ಕ್ರೀಡೆ

ಇಂಡೋನೇಷ್ಯಾ ಓಪನ್: ಪಿವಿ ಸಿಂಧೂ, ಎಚ್ಎಸ್ ಪ್ರಣೋಯ್ಗೆ ಸೋಲು

ಇಂಡೋನೇಷ್ಯಾ ಓಪನ್: ಪಿವಿ ಸಿಂಧೂ, ಎಚ್ಎಸ್ ಪ್ರಣೋಯ್ಗೆ ಸೋಲು


ಪಿವಿ ಸಿಂಧೂ, ಎಚ್ಎಸ್ ಪ್ರಣೋಯ್ಗೆ ಸೋಲು 

ಜಕಾತರ್ಾ(ಇಂಡೋನೇಷಿಯಾ) 06:  ಪ್ರತಿಷ್ಠಿತ ಇಂಡೋನೇಷ್ಯಾ ಬಿಎಡಬ್ಲ್ಯುಎಫ್ ವಲ್ರ್ಡ ಟೂರ್ ಸೂಪರ್ 1000 ಟೂರ್ನಮೆಂಟ್ ನಲ್ಲಿ ಕ್ವಾರ್ಟರ್ ಫೈನಲ್ಸ್ ಹಂತ ತಲುಪಿದ್ದ ಭಾರತದ ಪಿವಿ ಸಿಂಧೂ ಹಾಗೂ ಎಚ್ಎಸ್ ಪ್ರಣೋಯ್ ಸೋಲಿನ ಆಘಾತ ಅನುಭವಿಸಿದ್ದಾರೆ. 

ಶುಕ್ರವಾರದ ಪಂದ್ಯದಲ್ಲಿ ಪಿವಿ ಸಿಂಧೂ  ಚೀನಾದ ಹಿ ಬಿಂಗ್ ಜಿಯಾವೊ ವಿರುದ್ಧ 21-14, 21-15ರ ಅಂತರದಲ್ಲಿ ಸೋಲು ಕಂಡಿದ್ದಾರೆ. 

ಪುರುಷರ ಕ್ವಾರ್ಟರ್ ಫೈನಲ್ಸ್ ಹಂತ ತಲುಪಿ ಪ್ರಶಸ್ತಿಯ ಆಸೆ ಮೂಡಿಸಿದ್ದ  ಪ್ರಣೋಯ್ ಸಹ  ಶಿ ಯೂಕಿ ವಿರುದ್ಧ 21-17, 21-18ರ ಅಂತರದಲ್ಲಿ ಪರಾಭವಗೊಂಡಿದ್ದಾರೆ. 

ಕಳೆದ ವಾರ ಮಲೇಷ್ಯಾ ಓಪನ್ ನಲ್ಲಿ ಸೆಮಿ ಫೈನಲ್ಸ್ ನಲ್ಲಿ ಸೋತು ಮರಳಿದ್ದ ಸಿಂಧೂ ಭಾರತದ ಪಾಲಿಗೆ ಇಂಡೋನೇಷ್ಯಾ ಓಪನ್ ಗೆಲ್ಲುವ ಭರವಸೆಯ ಆಟಗಾತರ್ಿಯಾಗಿದ್ದರು.

ಸುದ್ದಿ ಓದಿ