ಮಹಲಿಂಗಪುರ

ಆದರ್ಶ ರಾಷ್ಟ್ರ ನಿರ್ಮಾಣಕ್ಕಾಗಿ ಕಂಕಣ ಬದ್ದರಾಗಿ : ಪೂಜ್ಯ ರಮಾನಂದಗೌಡ

ಆದರ್ಶ ರಾಷ್ಟ್ರ ನಿರ್ಮಾಣಕ್ಕಾಗಿ ಕಂಕಣ ಬದ್ದರಾಗಿ : ಪೂಜ್ಯ ರಮಾನಂದಗೌಡ

ಸನಾತನ ಹಿಂದೂ ಧರ್ಮ ಜಾಗೃತಿ ಕಾರ್ಯಕ್ರಮ.

ಮಹಾಲಿಂಗಪುರ: ಇಂದು ಹಿಂದೂಗಳಿಗೆ ಧರ್ಮ ಶಿಕ್ಷಣ ಲಭಿಸದೇ ಸಮಾಜವು ನೈತಿಕವಾಗಿ ಅದೋಗತಿಗೆ ಸಾಗುತ್ತಿರುವದರಿಂದ ಪ್ರತಿಯೊಬ್ಬ ಹಿಂದೂ ಧರ್ಮ ಶಿಕ್ಷಣ ಪಡೆದುಕೊಂಡು ಧರ್ಮಾಚರಣೆಯ ಮೂಲಕ ಅಧ್ಯಾತ್ಮ ಬಲ ಹೆಚ್ಚಿಸಿ ರಾಮರಾಜ್ಯದಂತಹ ಆದರ್ಶ ರಾಷ್ಟ್ರ ನಿಮರ್ಾಣಕ್ಕಾಗಿ ಕಂಕಣ ಬದ್ದರಾಗಬೇಕಿದೆ ಎಂದು ಮಂಗಳೂರು ಸನಾತನ ಸಂಸ್ಥೆಯ ಧರ್ಮ ಪ್ರಚಾರಕರಾದ ಪೂಜ್ಯ ರಮಾನಂದಗೌಡ ಹೇಳಿದರು.

ಪಟ್ಟಣದ ಬನಶಂಕರಿ ದೇವಸ್ಥಾನದ ಮಿನಿ ಭವನದಲ್ಲಿ ಸನಾತನ ಸಂಸ್ಥೆಯಿಂದ ಜರುಗಿದ ಹಿಂದೂ ಧರ್ಮ ಜಾಗೃತಿ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು. ಹಿಂದೆ ಗುರುವಿನ ಮೂಲಕ ಜ್ಞಾನವನ್ನು ಪಡೆದು ಶಿಷ್ಯರು ಸಾಧನೆಯನ್ನು ಮಾಡುತ್ತಿದ್ದರು. ಭಾರತದಲ್ಲಿ ಗುರುವಿಗೆ ಅಗ್ರಸ್ಥಾನವಿದೆ. ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಹಕ್ಕಬುಕ್ಕರು ಸಹ ತಮ್ಮ ರಾಜ್ಯ ಸ್ಥಾಪನೆಯನ್ನು ಮಾಡುವಾಗ ಗುರುಗಳ ಮಾರ್ಗದರ್ಶನ ಪಡೆದು ಮಾಡಿದ್ದರಿಂದ ಅವರ ಧರ್ಮ ಸಂಸ್ಥಾಪನೆಯ ಕಾರ್ಯವು ಪೂರ್ಣವಾಯಿತು.

ಇಂದು ನಾವು ಸಹ ರಾಮರಾಜ್ಯದಂತಹ ಆದರ್ಶ ಸಮಾಜ ನಿರ್ಮಾಣ ಕಾರ್ಯವನ್ನು ಗುರುಗಳ ಮಾರ್ಗದರ್ಶನ ಪಡೆದು ಕೆಲಸ ಮಾಡಿದರೆ ಮಾಡುವ ಕೆಲಸದಲ್ಲಿ ಯಶಸ್ಸು ಖಂಡಿತ ಸಿಗುತ್ತದೆ. ದೇಶದಲ್ಲಿ ಧರ್ಮ ಉಳಿಯಬೇಕಾದರೆ ನಾವೇಲ್ಲರೂ ಹಿಂದೂಗಳಯ ಧರ್ಮಾಚರಣೆ ಮಾಡುವ ಅಧ್ಯಾತ್ಮೀಕ ಸಾಧನೆಯನ್ನು ಹೆಚ್ಚಿಸಿಕೊಂಡು ದೇಶ ಮತ್ತು ಧರ್ಮದ ಉಳಿಗಾಗಿ ಶ್ರಮಿಸಿರಿ ಎಂದರು.

ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಗುರುಪ್ರಸಾದಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪುರಸಭೆ ಅಧ್ಯಕ್ಷ ಬಸವರಾಜ ಹಿಟ್ಟಿನಮಠ, ಹಿಂದೂ ಸಂಘಟನೆಗಳ ಯುವಕರಾದ ಮಂಜುನಾಥ ಭಾವಿಕಟ್ಟಿ, ನಂದು ಲಾತೂರ, ಹಣಮಂತ ನಾವ್ಹಿ, ಸಚೀನ ಕಲ್ಮಡಿ, ರಾಘು ಪವಾರ, ದತ್ತ ಯರಗಟ್ಟಿಕರ, ರಾಘು ಗರಗಟ್ಟಿ, ಚಂದ್ರಶೇಖರ ಮೋರೆ, ರವಿ ಹುಣಶ್ಯಾಳ, ಕೃಷ್ಣ ಕಳ್ಳಿಮನಿ, ಯಲ್ಲಪ್ಪ ಬನ್ನೆನ್ನವರ, ಶಿವಾನಂದ ಹುಣಶ್ಯಾಳ, ಬಸವರಾಜ ಗಗಿರಿಸಾಗರ, ಸಾಗರ ಪರೀಟ, ಹಿರಿಯರಾದ ಎಸ್.ಆಯ್.ಕುಂದಗೋಳ, ಮಹಾದೇವ ಮಾರಾಪೂರ, ಆಯ್.ಎಸ್.ಪಾಟೀಲ, ಗೊಲೇಶ ಅಮ್ಮಣಗಿ, ಎಂ.ಎಸ್.ಮನ್ನಯ್ಯನವರಮಠ, ಎಂ.ಕೆ.ಸಂಗನ್ನವರ, ಈರಣ್ಣ ಹಲಗತ್ತಿ, ಎಸ್.ಎನ್.ಬ್ಯಾಳಿ, ಬಸವರಾಜ ಪರೀಟ, ವೀರಭದ್ರ ಮುಗಳ್ಯಾಳ, ವಿನೋದ ಸಿಂಪಿ, ಬಸವರಾಜ ಮಡಿವಾಳರ, ವಿನೋದ ಚಮಕೇರಿ ಸೇರಿದಂತೆ ಹಲವರು ಇದ್ದರು.


ಸುದ್ದಿ ಓದಿ