ವಿದ್ಯಾರ್ಥಿ ಶ್ರೀರಂಗನಿಗೆ ಸನ್ಮಾನ
ಮಹಾಲಿಂಗಪುರ: ಸ್ಥಳೀಯ ಶಾಂತಿನಿಕೇತನ ಬಡಾವಣೆ ನಿವಾಸಿ, ಶಿಕ್ಷಕ ಶಿವನಪ್ಪ ರಡ್ಡೇರಟ್ಟಿ ಇವರ ಪುತ್ರ ಶ್ರೀರಂಗ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ. 96.96 (606) ಪಡೆದ ಪ್ರಯುಕ್ತ ಶಿಕ್ಷಣ ಪ್ರೇಮಿ, ವರ್ತಕ ಮಹಾಲಿಂಗ ಕಲ್ಯಾಣಿ ಕುಟುಂಬದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಶ್ರೀರಂಗ ಸಮೀಪದ ಸೋರಗಾಂವಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡಿ ಸಾಧನೆ ಮಾಡಿರುವುದು ವಿಶೇಷ. ಸುವರ್ಣ ಕಲ್ಯಾಣಿ, ಜಯಶ್ರೀ ರಡ್ಡೇರಟ್ಟಿ, ಪೋಲೀಸ್ ಕಾನ್ಸ್ಟೇಬಲ್ ಕೆಂಪಣ್ಣ ರಡ್ಡೇರಟ್ಟಿ ಇತರರಿದ್ದರು