ನನ್ನ ಅಭಿವೃದ್ಧಿಯ ಕೆಲಸವೇ, ನನ್ನ ಗೆಲುವಿಗೆ ಶ್ರೀರಕ್ಷೆ
ಮುದ್ದೇಬಿಹಾಳ : ನಮ್ಮ ದೇಶಕ್ಕೆ ಒಬ್ಬ ಮಾಹಾನ್ ವ್ಯಕ್ತಿ ಮೋದಿ ಪ್ರದಾನಿಯಾಗಿದ್ದಾನೆ, ಈಗ ಎಲ್ಲಿಯೂ ಭಯೋತ್ಪಾದನೆಯಂತಹ ಚಟುವಟಿಕೆಗಳು ನಡೆಯುತ್ತಿಲ್ಲಾ, ಕಾಂಗ್ರೇಸ್ ಪಕ್ಷ ಮುಳುಗಿರುವ ಹಡಗು, ನಮ್ಮ ಮತಕ್ಷೇತ್ರದಲ್ಲಿ ಈ ಹಿಂದೆ ನಿವುಗಳು ಇಪ್ತೈದು ವರ್ಷಗಳ ಅಧಿಕಾರ ಒಬ್ಬರಿಗೆ ಕೋಟ್ಟಿದ್ದಿರಿ, ನಮ್ಮ ಮತಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಆಗಿಲ್ಲದಿರುವದು ನೀವುಗಳು ನೋಡಿದ್ದಿರಿ.
ನಾನು ಅದಿಕಾರಕ್ಕೆ ಬಂದಾಗಿನಿಂದ ಗ್ರಾಮೀಣ ಪ್ರದೇಶಕ್ಕೆ ಬೇಕಾಗಿರುವ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಮುಂದೆಯೂ ನಮ್ಮ ಮತಕ್ಷೇತ್ರದ ಅಭಿವೃದ್ಧಿಗೆ ನಾನು ನಿರಂತರ ಶ್ರಮಿಸುತ್ತೇನೆ, ನೀರಾವರಿ, ಹೈನುಗಾರಿಕೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿ ನಮ್ಮ ಹೇಣ್ಣು ಮಕ್ಕಳಿಗೆ ಹಸುಗಳನ್ನು ನೀಡುವದರ ಮೂಲಕ ಆಧಾಯ ದುಪ್ಪಟ್ಟು ಮಾಡುವ ಕಾರ್ಯ ಮುಂದಿನ ದಿನಗಳಲ್ಲಿ ಪ್ರಾಯೋಜನೆ ಹಾಕಿಕೊಳ್ಳಲಾಗುವದು ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ತಾಲೂಕಿನ ನಾಗರಬೇಟ್ಟ ಮತ್ತು ಬೂದಿಹಾಳ ಪಿ ಎನ್ ಗ್ರಾಮದಲ್ಲಿ ಕೆಬಿಜೆಎನ್ಎಲ್ ಅಡಿಯಲ್ಲಿ 88/53 ಲಕ್ಷ ರೂ.ವೆಚ್ಚದ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೇರೆವೆರಿಸಿ ಮಾತನಾಡಿದ ಅವರು ಜನಸಾಮಾನ್ಯರಿಗೆ ಸೂಕ್ತವಾದ ಸೌಲಭ್ಯಗಳು ಎಷ್ಟು ಬೇಕೋ ಅಷ್ಟು ಅನುದಾನವನ್ನು ಕೋಟ್ಟಿದ್ದೇನೆ,
ನಾನು ಈ ಮೊದಲು ಈ ನಾಗರಬೇಟ್ಟ , ಭೂದಿಹಾಳ ಪಿ ಎನ್ ಗ್ರಾಮಗಳಿಗೆ ಬೇಟೆ ನೀಡಿದಾಗ ತೀರಾ ಹಿಂದುಳಿದ ಗ್ರಾಮಗಳಲ್ಲಿ ಇವುಗಳಿದ್ದವು, ಆದರೆ ನಾನು ಅಧಿಕಾರಕ್ಕೆ ಬಂದಾಗಿನಿಂದ ಈ ಭಾಗದ ಹಲವು ಗ್ರಾಮಗಳಿಗೆ ಸಂಚಾರ ಕೂಡುವ ಪ್ರಮುಖ ರಸ್ತೇಯನ್ನು ಸುಮಾರು ಕೋಟಿ ಅನುದಾನ ತಂದ್ದಿದ್ದೇನೆ ಮುಂದಿನ ವಾರದಲ್ಲಿ ಭೂಮಿಪೂಜೆಗೆ ಮರಳಿ ಬರುತ್ತೆನೆ ಸದ್ಯ ನಾಗರಬೇಟ್ಟ ಗ್ರಾಮಕ್ಕೆ 88ಲಕ್ಷ, ಮತ್ತು ಭೂದಿಹಾಳ ಪಿ ಎನ್ ಗ್ರಾಮಕ್ಕೆ 53 ಲಕ್ಷ ಅನುದಾನವನ್ನು ತಂದು ಸಿಸಿ ರಸ್ತೇ, ಚರಂಡಿ ಇನ್ನೀತರೆ ಕಾಮಗಾರಿಗಳನ್ನು ಗ್ರಾಮದೋಳಗೆ ಇಂದು ಭೂಮಿಪೂಜೆಯನ್ನು ನೇರೆವೇರಿಸಿದ್ದೆವೆ,
ಈ ಎರಡು ಗ್ರಾಮಗಳಲ್ಲಿ ಎಲ್ಲಾ ರಸ್ತೆಗಳು ಸಿಸಿ ರಸ್ತೇಯಾಗಲಿದ್ದಾವೆ, ನನ್ನ ಅಭಿವೃದ್ಧಿಯ ಕೆಲಸವೇ ನನ್ನ ಗೆಲುವಿಗೆ ಶ್ರೀರಕ್ಷೆ ಎಂದರು.
ನಂತರ ಭೂದಿಹಾಳ ಪಿಎನ್ ಗ್ರಾಮಸ್ಥರಾದ ಕಾಂತು ಮಣೂರ ಮಾತನಾಡಿ ಈ ಇಪ್ಪತೈದು ವರ್ಷಗಳಿಂದ ನಮ್ಮೂರಿಗೆ ಯಾವುದೇ ಯೋಜನೆಗಳು ಸಿಕ್ಕಿರುವದಿಲ್ಲಾ, ಸದ್ಯದ ಶಾಸಕರು ಆಯ್ಕೇಯಾದ ಪಲವಾಗಿ ನಮ್ಮೂರು ಇಂದು ಸುಧಾರಣೆಯ ಹಂತಕ್ಕೆ ತಲುಪಿದೆ, ಮುಂದಿವೂ ಇವರೇ ಶಾಸಕರಿದ್ದರೆ ನಮ್ಮೂರು ಇನ್ನೂ ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.
ಮುಖಂಡ ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ, ಬಸವರಾಜ ಗುಳಬಾಳ, ನಾನೇಗೌಡ ಸಿದ್ದರಡ್ಡಿ, ಮಲ್ಲನಗೌಡ ಪಾಟೀಲ್ ಎಮ್ ಜಿ ಮಠ, ಸುಭಾಸ ಗುರಿಕಾರ, ರುದ್ರಗೌಡ ಪಾಟೀಲ್, ಬಸವರಾಜ ವಾಲಿಕಾರ, ವಿರೇಶ ಹವಾಲ್ದಾರ, ಅಪ್ಪು ದನ್ನೂರ, ವಿಶ್ವನಾಥ ಡೋರನಹಳ್ಳಿ, ನಾಗರಬೆಟ್ಟ ಗ್ರಾಮ ಪಂ ಕಾರ್ಯದರ್ಶಿ ಅಯ್ಯಪ್ಪ ಮಲಗಲದಿನ್ನಿ, ಹುಲಗೇಪ್ಪ ಮಾದರ, ಮುದಕಪ್ಪ ರಕ್ಕಸಗಿ ಗುತ್ತಿಗೆದಾರಾದ ಕಿರಣ ಕುಲಕಣರ್ಿ, ಪ್ರಕಾಶ ಪಾಟೀಲ್, ನಾಗರಬೆಟ್ಟ, ಭೂದಿಹಾಳ ಪಿಎನ್ ಗ್ರಾಮಸ್ಥರು ಇದ್ದರು.