ಬಳ್ಳಾರಿ

ವ್ಯಕ್ತಿ ಕಾಣೆ; ಪತ್ತೆಗೆ ಮನವಿ

ವ್ಯಕ್ತಿ ಕಾಣೆ; ಪತ್ತೆಗೆ ಮನವಿ

ಬಳ್ಳಾರಿ,ಅ.18: ಕುಡತಿನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಿ​‍್ರಸ್ವಾಮಿ ಎನ್ನುವ 54 ವರ್ಷದ ವ್ಯಕ್ತಿಯು ಕಾಣೆಯಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿ ತಿಳಿಸಿದ್ದಾರೆ. 

ವ್ಯಕ್ತಿಯ ಚಹರೆ ಗುರುತು: ಎತ್ತರ 156 ಸೆಂ.ಮೀ., ತೆಳ್ಳನೇಯ ಮೈಕಟ್ಟು, ಕಪ್ಪು-ಬಿಳಿ ಮಿಶ್ರೀತ ಕೂದಲು, ಗೋಧಿ ಮೈಬಣ್ಣ, ಉದ್ದನೇಯ ಮುಖ ಹೊಂದಿರುತ್ತಾನೆ. 

ಕನ್ನಡ, ತೆಲುಗು ಭಾಷೆ ಮಾತನಾಡುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ಬಾದಾಮಿ ಬಣ್ಣದ ತುಂಬು ತೋಳಿನ ಅಂಗಿ, ಕಪ್ಪು ಕಂದು ಬಣ್ಣದ ಲುಂಗಿ ಧರಿಸಿರುತ್ತಾನೆ. 

ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕುಡುತಿನಿ ಪೊಲೀಸ್ ಠಾಣೆಯ ದೂ.08393-263433, ದೂ.08392-248100, ದೂ.08392-258400 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ