ತಾಳಿಕೋಟಿ

ಕಾರ್ಯಾಗಾರದ ಸದುಪಯೋಗ ಪಡಿಸಿಕೊಳ್ಳಲು ಜೇವರಗಿ ಕರೆ

ಕಾರ್ಯಾಗಾರದ ಸದುಪಯೋಗ ಪಡಿಸಿಕೊಳ್ಳಲು ಜೇವರಗಿ ಕರೆ

ಲೋಕದರ್ಶನ ವರದಿ

ತಾಳಿಕೋಟೆ 26: ಕಾರ್ಯಾಗಾರಗಳು ಕೇವಲ ತೋರಿಕೆಯಾಗದೇ ಕಾರ್ಯಾಗಾರದ ಸದುಪಯೋಗ ಪಡಿಸಿಕೊಂಡಾಗ ಮಾತ್ರ ಮಕ್ಕಳ ಕಲಿಕೆಯಲ್ಲಿ ಅಭಿವೃದ್ಧಿ ಹೆಚ್ಚಿ ಗುಣಮಟ್ಟ ಕಾಣಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿರೇಶ ಜೇವರಗಿ ಹೇಳಿದರು. ಅವರು ಪಟ್ಟಣದ ಸರ್ವಜ್ಞ ವಿದ್ಯಾಪೀಠದಲ್ಲಿ ಪ್ರಾ.ಎ.ಎಸ್.ಹಿಪ್ಪರಗಿ ಪ್ರತಿಷ್ಠಾನ ವಿಜಯಪುರ, ತಾಲೂಕಾ ಪ್ರೌಢಶಾಲಾ ಕನ್ನಡ ಭಾಷಾ ಬೋಧಕರ ಸಂಘ ಮುದ್ದೇಬಿಹಾಳ, ದತ್ತಿ ದಾನಿಗಳಾದ ಜಿಲ್ಲಾ ಪ್ರೌಢಶಾಲಾ ಕನ್ನಡ ಭಾಷಾ ಬೋಧಕರ ಸಂಘ ವಿಜಯಪುರ, ಶಿವಾನಂದ ಕಲಕೇರಿ (ಗಿರಿಜಾ ಮತ್ತು ಹಣಮಂತ್ರಾಯ ಕಲಕೇರಿ ದಂಪತಿ ಸ್ಮರಣಾರ್ಥ) ಸಹಯೋಗದಲ್ಲಿ ಆಯೋಜಿಸಲಾಗಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ವರ್ಗಕೋಣೆಗೆ ಹೋಗುವ ಮುಂಚೆ ಪೂರ್ವ ತಯಾರಿ ಜೊತೆಗೆ ಅಗತ್ಯ ಕಲಿಕೋಪರಣಗಳನ್ನು ಜೊತೆಗೂಡಿಸಿಕೊಂಡು ಬಳಸಬೇಕು. ಶಿಕ್ಷಕರಲ್ಲಿ ಅಪಾರವಾದ ಜ್ಞಾನವಿದೆ ಅದು ಮಕ್ಕಳಿಗೆ ತಲುಪಲಿ ಪ್ರಮಾಣ ಪತ್ರಕ್ಕಾಗಿ ಕಲಿಕೆಯಾಗದೆ ವಿದ್ಯಾರ್ಥಿಗಳು ಸರ್ವಾಂಗೀಣ ಅಭಿವೃದ್ಧಿಯಾಗಬೇಕು. ಶಿಕ್ಷಕರಿಗೆ ಗೌರವಯುತ ಸ್ಥಾನವಿದ್ದು ಅದರ ಪಾವಿತ್ರ್ಯ ಉಳಿಕೊಳ್ಳುವ ಕೆಲಸವಾಗಲಿ ಎಂದರು.

ಅಧ್ಯಕ್ಷತೆಯನ್ನು ಸರ್ವಜ್ಞ ವಿದ್ಯಾಪೀಠ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿದ್ಧನಗೌಡ ಮಂಗಳೂರ ವಹಿಸಿದ್ದರು.  ಸಂಪನ್ಮೂಲ ವ್ಯಕ್ತಿಗಳಾಗಿ ಚಾಮರಾಜನಗರ ಸರ್ಕಾರಿ ಪ್ರೌಢಶಾಲೆಯ ರಾಜ್ಯ ಸಂಪನ್ಮೂಲ ವ್ಯಕ್ತಿ ಶಿವಣ್ಣ ಇಂದ್ವಾಡಿ ಅವರು ಹಳಗನ್ನಡ ಪದ್ಯಗಳ ಗಮಕ ವಾಚನವು ಶಿಕ್ಷಕರು ಹಾಗೂ ಮಕ್ಕಳ ಮನಸೂರೆಗೊಂಡಿತು. ಹತ್ತರಕಿಹಾಳ ಹಿರಿಯ ಪ್ರಾಥಮಿಕ ಶಾಲೆಯ ಡಾ.ಮಾಧವ.ಎಚ್.ಗುಡಿ ಅವರು  ರಾಷ್ಟ್ರೀಯ ಶಿಕ್ಷಣ ನೀತಿ-ಭಾಷಾ ಕೌಶಲ್ಯಗಳ ಅನುಕಲನ ಕುರಿತು ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಹಿಪ್ಪರಗಿ ಪ್ರತಿಷ್ಠಾನದ ಕೋಶಾಧ್ಯಕ್ಷ  ಎಸ್.ಎಸ್.ತುಪ್ಪದ, ಸರ್ವಜ್ಞ ವಿದ್ಯಾಪೀಠ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಸ್.ಬಿ.ಪವಾರ, ಜಿಲ್ಲಾ ಕನ್ನಡ ಭಾಷಾ ಪ್ರೌಶಾಶಿ ಸಂಘದ ಅಧ್ಯಕ್ಷ   ಎಚ್.ಆರ್.ಭಾಲಿ, ಶಿಕ್ಷಣ ಸಂಯೋಜಕ ಪಿ.ಎ.ಮುಲ್ಲಾ ಇದ್ದರು. ಹಿಪ್ಪರಗಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ದೊಡ್ಡಣ್ಣ ಭಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲ್ಲೂಕಾ ಕನ್ನಡ ಭಾಷಾ ಪ್ರೌಶಾಶಿ.ಸಂಘದ ಅಧ್ಯಕ್ಷ ಆರ್.ಬಿ.ದಾನಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಎಸ್.ವಿ.ಜಾಮಗೊಂಡಿ  ನಿರ್ವಹಿಸಿದರು ಜಿಲ್ಲಾ ಕನ್ನಡ ಬಳಗದ ಖಜಾಂಚಿ ಎಂ.ಜಿ.ಕಿತ್ತೂರ ವಂದಿಸಿದರು. ಕಾರ್ಯಾಗಾರದಲ್ಲಿ ಮುದ್ದೇಬಿಹಾಳ ತಾಳಿಕೋಟೆ, ತಾಲ್ಲೂಕಿನ ಕನ್ನಡ ಶಿಕ್ಷಕರು, ಹಿಪ್ಪರಗಿ ಪ್ರತಿಷ್ಠಾನದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿ ಓದಿ