ಮಹಲಿಂಗಪುರ

ಸಂಕ್ರಾಂತಿ ಹಬ್ಬ ಆಚರಿಸುವ ಮೂಲಕ ಜನತೆಗೆ ಮತ್ತೋಮ್ಮೆ ನೆನಪಿಸಿಕ್ಕೊಟ್ಟ ವಿದ್ಯಾರ್ಥಿಗಳು.

ಸಂಕ್ರಾಂತಿ ಹಬ್ಬ ಆಚರಿಸುವ ಮೂಲಕ ಜನತೆಗೆ ಮತ್ತೋಮ್ಮೆ ನೆನಪಿಸಿಕ್ಕೊಟ್ಟ ವಿದ್ಯಾರ್ಥಿಗಳು.

  ಮಹಾಲಿಂಗಪುರ : ಮಕರ ಸಂಕ್ರಾಂತಿ ಎಂದರೆ ಸೂರ್ಯ ತನ್ನ ಪಥ ಬದಲಿಸುವ ದಿನ. ಶನಿವಾರ ಶುಭ ದಿನದಂದು ವಿದ್ಯಾರ್ಥಿ /ನಿಯರು ಅಲ್ಲದೆ ಊರಿನ ಪ್ರಮುಖರಾದಿಯಾಗಿ ಎಲ್ಲ ಜನರು ಬೆಳಗಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಕ್ರಾಂತಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿ ದೇಶದಲ್ಲಿ ನಶಿಸಿ ಹೋಗುತ್ತಿರುವ ಹಳ್ಳಿ ಸೊಗಡಿನ ಹಬ್ಬದಾಚರಣೆ, ಸಂಸ್ಕೃತಿಯನ್ನು ಜನತೆಯಲ್ಲಿ ಮತ್ತೋಮ್ಮೆ ನೆನಪಿಸಿಕ್ಕೊಟ್ಟರು 

ಕುದರೆ ಕುಣಿತ, ದೇಶಿ ಶೈಲಿಯ ಉಡುಗೆ-ತೊಡುಗೆ, ಕೇಸರಿ, ಗುಲಾಬಿ ಬಣ್ಣದ ಪೇಟಗಳನ್ನು ಸುತ್ತಿದ ಮುಧೋಳ ತಾಲೂಕಿನ ರನ್ನ ಬೆಳಗಲಿಯ ಶ್ರೀಗುರು ಮಹಾಲಿಂಗೇಶ್ವರ ಪಪೂ ಕಾಲೇಜಿನ ವಿದ್ಯಾರ್ಥಿಗಳ ಝಾಂಜ್ ಪಥಕ ಹಾಗೂ ಬಂಗಾರದ ಒಡವೆಗಳು, ಇಳಕಲ್ ಸೀರೆಗಳನ್ನು ತೊಟ್ಟ ವಿದ್ಯಾರ್ಥಿನಿಯರಿಂದ ಡೊಳ್ಳು ವಾದ್ಯ ನುಡಿಸುವಿಕೆ ಪಟ್ಟಣದ ಮಹಿಳೆಯರಾದಿಯಾಗಿ ಸರದಿಯಲ್ಲಿ ಆಗಮಿಸಿದ ವಿದ್ಯಾರ್ಥಿ/ನಿಯರ ಗತ್ತು ಗಾಂಭೀರ್ಯ ಎಲ್ಲರ ಗಮನ ಸೆಳೆಯಿತು. 

ರುಚಿ ರುಚಿಯಾದ ಊಟ : ವಿದ್ಯಾರ್ಥಿ/ನಿಯರು ಸೇರಿ ಮಾಡಿದ ಚಟ್ನಿ, ಉಪ್ಪಿನ ಕಾಯಿ, ತರಕಾರಿ ಪಲ್ಯ, ಕಾಳು ಪಲ್ಯ, ಅಂಬಲಿ, ಹಣ್ಣು ಹಾಲು, ಹೋಳಿಗೆ, ತುಪ್ಪ, ಜೋಳದ ರೊಟ್ಟಿ, ಚಪಾತಿ, ಅನ್ನ, ನುಚ್ಚು, ದೋಸೆ, ಉಪ್ಪಿಟ್ಟು, ಅವಲಕ್ಕಿ, ಹಿಂಡಿ, ಮೊಸರು, ಕೆಂಪು ಮೆಣಸಿನ ಖಾರ, ಹಪ್ಪಳ, ಮಾದಿಲಿ, ಸಿಹಿ ತಿಂಡಿಗಳು, ವಿವಿಧ ತರಹದ ಕಾಯಿಪಲ್ಯಗಳು ಮತ್ತು ಅನ್ನ ಸಾರು ಇತ್ಯಾದಿ ಸುಮಾರು ನೂರಾರು ತರಹಗಳ ಭಕ್ಷ್ಯ ಭೋಜನಗಳು ಮೆರವಣಿಗೆಯಲ್ಲಿ ಭಾಗವಹಿಸಿ ಶ್ರೀಗುರು ಮಹಾಲಿಂಗೇಶ್ವರ ಸಾಂಸ್ಕೃತಿಕ ಭವನಕ್ಕೆ ಆಗಮಿಸಿದ ಹಸಿದ ಹೊಟ್ಟೆಗಳ ಹಸಿವು ತಣಿಸಿ ಅನೇಕ ತರಹದ ಆಹಾರ ಪದಾರ್ಥಗಳ ಆಸ್ವಾದಿಸುವ ಸುಯೋಗ ಮತ್ತೊಮ್ಮೆ ಒದಗಿ ಬಂತು.

ಆಹಾರ ವಸ್ತುಗಳ ವಿಭಾಗಗಳಿಗೆ ನದಿಗಳ ಹೆಸರುಗಳು : ಲಕ್ಷ್ಮಣ ತೀರ್ಥ - ಹಣ್ಣು -ಕಾಯಿ, ವರದಾ - ಅಂಬಲಿ, ಅಕರ್ಾವತಿ - ಸಾಂಬರ, ದೋಣಿ - ಉಪ್ಪಿಟ್ಟು - ಅವಲಕ್ಕಿ, ಭೀಮಾ - ಅನ್ನ,ನುಚ್ಚು, ಕಾಳಿ - ಹಾಲಿನ ಪದಾರ್ಥಗಳು, ಕಪಿಲಾ - ಚಟ್ನಿ, ಉಪ್ಪಿನಕಾಯಿ, ನೇತ್ರಾವತಿ - ತರಕಾರಿ ಪಲ್ಯ, ಶರಾವತಿ - ಕಾಳುಪಲ್ಯ, ಹೇಮಾವತಿ - ಹಪ್ಪಳ, ಘಟಪ್ರಭಾ - ಸಿಹಿ ತಿಂಡಿಗಳು, ಮಲಪ್ರಭಾ - ದೋಸೆ, ಕೃಷ್ಣಾ - ಹೋಳಿಗೆ ಇತ್ಯಾದಿಗಳು ನಾಡಿನ ನದಿ, ಉಪನದಿಗಳನ್ನು ಸಹ ನೆನಪಿಸಿಕ್ಕೊಳ್ಳುವ ಸಂದರ್ಭ ಒದಗಿ ಬಂತು. 

ಪಂಡಿತ ಪೂಜೇರಿ , ಪ್ರವೀಣ್ ಪಾಟೀಲ, ಚಿಕ್ಕಪ್ಪ ನಾಯಕ್, ಮಹಾಲಿಂಗಪ್ಪ ಗುಂಜಿಗಾಂವಿ, ಸಂಗನಗೌಡ ಬಿ.ಪಾಟೀಲ, ರಾಮನಗೌಡ ಪಾಟೀಲ, ಲಕ್ಕಪ್ಪ ಹಾರೂಗೇರಿ, ಗುರುನಾಥ ಹಿಪ್ಪರಗಿ, ಗಂಗಪ್ಪ ಬೀಸನಕೊಪ್ಪ, ಪ್ರವೀನ ಭರಮನಿ, ಮುತ್ತಪ್ಪ ಸಿದ್ದಾಪುರ, ಸಂಗಪ್ಪ ಅಮಾತಿ, ಶ್ರೀಮಂತ ಒಂಟಗೊಡಿ, ಎ.ಜಿ. ಮೂಡಲಗಿ, ಎಂ ಎಸ್ ಗಾಣಿಗೇರ, ರಾಘವೇಂದ್ರ ನೀಲನ್ನವರ್, ಪರಮಾನಂದ ಆಲಗೂರ್, ಸಿದ್ದು ಕೊಣ್ಣೂರ, ಎಸ್. ಬಿ ರಡ್ಡೇರಟ್ಟಿ, ಆರ್ ಎಸ್ ಭಜಂತ್ರಿ, ಪ್ರಾಚಾರ್ಯರು ಟಿ ಎಚ್ ನಾಯಕ, ಮಲ್ಲು ಗರಗದ, ವಿಶಾಲ ಕಾಂಬಳೇಕರ, ಗುರು ಮಾತೆಯರ ಕು. ಹಿಪ್ಪರಗಿ, ಕು. ಶೃತಿ ಹಾಗೂ ಶಿಕ್ಷಕರಾದ ಕೆ.ಬಿ. ಕುಂಬಾಳೆ, ಮಹಾದೇವ ಕುಲಗೋಡ ಮುಂತಾದವರು ಇದ್ದರು.


ಸುದ್ದಿ ಓದಿ