ಮದುವೆ ಸಮಾರಂಭದಲ್ಲಿ ವಿಷಹಾರ ಊಟ ಸೇವಿಸಿ ನೂರಾರು ಜನ ಅಸ್ತವ್ಯಸ್ತ, ಆಸ್ಪತ್ರೆಗೆ ದಾಕಲು

ಮದುವೆ ಸಮಾರಂಭದಲ್ಲಿ ವಿಷಹಾರ ಊಟ ಸೇವಿಸಿ ನೂರಾರು ಜನ ಅಸ್ತವ್ಯಸ್ತ, ಆಸ್ಪತ್ರೆಗೆ ದಾಕಲು

ಬೆಳಗಾವಿ : ಮದುವೆಯ ಕಾರ್ಯದಲ್ಲಿ ವಿಷಹಾರ ಊಟ ಸೇವಿಸಿದ ನೂರಾರು ಜನರು ಅಸ್ವಸ್ಥವಾಗಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೂಡಿ ಗ್ರಾಮದಲ್ಲಿ ನಡೆದಿದ್ದು, ಅಸ್ವಸ್ಥಗೊಂಡಿರುವ ಜನರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ತಿಳಿಸಿದ್ದಾರೆ.

  ಸೋಮವಾರ ದಿ. 28ರಂದು ಚಿಕ್ಕೋಡಿ ಹಿರೇಕೂಡಿ ಗ್ರಾಮದ ಪಟೇಲ ಎಂಬುವವರ ಕುಟುಂಬದಲ್ಲಿ ಮದುವೆ ಕಾರ್ಯ ನಡೆದಿದ್ದು, ಅಲ್ಲಿನ ಊಟ ಸೇವಿಸಿ ದ ಬಳಿಕ ಮದುವೆ ಕಾರ್ಯಕ್ಕೆ ಬಂದಿದ್ದ ಬೀಗರು ಹಾಗೂ ಗೆಳೆಯರಿಗೆ ಸಂಬಂಧಿಗಳಿಗೆ ವಾಂತಿ ಭೇದಿಯಿಂದ ತತ್ತರಿಸಿ ಮಂಗಳವಾರ ಅಸ್ವಸ್ಥಗೊಂಡಿದ್ದಾರೆ, 

   ಈ ಹಿನ್ನೆಲೆಯಲ್ಲಿ ಇಲ್ಲಿ ಊಟ ಸವಿದು ಅಸ್ವಸ್ಥಗೊಂಡ ಎಲ್ಲರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಕೆಲವರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಈ ಮದುವೆ ಸಮಾರಂಭಕ್ಕೆ ಮಹಾರಾಷ್ಟ್ರದ ಮಿರಜ್‌ನಿಂದಲೂ ಸಂಬಂಧಿಕರು ಆಗಮಿಸಿದ್ದರು ಎನ್ನಲಾಗಿದೆ. ಮದುವೆ ಸಮಾರಂಭದಲ್ಲಿ ಊಟ ಮಾಡಿ ಮನೆಗೆ ವಾಪಾಸ್ ಆಗುತ್ತಿದ್ದಂತೆ ಕೆಲ ಜನರಿಗೆ ವಾಂತಿ-ಭೇದಿ ಪ್ರಾರಂಭವಾಗಿದೆ.

   ತಡರಾತ್ರಿ ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದಿರುವ ಹಿನ್ನೆಲೆ ಅನೇಕರು ರಾತ್ರಿಯೇ ತಮ್ಮ ಗ್ರಾಮದ ಸುತ್ತಮುತ್ತಲಿನ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಹಿರೇಕೋಡಿ ಗ್ರಾಮಕ್ಕೆ ಚಿಕ್ಕೋಡಿ ಡಿಎಸ್ ಪಿ ಗೌಡರ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದು ಸರ್ಕಾರಿ ಶಾಲೆಯಲ್ಲಿ ಬೀಡುಬಿಟ್ಟು ತಪಾಸಣೆ ನಡೆಸುತ್ತಿದ್ದಾರೆ




ಸುದ್ದಿ ಓದಿ