ಲೇಖನಗಳು

ಮಾನಸಿಕ ಆರೋಗ್ಯಕ್ಕೆ; ಮೊಬೈಲ್ ಕಗ್ಗಂಟು!

ಮಾನಸಿಕ ಆರೋಗ್ಯಕ್ಕೆ; ಮೊಬೈಲ್ ಕಗ್ಗಂಟು!

ವಿಶ್ವದಾದ್ಯಂತ 380 ಕೋಟಿಗೂ ಹೆಚ್ಚು ಮೊಬೈಲ್ ಬಳಸುವರ ಸಂಖ್ಯೆ ಇದೆ. ಚೀನಾ ಮೊದಲನೇ ಸ್ಥಾನದಲ್ಲಿದ್ದರೆ ಭಾರತ ಎರಡನೇ ಸ್ಥಾನದಲ್ಲಿದೆ. ವೀಡಿಯೊ ಗೇಮ್ಸ್‌ಗಳು ಸುರಕ್ಷಿತವಲ್ಲ ಎಂಬುದನ್ನು ಪಾಲಕರು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ಮಕ್ಕಳ ಮುಂದೆ ಅತಿಯಾದ ಮೊಬೈಲ್ ಬಳಕೆ ಮಾಡದಿರಲು ನಿರ್ಧರಿಸಬೇಕು. 


ಕೇವಲ ದೈಹಿಕವಾಗಿ ಆರೋಗ್ಯವಾಗಿದ್ದರೆ ಸಾಲದು ಮಾನಸಿಕ ಆರೋಗ್ಯ ಕೂಡ ಬಹು ಮುಖ್ಯ. ಕಾಲ ಬದಲಾದಂತೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಹೊಸ ಆವಿಸ್ಕಾರಗಳು ಮಾನವನ ಬದುಕನ್ನು ಉನ್ನತಿಗೊಳಿಸುವುದರ ಜೊತೆಗೆ ದೈಹಿಕ ಶ್ರಮ ಕಡಿಮೆ ಮಾಡಿರುವುದು ನಿಜ, ಆದರೆ, ದೈಹಿಕ ಚಟುವಟಿಕೆಗಳು ಕಡಿಮೆಯಾಗಿ ಅನೇಕ ಅನಾಆರೋಗ್ಯದ ಸಮಸ್ಯೆಗಳು ಉದ್ಭವಾಗುತ್ತಿವೆ. 
ಗಿಡ ಮರ ಕಡಿತದಿಂದ ಕೃತಕ ಆಮ್ಲಜನಕದವರೆಗೆ; ನಾಟಕ, ಯಕ್ಷಗಾನ, ನೈತ್ಯ, ಮನರಂಜನೆ, ದೈಹಿಕ ಶಿಕ್ಷಣ ಮತ್ತು ಮಾನಸಿಕ ಆರೋಗ್ಯಕ್ಕೆ ಪೂರಕವಾಗಿದ್ದವೂ. ತದನಂತರ ಬಂದ ಸಿನಿಮಾ, ಧಾರವಾಹಿಗಳು. ಇವೆಲ್ಲವೂ ಅಂಗೈಯಲ್ಲಿಯೇ ಪ್ರಪಂಚ ತೊರಿಸುವ ಮೊಬೈಲ್‌ದಿಂದ ಆತಂಕ, ಭಯ, ಗೀಳುತನದಿಂದ ಹೊರಬರಲಾರದೆ ಒದ್ದಾಡುತ್ತಿರುವ ಎಷ್ಟೋ ಜನರು. ವಿಶ್ವದಾದ್ಯಂತ 380 ಕೋಟಿಗೂ ಹೆಚ್ಚು ಮೊಬೈಲ್ ಬಳಸುವರ ಸಂಖ್ಯೆ ಇದೆ. ಚೀನಾ ಮೊದಲನೇ ಸ್ಥಾನದಲ್ಲಿದ್ದರೆ ಭಾರತ ಎರಡನೇ ಸ್ಥಾನದಲ್ಲಿದೆ. 
ಮುಂಜಾನೆ ನಡಿಗೆ, ವ್ಯಾಯಮ, ಯೋಗ, ಆಹಾರ ಸೇವನೆ, ಅಷ್ಟೇ ಯಾಕೆ ಶೌಚಾಲಯ, ಸ್ನಾನಕ್ಕೆ ಹೋಗುವಾಗ ಕೂಡ ಮೊಬೈಲ್ ಜೊತೆಗೆ ಬೇಕು. ಹೀಗೆ ದಿನನಿತ್ಯದ ಕೆಲಸಕ್ಕೆ ಮೊಬೈಲ್ ಅವಶ್ಯಕತೆ ಇರುವುದರಿಂದ ಮೊಬೈಲ್ ಮೇಲಿನ ಅವಲಂಬನೆ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿದೆ. ಅತಿಯಾದ ಮೊಬೈಲ್ ಬಳಕೆಯಿಂದ ಆತಂಕ, ಭಯ, ಸಿಟ್ಟು ಹಾಗೂ ನಿದ್ರೆಗೂ ಕೂಡ ಕನ್ನ ಹಾಕುತ್ತಿದೆ. ಹಾಗಾಗಿ ವೈಯಕ್ತಿಕ, ಕೌಟಂಬಿಕ, ಸಾಮಾಜಿಕ ಸಮಸ್ಯೆಗಳು ಹೆಚ್ಚಾಗುತ್ತಿವೆ. ಕೆಲವು ದಿನಗಳ ಹಿಂದೆ ಕರ್ನಾಟಕದ ಮಡಿಕೇರಿಯಲ್ಲಿ ನಡೆದ ಘಟನೆ: ತನ್ನ ತಂದೆ ಮೊಬೈಲ್‌ನಲ್ಲಿರು ಗೆಮ್ಸ್‌ ಡಿಲೇಟ್ ಮಾಡಿದಕ್ಕೆ ಆತ್ಮಹತ್ನೆ ಮಾಡಿಕೊಂಡ ವರದಿಯೊಂದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. 
ಮಕ್ಕಳು, ಯುವಕರು ಮೊಬೈಲ್ ಗೇಮ್ ಆಡುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಅತಿರೇಕವಾಗಿ ಕಾಡುತ್ತಿವೆ ಎಂದು  ಆಸ್ಟ್ರೇಲಿಯಾದ ದಿ ಹಾರ್ಟ ಸೆಂಟ್‌ರನ ಕ್ಲೇರ್‌. ಎಂ. ಲಾಲಿ  ಅಘಾತಕಾರಿ ವಿಷಯ ಒಂದು  ತಮ್ಮ ಅಧ್ಯಯನದಲ್ಲಿ ಉಲ್ಲೇಖಿಸಿದ್ದಾರೆ. 
ಮಾಹಾರಾಷ್ಟ್ರದ ಒಂದು ಗ್ರಾಮದಲ್ಲಿ ದಿನ ನಿತ್ಯ ಸಾಯಂಕಾಲ ಒಂದುವರೆ ಗಂಟೆ ಮೊಬೈಲ್ ಟಿವಿ ಬಂದ್ ಮಾಡುವ ರೂಢಿ ಇದೆ. ಇದರಿಂದ ಮಕ್ಕಳಲ್ಲಿ ಕಲಿಕಾ ಆಸಕ್ತಿ ಹಾಗೂ ಮೊಬೈಲ್ ಬಳಕೆ ಸಿಯಂತ್ರಣದಲ್ಲಿಡಬಹುದು ಎಂಬುದು ಆ ಹಳ್ಳಿಯ ಜನರ ಅಭಿಪ್ರಾಯವಾಗಿದೆ. 
ಸ್ಕ್ರೀನ್ ಅಡಿಕ್ಷನ್‌: ಎಂದರೆ ಮೊಬೈಲ್‌/ಟಿವಿ/ಕಂಪ್ಯೂಟರ್ ನೊಡುತ್ತ ಗಂಟೆಗಟ್ಟಲೇ ಸಮಯ ವ್ಯರ್ಥವಾಗಿದ್ದೆ ಗೊತ್ತಾಗುವುದಿಲ್ಲ, ಹಾಗೂ ಮತ್ತೆ ಮತ್ತೆ ಬಳಸಬೇಕು ಎಂಬ ತುಡಿತ ಹೆಚ್ಚಾಗಯತ್ತಾ ಅದರಲ್ಲೇ ಕಳೆದು ಹೊಗುವುದು ಪ್ರತಿಯೊಂದು ಸಂತೋಷಕ್ಕೆ ಡೋಪಮೈನ್ ಹಾರ್ಮೋನ್ ಮುಖ್ಯ ಕಾರಣವಾಗಿದೆ. “ಫೀಲ್ ಗೂಡ್ ಹಾರ್ಮೋನ್‌” ಎಂದು ಕರೆಯಲಾಗತ್ತೆ. 
ಮೊಬೈಲ್ ಬಳಕೆ ನಿಯಂತ್ರಣ ಹೇಗೆ? 
* ಅತಿಯಾದ ಮೊಬೈಲ್ ಬಳಕೆ ನಮ್ಮ ನೆಮ್ಮದಿ ಜೀವನಕ್ಕೆ ಕಗ್ಗಂಟು ಎಂದು ಅರಿತುಕೊಳ್ಳಬೇಕು. 
* ಮೊಬೈಲ್‌ನಲ್ಲಿರುವ ತಂತ್ರಜ್ಞಾನವನ್ನು ಧನಾತ್ಮಕವಾದ ವಿಷಯಕ್ಕೆ ಬಳಸಿಕೊಳ್ಳುವುದು. 
* ಮೊಬೈಲ್, ಕಂಪ್ಯೂಟರ್ ಕೆಲಸಕ್ಕೆ/ ಶಿಕ್ಷಣಕ್ಕೆ ಪೂರಕವಾದಲ್ಲಿ ಸಮಯ ನಿಗದಿ ಪಡಿಸಿ, ಅತಿಯಾದ ಮೊಬೈಲ್ ಬಳಕೆ ಗೀಳು, ಖಿನ್ನತೆಗೆ, ಹಾಗೂ ಇತರ ಮಾನಸಿಕ ಸಮ್ಯಸೆಗಳಿಗೆ ಕಾಣವಾಗದಿರಲಿ. 
* ಅತಿಯಾದ ಮೊಬೈಲ್ ಬಳಕೆಯ ಒತ್ತಡದಿಂದ ಹೊರ ಬರಲು ನಿಸರ್ಗದ ಒಡನಾಟವನ್ನು ಹೆಚ್ಚಿಸಿಕೊಳ್ಳುವುದು. ಪ್ರಕೃತಿ ವಿಸ್ಮಯವನ್ನು ಆನಂದಿಸುವುದು, ಚಂದ್ರೋದಯ, ನಕ್ಷತ್ರ ವಿಕ್ಷಣೆ, ಚಿಲಿಪಿಲಿ ಹಕ್ಕಿಗಳ ಶಬ್ದ ಆಲಿಸುವುದು.  
* ಬಿಡುವಿನ ಸಮಯದಲ್ಲಿ ಮೊಬೈಲ್ ಬಳಸುವುದಕ್ಕಿಂತ ಇಷ್ಟವಾದ ಸಂಗಿತ ಕೇಳುವುದು. ಪತ್ರಿಕೆ/ಪುಸ್ತಕ ಓದುವುದು. ಮಕ್ಕಳ, ಕುಟುಂಬದವರ ಜೊತೆ ಹೆಚ್ಚು ಸಮಯ ಕಳೆಯುವುದು. 
* ಅವಶ್ಯ ಇದ್ದಷ್ಟೆ ಮೊಬೈಲ್‌ನಲ್ಲಿ ಮಾತನಾಡುವುದು, ಹಾಗು ಈಯರ್ ಫೋನ್ ಅಥವಾ ಲೌಡ್ ಸ್ಪಿಕರ್ ಇಟ್ಟು ಮಾತನಾಡುವುದು. 
* ಉತ್ತಮ ನಿದ್ರೆಗಾಗಿ ರಾತ್ರಿ ಮಲಗುವ ಮುಂಚೆ  ಮೂರು ಗಂಟೆ ಮೊಬೈಲ್ ಬಳಸದಿರಲು ನಿರ್ಧರಿಸಿ. 
* ವೀಡಿಯೊ ಗೇಮ್ಸ್‌ಗಳು ಸುರಕ್ಷಿತವಲ್ಲ ಎಂಬುದನ್ನು ಪಾಲಕರು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ಮಕ್ಕಳ ಮುಂದೆ ಅತಿಯಾದ ಮೊಬೈಲ್ ಬಳಕೆ ಮಾಡದಿರಲು ನಿರ್ಧರಿಸಬೇಕು. 
* ಮಕ್ಕಳು ಊಟ ಮಾಡದೇ ಹಟ ಮಾಡುವಾಗ ಮೊಬೈಲ್ ಬದಲಿಗೆ ಬೇರೆ ಆಟಕೆ ಸಾಮಾನುಗಳನ್ನು ರೂಢಿ ಮಾಡಿಸುವುದು. 
- ಶರಣಪ್ಪ ಮಾಳಗಿಮನಿ 
ಧಾರವಾಡ 
- * * * - 

ಸುದ್ದಿ ಓದಿ