ಸಿರುಗುಪ್ಪ

ವಿಜಯನಗರ ಕಾಲುವೆಯಿಂದ ಬೇಸಿಗೆ ಬೆಳೆಗೆ ನೀರು ಕಲ್ಪಿಸಿ ಕೆಂಚನಗುಡ್ಡ ಸಿರುಗುಪ್ಪ ರೈತರ ಒತ್ತಾಯ

ವಿಜಯನಗರ ಕಾಲುವೆಯಿಂದ ಬೇಸಿಗೆ ಬೆಳೆಗೆ ನೀರು ಕಲ್ಪಿಸಿ ಕೆಂಚನಗುಡ್ಡ ಸಿರುಗುಪ್ಪ ರೈತರ ಒತ್ತಾಯ

 ಸಿರುಗುಪ್ಪ-ತುಂಗಭದ್ರ ನದಿಗೆ ವಿಜಯನಗರ ಸಾಮ್ರಾಜ್ಯವು ಕಟ್ಟಿದ ಅಣೆಕಟ್ಟುಗಳಿಂದ ಸಿರುಗುಪ್ಪ ತಾಲೂಕಿನ ಸಿರುಗುಪ್ಪ ಕೆಂಚನಗುಡ್ಡ ಇಬ್ರಾಹಿಂಪುರ್ ವರೆಗೆ ಸುಮಾರು 3500 ಎಕರೆ  ಮಾಗಡಿ ಜಮೀನುಗಳಿಗೆ ನೀರು ವಿಜಯನಗರ ಕಾಲುವೆ ಮೂಲಕ ನೀರು ಕಲ್ಪಿಸಲಾಗಿದ್ದು ವಿಜಯನಗರ ಕಾಲುವೆ ದುರಸ್ತಿ ಸಂದರ್ಭದಲ್ಲಿ ಆರ್ ಎನ್ ಎಸ್ ಕಂಪನಿಯು  ಕಾಲುವೆ  ಮಟ್ಟ ಎತ್ತರಿಸಿದರಿಂದ ಬೇಸಿಗೆ ಬೆಳೆಗೆ ನೀರು ಸಿಗದೇ ರೈತರಿಗೆ ತುಂಬಾ ತೊಂದರೆ ಯಾಗುತ್ತಿದೆ ಸಮಸ್ಯೆ ಪರಿಹರಿಸಲು ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶದಿಂದ ವಿಜಯನಗರ ಕಾಲುವೆಯಿಂದ ಬೇಸಿಗೆ ಬೆಳೆಗೆ ನೀರು ಕಲ್ಪಿಸುವಂತೆ ಒತ್ತಾಯಿಸಿ ಕೆಂಚನ ಗುಡ್ಡ ಮತ್ತು ಸಿರುಗುಪ್ಪ ರೈತರು ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕಚೇರಿಗೆ ತೆರಳಿ ಸಹಾಯಕ ಅಭಿಯಂತರ ವಿಜಯೇಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಿದರು ನೀರಾವರಿ ಇಲಾಖೆಯ ಜೆ ಇ ವಿಜಯೇಂದ್ರ ಮನವಿ ಪತ್ರ ಸ್ವೀಕರಿಸಿ ಮಾತನಾಡಿ ಕಾಲುವೆ ಅಧುನಿಕರಣ ಕಾರ್ಯವನ್ನು ಕ್ರಿಯಾ ಯೋಜನೆಯ ಪ್ರಕಾರ ಮಾಡಲಾಗುತ್ತಿದೆ ಇದರಿಂದ ರೈತರಿಗೆ ಉಂಟಾಗಿರುವ ತೊಂದರೆ ಸಮಸ್ಯೆಯ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು. ರೈತರದ ಸುಣಕಲ್ ಮುದುಕಪ್ಪ ಪಡಿ ಯಂಕೊಬ, ಸರ್ಮಸ್, ಸರ್ದಾರ್, ಎನ್ ವಿರಬಸವನಗೌಡ, ಆರ್ ಯಲ್ಲಯ್ಯ, ಹೆಚ್ ವೀರೇಶ ರಾವ್, ವೆಂಕೋಬ , ಭಾಷಾ, ಬಸವರಾಜ, ಮಾರೆಪ್ಪ, ಅಯ್ಯಪ್ಪ ಹಾಜಿ ಚೌದ್ರಿ ಖಾಜಾ ಸಾಬ್, ಹಾಜಿ ಮುಹಮ್ಮದ್ ಇಬ್ರಾಹಿಂ, ಮಹಮ್ಮದ್ ರಫಿ, ಮಹಮ್ಮದ್ ನೌಶಾದ್ ಅಲಿ  ರೈತರು ಇದ್ದರು. ಇಲ್ಲಿನ ರೈತರು ಜಿಲ್ಲಾಧಿಕಾರಿಗಳು ತಹಸಿಲ್ದಾರ್ ನೀರಾವರಿ ಇಲಾಖೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು ಆದರೆ ನೀರು ಹರಿಸಲು ತೊಂದರೆಯಾಗದಂತೆ ಜಮೀನುಗಳಲ್ಲಿ ನೀರು ಹರಿಸಲಾಗುವುದು ಎಂದು ಭರವಸೆ ನೀಡಿದ್ದು ಸುಳ್ಳಾಗಿದೆ ಎಂದು ರೈತ ಎಸ್ ಮುದುಕಪ್ಪ ಈ ಸಂದರ್ಭದಲ್ಲಿ  ತರಾಟೆಗೆ ತೆಗೆದುಕೊಂಡರು.

ಸುದ್ದಿ ಓದಿ