ಸಂಸ್ಕಾರಯುತ ಮಕ್ಕಳು ಸಮಾಜದ ಶ್ರೇಷ್ಠ ನಾಗರಿಕರು ಗಜಾನನ ಮನ್ನಿಕೇರಿ.
ಮಹಾಲಿಂಗಪುರ 21: ಸಂಸ್ಕಾರಯುತ ಮಕ್ಕಳು ಸಮಾಜದ ಶ್ರೇಷ್ಠ ನಾಗರಿಕರು, ಸತತ ಪರಿಶ್ರಮ ದೃಢಸಂಕಲ್ಪ ಇದ್ದರೆ ಇಡೀ ಜಗತ್ತನ್ನೇ ಗೆಲ್ಲಬಹುದು ಎಂದು ಮಹಾಲಿಂಗಪುರದ ಡಾ. ಎಸ್ ರಾಧಾಕೃಷ್ಣನ ಪ್ರಾಥಮಿಕ ಶಾಲೆಯ 17ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಚಿಣ್ಣರ ಕಲರವದಲ್ಲಿ ಧಾರವಾಡದ ಜಂಟಿ ನಿರ್ದೇಶಕರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಪರ ಆಯುಕ್ತರ ಕಚೇರಿಯ ಅಧಿಕಾರಿಗಳಾದ ಗಜಾನನ ಮನ್ನಿಕೇರಿ ಯವರು ತಿಳಿಸಿದರು.
ಮಹಾಲಿಂಗಪುರದ ಬನಶಂಕರಿ ದೇವಸ್ಥಾನದ ಸಾಂಸ್ಕೃತಿಕ ಭವನದಲ್ಲಿ ನಡೆದ ಡಾ. ರಾಧಾಕೃಷ್ಣನ್ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ಅಧ್ಯಕ್ಷತೆಯನ್ನು ಶಿಕ್ಷಣ ರತ್ನ ಪ್ರಶಸ್ತಿ ಪುರಸ್ಕೃತರು ಮತ್ತು ಸಂಸ್ಥೆಯ ಸಂಸ್ಥಾಪಕರು ಆದ ಎಸ್ ಎಂ ಉಳ್ಳೆಗಡ್ಡಿಯವರು ವಹಿಸಿದ್ದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜಂಟಿ ನಿರ್ದೇಶಕರು,ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಅಪರ ಆಯುಕ್ತರ ಕಚೇರಿ, ಧಾರವಾಡ ಜಿಲ್ಲಾ ಮುಖ್ಯ ಆಯುಕ್ತರು ಹಾಗೂ ಸಹಾಯಕ ರಾಜ್ಯ ಆಯುಕ್ತರು, ಬೆಳಗಾವಿ ವಿಭಾಗ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ಅಧಿಕಾರಿಗಳಾದ ಗಜಾನನ ಮನ್ನಿ ಕೇರಿಯವರು ವಹಿಸಿಕೊಂಡಿದ್ದರು.
ಕಾರ್ಯಕ್ರಮಕ್ಕೆ ಪುಷ್ಪಾರ್ಚನೆಯನ್ನು ಪುರಸಭೆಯ ಅಧ್ಯಕ್ಷರಾದ ಬಸವರಾಜ್ ಹಿಟ್ಟಿನಮಠ ಮತ್ತು ಸಲಹಾ ಸಮಿತಿಯ ಸದಸ್ಯರು ಆದ ಸಂಜನಾ ಬಸವರಾಜ್ ಹಿಟ್ಟಿನ ಮಠ ಅವರು ನಡೆಸಿಕೊಟ್ಟರು. ಮುಖ್ಯ ಅತಿಥಿಗಳಾದ ಗಜಾನನ್ ಮನ್ನಿಕೇರಿಯವರು ಜಗತ್ತು ಕಂಡ ಶ್ರೇಷ್ಠ ಶಿಕ್ಷಕರಾದ ಡಾ. ಎಸ್ ರಾಧಾಕೃಷ್ಣನ್ ಅವರ ಹೆಸರಿನಲ್ಲಿ ಪ್ರಾರಂಭವಾದ ಈ ಶಿಕ್ಷಣ ಸಂಸ್ಥೆ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಲಿ ನನ್ನ ಈ ಮಟ್ಟದ ಸಾಧನೆಗೆ ಕಾರಣರಾದ ಹಲವರಲ್ಲಿ ಎಸ್ಎಂ ಉಳ್ಳಾಗಡ್ಡಿ ಅವರು ಒಬ್ಬರು ಅವರು ಒಬ್ಬ ವಿಶಿಷ್ಟ ಕೃಷಿಕ ಮತ್ತು ಬಸವ ಪ್ರಿಯ ವ್ಯಕ್ತಿ ಸರಳ ಸುಸಂಸ್ಕೃತ ವ್ಯಕ್ತಿತ್ವ ಇವರು ಕಟ್ಟಿದ ಶಾಲೆಯಲ್ಲಿ ಓದಿದವರೆಲ್ಲರೂ ಓದಿ ಸಮಾಜಕ್ಕೆ ವಿಶೇಷ ವ್ಯಕ್ತಿಗಳಾಗಿರಿ ಎಂದು ಹೇಳಿದರು.ರೈತಾಪಿ ಕುಟುಂಬದಲ್ಲಿ ಹುಟ್ಟಿ ಬೆಳೆದ ನಾನು ಈಗ ಶಿಕ್ಷಣ ಇಲಾಖೆಯಲ್ಲಿ ಸುಮಾರು 35 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದು ನನ್ನ ವ್ಯಾಪ್ತಿಯಲ್ಲಿ ಸುಮಾರು 38 ಲಕ್ಷ ವಿದ್ಯಾರ್ಥಿಗಳು ಮತ್ತು ಒಂದು ಲಕ್ಷ ಶಿಕ್ಷಕರು 48000 ಶಾಲೆಗಳು ಕೆಲಸ ಮಾಡುತ್ತಿವೆ ಇದು ನನ್ನ ಸೌಭಾಗ್ಯ ಎಂದರು.
ಮಹಾಲಿಂಗಪುರ ಬೆಲ್ಲದ ನಾಡು ಇಲ್ಲಿ ಬೆಲ್ಲದಷ್ಟೇ ಸಿಹಿಯಾದಂತಹ ಒಳ್ಳೆಯ ಮನಸ್ಸುಗಳಿವೆ ನೇಕಾರಿಕೆ ನಾಡು, ಅರಿಶಿನ ಬೆಳೆದ ನಾಡು, ಇದು ಕಲೆಗಳ ತವರೂರು ಆದ್ದರಿಂದ ಇನ್ನು ಒಳ್ಳೆಯ ಪ್ರತಿಭೆಗಳು ದೊಡ್ಡ ದೊಡ್ಡ ವ್ಯಕ್ತಿಗಳು ಉದಯಿಸಲಿ ಮಕ್ಕಳಿಗಾಗಿ ಆಸ್ತಿ ಮಾಡದೆ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಿರಿ ಎಂದು ಜಂಟಿ ನಿರ್ದೇಶಕರಾದ ಗಜಾನನ್ ಮನ್ನಿಕೇರಿ ಅವರು ತಮ್ಮ ಭಾಷಣದಲ್ಲಿ ತಿಳಿಸಿದರು. ಅನಂತರ ಪುರಸಭೆಯ ಅಧ್ಯಕ್ಷರಾದ ಬಸವರಾಜ್ ಹಿಟ್ಟಿನ ಮಠ ರವರು ಮಾತನಾಡಿ 2006ರಲ್ಲಿ ಪ್ರಾರಂಭವಾದ ಈ ಶಾಲೆಯಿಂದ ಅನೇಕ ವಿದ್ಯಾರ್ಥಿಗಳು ವೈದ್ಯಕೀಯ ಕ್ಷೇತ್ರಕ್ಕೆ ಮತ್ತು ಇಂಜಿನಿಯರ್ ಕ್ಷೇತ್ರಕ್ಕೆ ಮತ್ತು ಪೊಲೀಸ್ ಹುದ್ದೆಗಳಿಗೆ ಸೇರಿ ಹಲವಾರು ಸಾಧನೆಗಳನ್ನು ಮಾಡಿದ್ದಾರೆ ಈ ಶಾಲೆ ಇನ್ನೂ ಹೆಮ್ಮರವಾಗಿ ಬೆಳೆಯಲಿ ಎಂದು ಆಶೀರ್ವದಿಸಿದರು. ನಂತರ ಸಂಸ್ಥೆಯ ಸಂಸ್ಥಾಪಕರಾದ ಎಸ್ ಎಂ ಉಳ್ಳೆಗಡ್ಡಿಯವರು ಮಕ್ಕಳಿಗೆ ಯೋಗ್ಯ ಮತ್ತು ನೈತಿಕತೆಯುಳ್ಳ ಶಿಕ್ಷಣ ನೀಡಿ ಎಂದು ಪಾಲಕರಿಗೆ ಕಿವಿಮಾತು ಹೇಳಿದರು, ಇಂದಿನ ದಿನದಲ್ಲಿ ನಮ್ಮ ದೇಶಕ್ಕೆ ನೈತಿಕ ಮತ್ತು ಗುಣಾತ್ಮಕ ಶಿಕ್ಷಣದ ಅವಶ್ಯಕತೆ ಇದೆ ಎಲ್ಲ ಪಾಲಕರು ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ಮಾಡಿ ಒಳ್ಳೆಯ ಶಾಲೆಗಳಲ್ಲಿ ಶಿಕ್ಷಣ ಕೊಡಿಸಿ ಎಂದು ಕಾರ್ಯಕ್ರಮದಲ್ಲಿ ಹೇಳಿದರು. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಪುರಸಭೆಯ ಸದಸ್ಯರಾದ ಯಲ್ಲನಗೌಡ ಪಾಟೀಲ್, ಡವಳೇಶ್ವರ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಲಕ್ಷ್ಮಣ್ ಪಟ್ಟಣಶೆಟ್ಟಿ, ಶಿವಕುಮಾರ್ ಕುಳ್ಳೊಳ್ಳಿ, ಎಸ್ ಏನ್ ಬ್ಯಾಳಿ, ವಿಷ್ಣು ಗೌಡ ಪಾಟೀಲ್, ಸಿದ್ದು ಕಾಕಂಡಕಿ, ಜಾವೇದ್ ಭಾಗವಾನ್, ಪತ್ರಕರ್ತರಾದ ಈಶ್ವರಪ್ಪಗೋಳ, ಸಲಹಾ ಸಮಿತಿಯ ಅಧ್ಯಕ್ಷರಾದ ಮಹಾಲಿಂಗ ಗೋಕಾವಿ, ಸಿದ್ದು ಹೂಗಾರ್, ರಾಘವೇಂದ್ರ ಪಾಟೀಲ್, ಪ್ರಶಾಂತ್ ಕಡೆಮನಿ, ಇಜಾಜ್ ಯಾದವಾಡ ರವರು ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಶಶಿಧರ್ ಉಳ್ಳೇಗಡ್ಡಿಯವರು ವಾರ್ಷಿಕ ವರದಿ ವಾಚನ ಮಾಡಿದರು. ಮತ್ತು ಸಂಸ್ಥೆಯ ಉಪಾಧ್ಯಕ್ಷರಾದ ಎಸ್ ಟಿ ದೇಮಟ್ಟಿ ಅವರು ಪ್ರಶಂಸೆಯ ಪ್ರಮಾಣ ಪತ್ರವನ್ನು ವಿತರಿಸಿದರು. ಮತ್ತು ವೇದಿಕೆಯ ಮೇಲೆ ಆಸಿನರಾದ ಗಣ್ಯರಿಗೆ ಕಾರ್ಯದರ್ಶಿಗಳಾದ ಶಶಿಧರ್ ಉಳ್ಳಾಗಡ್ಡಿ, ದೇವರೇಶ ಉಳ್ಳೆಗಡ್ಡಿ, ಗಂಗಾಧರ್ ಗಾಡಿಕಾರ್ , ಸಿದ್ದಾರೂಡ ಮುಗಳಖೋಡ, ಮಹಾದೇವ್ ಕುಲಗೋಡ, ಶ್ರೀನಿವಾಸ್ ಕಾಂಬ್ಲೆಕರ್, ಎಂ ಎಸ್ ಮಠ್, ರವಿ ಲಮಾಣಿ, ಆರ್ ಕೆ ಕಂಬಾರ್, ಬಿ ಎಲ್ ಮನ್ನಿ ಕೇರಿ, ಸಿ ವಿ ಹುಣಶ್ಯಾಳ, ಸಿ ವಿ ದಾದನಟ್ಟಿ ಇನ್ನಿತರರು ಸೇರಿ ನೆನಪಿನ ಕಾಣಿಕೆಯನ್ನು ವಿತರಿಸಿದರು. ಕಾರ್ಯಕ್ರಮವನ್ನು ಏಳನೇ ತರಗತಿಯ ವಿದ್ಯಾರ್ಥಿನಿಯಾದ ಶ್ರೇಯಾ ವಸ್ತ್ರದ ಹಾಗೂ ಸಂಗಡಿಗರಿಂದ ಪ್ರಾರ್ಥನೆ ಮುಖಾಂತರ ಪ್ರಾರಂಭಿಸಿದರು. ಎ ಐ ಗೊಲಬಾವಿ ಮತ್ತು ಸಣ್ಣಕ್ಕಿ ಗುರು ಮಾತೆಯರು ಸ್ವಾಗತ ಭಾಷಣ ನಡೆಸಿಕೊಟ್ಟರು. ಪಿ ಡಿ ಕಾಗಿ ಮತ್ತು ಪಿ ಎಂ ಗೊಲಬಾವಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.