ರೋಣ

ಶಿಕ್ಷಕರು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ: ಶಾಸಕ ಕಳಕಪ್ಪ ಬಂಡಿ

ಶಿಕ್ಷಕರು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ: ಶಾಸಕ ಕಳಕಪ್ಪ ಬಂಡಿ

ರೋಣ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಸಂಖ್ಯೆ ಕುಂಠಿತವಾಗುತ್ತಿದೆ. ಈ ಹಿನ್ನೆಲೆ ಸರ್ಕಾರಿ ಶಾಲೆಗಳಲ್ಲಿ ಉತ್ತಮ  ಗುಣಮಟ್ಟದ ಶಿಕ್ಷಣವನ್ನು ನೀಡಬೇಕು. ಸರ್ಕಾರ ಶಿಕ್ಷಣಕ್ಕೆ ಅನೇಕ ಯೋಜನೆಯನ್ನು ಜಾರಿಗೆ ತಂದಿದ್ದು,ಪ್ರತಿಯೊಬ್ಬರು ಎಲ್ಲಾ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ರೋಣ ಶಾಸಕ ಕಳಕಪ್ಪ ಬಂಡಿ ಮಾತನಾಡಿದರು.   

  ಪಟ್ಟಣದ ಗುರುಭವನದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕದ ವತಿಯಿಂದ ಶೈಕ್ಷಣಿಕ ಕಾರ್ಯಾಗಾರ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಜರುಗಿತು. ಗುಲಗಂಜಿ ಮಠದ ಗುರುಪಾದ ಶ್ರೀಗಳು ಮಾತನಾಡಿ ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಕರವನ್ನು ನೀಡಬೇಕು.ಮಕ್ಕಳ ಶಿಕ್ಷಣ ಜೊತೆಗೆ ಸಂಸ್ಕಾರ ನೀಡಬೇಕು.ಉತ್ತಮ ಶಿಕ್ಷಕರ ಗುಣಮಟ್ಟಗಳನ್ನು ಮಕ್ಕಳು ಅಳವಡಿಸಿಕೊಳ್ಳಬೇಕು.ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡಲು ಪ್ರಯತ್ನಿಸಬೇಕು.ಮಕ್ಕಳನ್ನು ಉತ್ತಮ ನಾಗರಿಕನ್ನಾಗಿ ಮಾಡಬೇಕು ಎಂದು ಆಶಿರ್ವಚನ ನೀಡಿದರು.    

  ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಸುಧಾ ಹುಚ್ಚಣ್ಣವರ ಮಾತನಾಡಿ ಮಕ್ಕಳ ಕಲಿಕೆ ಶಿಕ್ಷಣ ಬಹಳ ಮುಖ್ಯ.ಶಿಕ್ಷಣದಿಂದ ಜೀವನದಲ್ಲಿ ಎನಾದರೂ ಸಾಧನೆ ಮಾಡಲು ಸಾಧ್ಯ.ಮಕ್ಕಳು ಕೇವಲ ಅಂಕಗಳಿಗೆ ಮಾತ್ರ ಶಿಕ್ಷಣ ಸೀಮಿತಗೊಳ್ಳದೆ ಜ್ಞಾನಕ್ಕೋಸ್ಕರ ಶಿಕ್ಷಣ ಪಡೆದುಕೊಳ್ಳಬೇಕು.ಶಿಕ್ಷಣ ನೀತಿಯಲ್ಲಿ ಬದಲಾವಣೆ ತರುವಂತ ಕೆಲಸ ಮಾಡಬೇಕು. ಮಕ್ಕಳಿಗೆ ಮೂಲಭೂತ ಸೌಕರ್ಯಗಳ ನೀಡುವುದರ ಜೊತೆಗೆ ಮುಂದಿನ ದಿನಮಾನಗಲ್ಲಿ ಶಿಕ್ಷಣದಲ್ಲಿ ಭಾರತವನ್ನು ಅಭಿವೃದ್ಧಿಯತ್ತ ಸಾಗಬೇಕಿದೆ ಎಂದು ಮಾತನಾಡಿದರು.ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ, ನಾಗನಗೌಡ ಎಮ್.ಎ,ಜಿ.ಬಸವಲಿಂಗಪ್ಪ, ಗಾಯಿತ್ರಿ ಸಜ್ಜನ, ವಿ.ಎಮ್.ಹಿರೇಮಠ, ಎಮ್.ಎ.ಫನಿಬಂಧ, ಎಮ್.ಎಸ್.ಕುರಿಯವರು, ಎಸ್.ವಿ.ಕ್ಯಾಮನಗೌಡ್ರ, ವಾಯ್.ಡಿ.ಗಾಣಗೇರ, ಸಿ.ಕೆ.ಕೇಸರಿ, ಮುತ್ತಣ್ಣ ಕಡಗದ, ರಾಜಣ್ಞ ಹೂಲಿ,ಅಶೋಕ ನವಲಗುಂದ, ಸೇರಿದಂತೆ ತಾಲೂಕಿನ ಎಲ್ಲಾ ಶಾಲೆಯ ಶಿಕ್ಷಕರು ಸೇರಿದಂತೆ ಅನೇಕೆ ಉಪಸ್ಥಿತರಿದ್ದರು.

ಸುದ್ದಿ ಓದಿ