಶಾಸಕ ಸಿದ್ದು ಸವದಿ ಹೇಳಿದರು. 

  ಬುಧವಾರ ಮುಂಜಾನೆ ಸ್ಥಳೀಯ ದಿ.ಕೌಜಲಗಿ ನಿಂಗಮ್ಮ ಭವನದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ನಡೆದ ಶೈಕ್ಷಣಿಕ ಪಠೈತರ ಚಟುವಟಿಕೆಗಳ ಉಧ್ಘಾಟನಾ ಕಾರ್ಯಕ್ರಮವನ್ನು ಜ್ಯೋತಿಬೆಳಗಿಸುವ ಮೂಲಕ ಉಧ್ಘಾಟನೆ ಮಾಡಿ ಮಾತನಾಡಿದ ಅವರು ಇಂದಿನ ಶಿಕ್ಷಣದಲ್ಲಿ ಹೆಚ್ಚಿನ ಪಾಲು ವಿದ್ಯಾರ್ಥಿನಿಯರೆ ಮುಂದೆ ಇದ್ದಾರೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ಕಲಿತಂತೆ, ಹೆಣ್ಣು ಮಕ್ಕಳು ಶಾಲೆಯ ಕಲಿಯುವುದರಿಂದ ಸಮಾಜದ ಸುಧಾರಣೆ ಸಾಧ್ಯ. ನಿಮ್ಮಷ್ಟಕ್ಕೆ ನೀವೆ ಬೆಳೆಯದೆ ನಿಮ್ಮ ಜೋತೆ ಕಲಿತ ಶಾಲೆಯ ಬೆಳೆಸಿದ ಊರುಗಳಿಗೆ ಹೆಮ್ಮೆತರುವಂತೆ ಕೆಲಸ ನಿಮ್ಮಿಂದಾಗಬೇಕು. ಅಂದಾಗ ಮಾತ್ರ ನಿಮಗೆ ವಿದ್ಯೆ ಕಲಿಸಿದ ಗುರುಗಳಿಗೆ ಒಂದು ಅರ್ಥ ಬರುತ್ತದೆ.ಬೆಳೆವ ಸಿರಿ ಮೊಳಕೆಯಲ್ಲಿ ನೋಡು ಎಂಬಂತೆ ಈಗಿನಿಂದಲೆ ನಮ್ಮ ಭವಿಷ್ಯವನ್ನು ಕಟ್ಟಿಕೊಳ್ಳುವ ಕೆಲಸ ನಡೆಯಬೇಕು ಎಂದರು. 

   ನಂತರ ಮಾತನಾಡಿದ ನಿವೃತ್ತ ಪ್ರಾಚಾರ್ಯ ಎಸ್.ಎಂ ಶೇಖ ಎಲ್ಲಿ ಪ್ರೋತ್ಸಾಹಗಳು, ಅವಕಾಶಗಳು ಇರುವುದಿಲ್ಲವೋ ಅಲ್ಲಿ ಪ್ರತಿಭೆಗಳು ಹೊರಬರುವುದಿಲ್ಲ. ಪ್ರತಿಭೆಗಳ ಹೊರಬರಬೇಕಾದರೆ ಅವಕಾಶಗಳು ಬೇಕೆ ಬೇಕು, ಒಬ್ಬ ಮನುಷ್ಯ ಯಶಸ್ಸಿಯಾಗಲು ಶಿಸ್ತು,ಶೃದ್ದೆ, ಸಮರ್ಥಿಸಿಕೊಳ್ಳಬೇಕು, ದೃಡ ಸಂಕಲ್ಪ ಮಾರ್ಗ ಈ ಐದು ವಿಷಯಗಳನ್ನು ಸರಿಯಾಗಿ ತಿಳಿದಕೊಂಡು ಸತತ ಪ್ರಯತ್ನ ಮಾಡಿದಾಗ ಮಾತ್ರ ಯಶಸ್ಸು ಸಾಧ್ಯ. ಎಲ್ಲಿಯ ವರೆಗೆ ನೀವು ಒಂದು ಹೆಜ್ಜೆ ಮುಂದಿಡುವುದಿಲ್ಲವೋ ಅಲ್ಲಿಯ ವರೆಗೆ ಭಗವಂತನು ಕೂಡಾ ನಿಮಗೆ ಸಹಾಯ ಮಾಡಲಾರ. ಮಹಾತ್ಮರ ಜೀವನ ಚಿರಿತ್ರೆಗಳನ್ನು ಓದುವುದರ ಜೋತೆ ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡಾ ಮಾತ್ರ ಆ ಮಹನಿಯರ ಶ್ರಮ ಸಾರ್ಥಕವಾಗುತ್ತದೆ. ನಿಮ್ಮಲ್ಲಿರುವ ಶಕ್ತಿಯನ್ನು ರಚನಾತ್ಮಕವಾಗಿ ಬಳಸಿಕೊಳ್ಳಬೇಕು, ದುಷ್ಚಟಗಳಿಗೆ, ಮೋಬೈಲ ದಾಸರಾಗದೆ ಇವೇಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಓದಿದಾಗ ಮಾತ್ರ ನಿಮ್ಮ ಜೀವನದಲ್ಲಿ ಆದರ್ಶ ವ್ಯೆಕ್ತಿಗಳಾಗಿ ಬದುಕಲು ಸಾಧ್ಯ. ಶಿಕ್ಷಣವೆಂದರೆ ಬರಿ ಅಕ್ಷರ ಕಲಿಕೆ ಮಾತ್ರವಲ್ಲ, ಸುಸಂಕೃತನಾಗಿ, ಸಚ್ಚಾರಿತ್ರೆ ಬೆಳೆಸಿಕೊಂಡಾಗ ಮಾತ್ರ ನಿಮ್ಮ ಶಿಕ್ಷಣ ಪೂತರ್ಿಯಾದಂತೆ ಎಂದರು. 

 ಇದಕ್ಕೂ ಮುನ್ನ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಗಣ್ಯ ಮಾನ್ಯರನ್ನು ಹಾಗೂ ವಿದ್ಯಾರ್ಥಿಗಳನ್ನು ಶಾಲಾ ಸಿಬ್ಬಂದಿ ಸನ್ಮಾನ ಮಾಡಿ ಗೌರವಿಸಿದರು. 

  ನಂತರ ಪುರಸಭೆ ಮಾಜಿ ಅಧ್ಯಕ್ಷ ಜಿ.ಎಸ್ ಗೊಂಬಿ,ಪ್ರಾಚಾರ್ಯ ಎಸ್.ಆರ್ ನಾಯಕೋಡಿ   ಮಾತನಾಡಿದರು. ಡಾ.ಎಂ.ಪಿ ಚಕ್ರವರ್ತಿ  ಉಪನ್ಯಾಸ ಮಾಡಿದರು. ಕೆ.ಎಲ್.ಇ ಕಾಲೇಜಿನ ಪ್ರಾಚಾರ್ಯ ಡಿ.ಬಿ ಕೋಳಿ, ಪುರಸಭೆ ಸದಸ್ಯ ಶೇಖರ ಅಂಗಡಿ, ಕಾನಿಪ ಅಧ್ಯಕ್ಷ ಮಹೇಶ ಆರಿ, ಜಮೀರ ಯಕ್ಷಂಬಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಶಿವಾನಂದ ಹುಣಶ್ಯಾಳ, ಶ್ರೀಧರ ಕಾಗಿ,ನಂದು ಲಾತೂರ, ನಾರಾಯಣ ಗುಗ್ಗರಿ, ರಾಜೇಶ್ವರಿ ತುಕ್ಕಾನಟ್ಟಿ, ಪ್ರಶಾಂತ, ಎಸ್.ಪಿ ಮೇತ್ರಿ, ಸೇರಿದಂತೆ ಹಲವರು ಇದ್ದರು. ಸ್ವಾಗತಗೀತೆ ಅಮುಲ್ಯ ಕಂಬಾರ ಸಂಗಡಿಗರು ಹಾಡಿದರು. ಸ್ವಾಗತ ಎಸ್.ಸಿ ಬೊಮ್ಮನ್ನವರ, ನಿರೂಪಣೆ ಡಾ.ಎಸ್.ವ್ಹಿ. ಕಚ್ಚಿಡೋಣಿ, ವಂದನಾರ್ಪಣೆ ಆರ.ಎಂ ಬಿರಾದಾರ ಮಾಡಿದರು. 


ಸುದ್ದಿ ಓದಿ