ಮುದ್ದೆಬಿಹಾಲ್

ಬಿಜೆಪಿ ಪಕ್ಷ ಸಿದ್ದು ನಿಜ ಕನಸುಗಳು ಎಂಬ ಪುಸ್ತಕ ಬಿಡುಗಡೆ ಮಾಡುತ್ತಿರುವದು ಹಾಸ್ಯಾಸ್ಪದ: ಲೇಬಗೇರಿ

ಬಿಜೆಪಿ ಪಕ್ಷ  ಸಿದ್ದು ನಿಜ ಕನಸುಗಳು ಎಂಬ ಪುಸ್ತಕ ಬಿಡುಗಡೆ ಮಾಡುತ್ತಿರುವದು ಹಾಸ್ಯಾಸ್ಪದ: ಲೇಬಗೇರಿ
ಕಾಂಗ್ರೇಸ್ ಯುವ ಮುಖಂಡ ಸಂಗಮೇಶ ಚಲವಾದಿ ಲೇಬಗೇರಿ.

ಮುದ್ದೇಬಿಹಾಳ :-  ರಾಜ್ಯದಲ್ಲಿ ರಾಜಕೀಯವಾಗಿ ಸಿದ್ದರಾಮಯ್ಯನವರನ್ನು ಎದುರಿಸಲಾಗದ ಬಿಜೆಪಿ ಪಕ್ಷ  ಸಿದ್ದು ನಿಜ ಕನಸುಗಳು ಎಂಬ ಪುಸ್ತಕ ಬಿಡುಗಡೆ ಮಾಡುತ್ತಿರುವದು ಹಾಸ್ಯಾಸ್ಪದವಾಗಿದೆ ,  ಮತ್ತು ಅಹಿಂದ ನಾಯಕರಿಗೆ ಮಾಡಿದ ಅವಮಾನವಾಗಿದೆ, ಕೈಲಾಗದ ಗಂಡ ಕೈಲಾಸ ಕಂಡ ಎಂಬ ವಾಕ್ಯ ಈ ಸರಕಾರಕ್ಕೆ ಸಲ್ಲುತ್ತದೆ ಎಂದು ಕಾಂಗ್ರೆಸ್ ಮುಖಂಡ ಸಂಗಮೇಶ ಚಲವಾದಿ ಲೇಬಗೇರಿ ಹೇಳಿದ್ದಾರೆ. 

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು ಸೈದ್ದಾಂತಿಕವಾಗಿ ರಾಜ್ಯವೇ ಮೆಚ್ಚಿದ ನಾಯಕ ಸಿದ್ದರಾಮಯ್ಯನವರು ಅವರು ತಮ್ಮ ಆಡಳಿತ ಅವದಿಯಲ್ಲಿ ಜನಪರವಾದ ಆಡಳಿತವನ್ನು ನೀಡಿದ್ದಾರೆ, ಸದ್ಯದ ಬಿಜೆಪಿ ಸರಕಾರದ ಹಾಗೆ ಧರ್ಮ ಧರ್ಮಗಳ ಮಧ್ಯ ಜಗಳ ಹಚ್ಚಿ ಅಧಿಕಾರ ಮಾಡಿದವರಲ್ಲ ಸಿದ್ದರಾಮಯ್ಯನವರು.

ಇಂತಹ ಅವಿವೇಕಿತನ ಪರಮಾವದಿಯನ್ನು ಬಿಟ್ಟು, ರಾಜ್ಯವನ್ನು ಉನ್ನತಿಗೋಳಿಸುವ ಸಲುವಾಗಿ ಆಡಳಿತ ಮಾಡುವದು ಬಿಟ್ಟು, ಅಧರ್ಮದ ರಾಜಕೀಯ ಮಾಡುವದು ಎಷ್ಟು, ಸರಿ.  ಈ ಬಾರಿಯ ಚುನಾವಣೆಯಲ್ಲಿ ಜನರು ನಿಮಗೆ ತಕ್ಕಪಾಠ ಕಲಿಸುತ್ತಾರೆಂದು ತಿಳಿದು, ಸಿದ್ರಾಮಯ್ಯನವರ ಬಗ್ಗೆ ಅಪಪ್ರಚಾರ ಮಡುವದನ್ನು ಕೂಡಲೇ ಕೈಬಿಡದೇ ಹೊದರೆ ರಾಜ್ಯಾದ್ಯಂತ ಉಗ್ರವಾದ ಹೋರಾಟ ಮಡಬೇಕಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ 

ಸುದ್ದಿ ಓದಿ