ಮಹಾಲಿಂಗಪುರದ ಜನಸೇವಾ ಉಪಹಾರ ಗೃಹದಲ್ಲಿ 5 ರೂಪಾಯಿಗಳಿಗೆ ದೋಸೆ
ಮಹಾಲಿಂಗಪುರ 12: ದೇಶದಲ್ಲಿ ದಿನೆ ದಿನೇ ಆಹಾರ ಪದಾರ್ಥಗಳ ಬೆಲೆಗಳು ಗಗನಕ್ಕೇರುತ್ತಿರುವುದು ಸಾರ್ವಜನಿಕ ಬದುಕನ್ನು ದುಸ್ತರಗೊಳಿಸಿದೆ. ಪ್ರಸ್ತುತ ಹೋಟೆಲ್ ಗಳಲ್ಲಿ ದೋಸೆ ಒಂದಕ್ಕೆ 50ರಿಂದ 100ರೂ.ಗಳ ಬೆಲೆ ಇದ್ದು, ದೋಸೆ ತಿನ್ನುವ ಬಯಕೆ ಪಡುವ ಕಡುಬಡವರಿಗೆ ಹೆಚ್ಚಿನ ಬೆಲೆಯ ಕಾರಣ ಅದು ಗಗನ ಕುಸುಮವೇ ಸರಿ.ಆದ್ದರಿಂದ ಇದನ್ನು ಮನಗಾಣಿದ ನಗರದ ಯೋಗ ಗುರು ಫಕ್ರುದ್ದೀನ್ ಕುಂಟೋಜಿಯವರು ಕಡು ಬಡವರಿಗೆ ಏನಾದರೂ ಸಹಾಯ ಸಹಕಾರ ನೀಡುವ ನಿಟ್ಟಿನಲ್ಲಿ, ಎಪಿಎಂಸಿ ಮಾರ್ಗದ ತಮ್ಮ ಸ್ವಂತ ಮಳಿಗೆಯಲ್ಲಿ, ಜನಸೇವಾ ಉಪಹಾರ ಗೃಹ ತೆರೆದು 5ರೂ.ಗಳಿಗೆ ದೋಸೆ ನೀಡಲು ನಿರ್ಧರಿಸಿದ್ದಾರೆ. ಇದರಿಂದ ಬಡ ಹಾಗೂ ಮಧ್ಯಮಸ್ತ ಜನರ ಆರ್ಥಿಕ ಅನುಕೂಲತೆಗೂ ಸಹಕಾರಿಯಾಗುತ್ತದೆ ಎನ್ನುತ್ತಾರೆ ಅವರು. ಮುಂದಿನ ದಿನಗಳಲ್ಲಿ ಮಧ್ಯಾಹ್ನದ ಹೊತ್ತಿನಲ್ಲಿ ಕಡಿಮೆ ಬೆಲೆಯ ಊಟದ ವ್ಯವಸ್ಥೆಯನ್ನೂ ಸಹ ಮಾಡುವ ನಿರ್ಧಾರ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ತೆರೆದು ಕಡಿಮೆ ಬೆಲೆಯಲ್ಲಿ ಬಡವರಿಗೆ ಊಟ ನೀಡುತ್ತಿರುವುದು ಪ್ರಶಂಸನೀಯ ಕೆಲಸ, ಎರಡು ಮಾತಿಲ್ಲ. ಆದರೆ ಬಡವರಿಗೆ ಕಡಿಮೆ ದರದಲ್ಲಿ ಊಟ, ಉಪಹಾರ ನೀಡುವುದು ಉಳ್ಳವರ ಹೊಣೆಯೂ ಆಗಿರುವುದನ್ನು ನಾವೆಲ್ಲರೂ ಯೋಗ ಗುರುಗಳ ಮಾದರಿ ಕೆಲಸವನ್ನು ಮನಗಾಣಬೇಕಾಗಿದೆ.ಸಂಕμÀ್ಟದ ಸಮಯದಲ್ಲಿ ಸಾಕಷುಟ ಜನರು ಆರ್ಥಿಕ ಹಿಂಜರಿತವನ್ನು ಅನುಭವಿಸುತ್ತಿದ್ದಾರೆ ಇಂಥ ಸಂದರ್ಭದಲ್ಲಿ ಇದೊಂದು ಜನೋಪಯೋಗಿ ಉಪಹಾರ ಗೃಹವಾಗಲಿ ಎನ್ನುವುದೇ ಎಲ್ಲರ ಆಶಯವಾಗಿದೆ.