ಮಾರುಕಟ್ಟೆ ಹತ್ತಿರ 50ಲಕ್ಷ ವೆಚ್ಚದ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಅಸ್ತು: ಹಿಟ್ಟಿನಮಠ
ಲೋಕದರ್ಶನ ವರದಿ
ಮಹಾಲಿಂಗಪುರ 26: ಸೋಮವಾರ ಬೆಳಿಗ್ಗೆ ಪುರಸಭೆಯ ಸಭಾಭವನದಲ್ಲಿ ಪುರಸಭೆ ಅಧ್ಯಕ್ಷ ಬಸವರಾಜ ಹಿಟ್ಟಿನಮಠ ಅಧ್ಯಕ್ಷತೆಯಲ್ಲಿ ಆಡಳಿತ ಅವಧಿಯ ಕೊನೆಯ ಸಾಮಾನ್ಯಸಭೆಯು ಯಶಸ್ವಿಯಾಗಿ ಜರುಗಿತು.
ಪಟ್ಟಣದ ಮಂಗಳವಾರದ ಸಂತೆ ಮಾರುಕಟ್ಟೆಯ ಪಶ್ಚೀಮ ಭಾಗದಲ್ಲಿ ಪುರಸಭೆಯ ಉದ್ಯಮನಿಧಿಯ ಅನುದಾನದಲ್ಲಿ ಸುಮಾರು 50 ಲಕ್ಷ ವೆಚ್ಚದಲ್ಲಿ ವಾಣಿಜ್ಯ ಮಳಿಗೆಗೆಗಳನ್ನು ನಿರ್ಮಿ ಸಲು ಸಾಮಾನ್ಯಸಭೆಯಲ್ಲಿ ಸರ್ವಾನುಮತದ ಠರಾವುಪಾಸ ಮಾಡಲಾಯಿತು.ಪ್ರಮುಖ ಠರಾವು ಪಾಸ್ : ಸನ್ 2023-24ನೇ ಸಾಲಿನ ಮಂಗಳವಾರ ಸಂತೆ/ಜವಳಿ ಬಜಾರ್ ಸಂತೆಕರ ಬಹಿರಂಗ ಹರಾಜು ಮೂಲಕ ನೀಡಿದ ದರಳಿಗೆ ಮಂಜೂರಾತಿ, ಸನ್ 2019-20 ಮತ್ತು 2021-22ನೇ ಸಾಲಿನ ಎಸ್.ಎಫ್.ಸಿ ವಿಶೇಷ ಅನುದಾನದಡಿಯಲ್ಲಿ ಕರೆದಿರುವ ಕಾಮಗಾರಿಗಳಿಗೆ ದರ ಮಂಜೂರಾತಿ, ಸನ್ 2022-23ನೇ ಸಾಲಿನ ಪುರಸಭೆಯ ನಿಧಿಯಡಿಯಲ್ಲಿ ಕರೆದಿರುವ ಕಾಮಗಾರಿಗಳಿಗೆ ದರ ಮಂಜೂರಾತಿ, ಬಿನ್ ಸೇತಿಗೆಗಾಗಿ ಬಂದಿರುವ ಅರ್ಜಿಗಳಿಗೆ ನಿರಾಕ್ಷಪಣೆ ಪತ್ರ ನೀಡುವದು ಹಾಗೂ ವಿನ್ಯಾಸ ನಕ್ಷೆಗಳಿಗೆ ಅನುಮೋದನೆ ನೀಡುವದು ಸೇರಿದಂತೆ ಹಲವು ಪ್ರಮುಖ ವಿಷಯಗಳಿಗೆ ಸರ್ವಾನುಮತದ ಠರಾವು ಪಾಸ್ ಮಾಡಲಾಯಿತು.
ಪುರಸಭೆಯ ಅಧ್ಯಕ್ಷ ಬಸವರಾಜ ಹಿಟ್ಟಿನಮಠ ಮಾತನಾಡಿ ಬೇಸಿಗೆ ಬಂದಿರುವದರಿಂದ ಪಟ್ಟಣದಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಅಗತ್ಯಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಜೊತೆಗೆ ತಮ್ಮ ಅವಧಿಯಲ್ಲಿ ಸುಗಮ ಆಡಳಿತಕ್ಕೆ ಅವಕಾಶ ನೀಡಿದ ಪುರಸಭೆಯ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಸರ್ವ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿ ಸಿದರು.ಇದೇ ಸಂದರ್ಭದಲ್ಲಿ ಮಾರ್ಚ 13ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಕರ್ನಾಟಕ ಮಾಧ್ಯಮ ಅಕಾಡೆಮಿಯ 2019ನೇ ಸಾಲಿನ ಮೈಸೂರ ದಿಗಂತ ದತ್ತಿ ಪ್ರಶಸ್ತಿ ಪುರಸ್ಕೃತ ಪಟ್ಟಣದ ಪತ್ರಕರ್ತ ಚಂದ್ರಶೇಖರ ಮೋರೆ ಅವರನ್ನು ಪುರಸಭೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಪುರಸಭೆ ಸದಸ್ಯ ರವಿ ಜವಳಗಿ ಮಾತನಾಡಿ ಭಾವೈಕ್ಯತೆಗೆ ಹೆಸರುವಾಸಿಯಾದ ಮಹಾಲಿಂಗಪುರ ಪಟ್ಟಣದ ಡಬಲ್ ರಸ್ತೆಯಲ್ಲಿ ವೃತ್ತಕ್ಕೆ ಸ್ವಾಮಿ ವಿವೇಕಾಂದ ವೃತ್ತಕ್ಕೆ ನಾಮಕರಣ ಮಾಡಿದಾಗ ಉಭಯ ಕೋಮಿನ ಮಧ್ಯೆ ಸಂಘರ್ಷ ನಡೆದಿತ್ತು. ನಂತರ ಅರ್ಜುನಗೌಡ ಪಾಟೀಲ ಅವರ ಅಧ್ಯಕ್ಷತೆಯಲ್ಲಿ 21.08.2014ರಂದು ಪುರಸಭೆಯಲ್ಲಿ ಠರಾವು ಪಾಸ ಮಾಡಿ ವಿವೇಕಾನಂದ ವೃತ್ತ ಎಂದು ನಾಮಕರಣ ಮಾಡಲು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿತ್ತು. ನಂತರ ಅದನ್ನು ಯಾರು ಗಮನಿಸಲಿಲ್ಲ, ಪುರಸಭೆ ಹಾಲಿ ಅಧ್ಯಕ್ಷರು, ಮುಖ್ಯಾಧಿಕಾರಿಗಳು ಈ ಕುರಿತು ಗಂಭೀರವಾಗಿ ಪರಿಗಣಿಸಿ ತಮ್ಮ ಅವಧಿಯಲ್ಲಿಯೇ ಸ್ವಾಮಿ ವಿವೇಕಾನಂದ ವೃತ್ತ ನಿರ್ಮಿಸಬೇಕೆಂದು ಆಗ್ರಹಿಸಿದರು.
ಪುರಸಭೆ ಉಪಾಧ್ಯಕ್ಷೆ ಗೋದಾವರಿ ಬಾಟ, ಮುಖ್ಯಾಧಿಕಾರಿ ಜೆ.ಎಸ್.ಈಟಿ, ಸದಸ್ಯ ಯಲ್ಲನಗೌಡ ಪಾಟೀಲ, ಪ್ರಲ್ಹಾದ ಸಣ್ಣಕ್ಕಿ, ಮುಸ್ತಕ ಚಿಕ್ಕೋಡಿ, ರಾಜು ಗೌಡಪ್ಪಗೋಳ, ಶೇಖರ ಅಂಗಡಿ, ಡಾ|ಸವಿತಾ ಕೋಳಿಗುಡ್ಡ, ಸ್ನೇಹಲ್ ಅಂಗಡಿ, ಸರಸ್ವತಿ ರಾಮೋಜಿ, ಲಕ್ಷಿ ್ಮ ಮುದ್ದಾಪೂರ, ಸುಜಾತಾ ಮಾಂಗ, ನಾಮನಿರ್ದೇಶಿತ ಸದಸ್ಯ ಅರ್ಜುನ ಮೋಪಗಾರ, ಈರಪ್ಪ ಚುನಮರಿ, ಹಣಮಂತ ಯರಗಟ್ಟಿ, ತಿಪ್ಪಣ್ಣ ಬಂಡಿವಡ್ಡರ, ಜಯವಂತ ಕಾಗಿ, ಪುರಸಭೆ ಅಧಿಕಾರಿ ವ್ಹೀ.ಜಿ.ಕುಲಕರ್ಣಿ, ರಾಜು ಹೂಗಾರ, ಎಂ.ಕೆ.ದಳವಾಯಿ, ಮಹಾಲಿಂಗ ಮೂಗಖೋಡ, ಬಿ.ವೈ.ಮರದಿ, ರಾಜೇಶ್ವರಿ ಸೋರಗಾಂವಿ, ರಾಮು ಮಾಂಗ, ಮಹಾಲಿಂಗ ಮಾಂಗ ಅನೇಕರು ಇದ್ದರು. ಪುರಸಭೆ ಸಾಮಾನ್ಯ ಸಭೆಯಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯ 2019ನೇ ಸಾಲಿನ ಮೈಸೂರ ದಿಗಂತ ದತ್ತಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಚಂದ್ರಶೇಖರ ಮೋರೆ ಅವರನ್ನು ಪುರಸಭೆವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು