ಹುಕ್ಕೇರಿ

ಸರಳವಾಗಿ ಬಕ್ರೀದ್ ಹಬ್ಬ ಆಚರಣೆ

ಸರಳವಾಗಿ ಬಕ್ರೀದ್ ಹಬ್ಬ ಆಚರಣೆ

ಹುಕ್ಕೇರಿ, ಆಗಸ್ಟ್ 1:  ತಾಲೂಕಿನಲ್ಲಿ ಅತಿ ಸರಳವಾಗಿ ಬಕ್ರೀದ್ ಹಬ್ಬವನ್ನು ಆಚರಿಸಲಾಯಿತು.  ಪ್ರತಿ ವರ್ಷ ಬಕ್ರೀದ್ ಹಬ್ಬದ ದಿನದಂದು ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗುತ್ತಿತ್ತು. ಪ್ರವಾದಿ ಇಬ್ರಾಹಿಂ ಅವರ ಬದುಕು ಮತ್ತು ತ್ಯಾಗ ಬಲಿದಾನ ಕುರಿತು ಧರ್ಮಗುರುಗಳು ಸಂದೇಶ ನೀಡುತ್ತಿದ್ದರು. ಪ್ರಾರ್ಥನೆ ನಂತರ ಮುಸ್ಲಿಮರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೋಳ್ಳುತ್ತಿದ್ದರು, ಆದರೆ ಕೊರೊನಾ ಸೋಂಕು ನಿಯಂತ್ರಣ ದೃಷ್ಟಿಯಿಂದ ಈ ಸಲ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿಷೇಧಿಸಲಾಗಿದೆ  ಹಾಗಾಗಿ ಪ್ರತಿಯೊಬ್ಬರು ಮಸೀದಿಗಳಲ್ಲೆ ದೈಹಿಕ ಅಂತರ ಕಾಪಾಡಿಕೊಂಡು ಪ್ರಾರ್ಥನೆ ಸಲ್ಲಿಸಿದರು. ಕಡ್ಡಾಯವಾಗಿ ಮಾಸ್ಕ ಮತ್ತು ಸಾನಿಟೈಜರ ಬಳಸಿ ಮಸೀದಿ ಪ್ರವೇಶ ಮಾಡಿದರು. 

ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಪುರಸಭೆ ಉಪಾದ್ಯಕ್ಷ  ಶಹಜಾನಬಡಗಾಂವಿ ಕೋವಿಡ್19 ಇಡಿ ದೇಶವನ್ನು ಆವರಿಸಿದ ಹಿನ್ನಲೆಯಲ್ಲಿ ಹುಕ್ಕೇರಿಯ ವಿವಿಧ ಮಸೀದಿ ಗಳಲ್ಲಿ ಶಾಂತ ಮತ್ತು ಸರಳ ರೀತಿಯಿಂದ ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ ಹಾಗೂ ಸೈನಿಟೈಜರ ಬಳಸಿ ಅಲ್ಲಾನ ಪ್ರಾರ್ಥನೆ ಮಾಡಿ ದೇಶಕ್ಕೆ ಅಂಟಿಕೊಂಡ ಮಹಾಮಾರಿಯನ್ನು ಹೋಗಲಾಡಿಸುವಂತೆ ಬೇಡಿಕೊಳ್ಳಲಾಯಿತು ಎಂದರು.ಮುಸ್ಲಿಂ ಸಮುದಾಯದ ಮುಖಂಡ  ಸಮೀದ ಖಾನಜಾದೆ ಮಾತನಾಡಿ  ಕೊರೊನಾ ವೈರಸ್ ಹಿನ್ನಲೆಯಲ್ಲಿ ಹಬ್ಬದ ಶುಭಾಶಯ ಕೊರಲು ಸಂಬಂಧಿಕರು ಮತ್ತು ಸ್ನೆಹಿತರ ಮನೆಗೆ ಹೋಗಲಿಲ್ಲಾ  ಗಣ್ಯರನ್ನು ಊಟಕ್ಕೆ ಆಹ್ವಾನಿಸಲಿಲ್ಲಾ ಕೊರೊನಾ ನಿಯಂತ್ರಣ ದೃಷ್ಟಿಯಿಂದ ಸಕರ್ಾರ ಪ್ರಕಟಿಸಿದ ಮಾರ್ಗಸೂಚಿ ಪಾಲಿಸಿ ಮನೆಯಲ್ಲಿ ಕುಟುಂಬಸ್ಥರ ನಡುವೆ ಹಬ್ಬವನ್ನು ಆಚರಿಸಿದೆವು ಎಂದರು.

ಈ ಸಂದರ್ಭದಲ್ಲಿ ಇಮಿತ್ಯಾಜ ನದಾಫ, ಅಸ್ಲಂ ಶೇಕಬಡೆ, ಸುಭಾನಿ ಶೇಕಬಡೆ, ಮೋಹಿನ ನದಾಫ, ಮುಸ್ತಾಕ ಶೇಕಬಡೆ, ಜುನೇದ ನದಾಫ, ಖುತುಬುದ್ದಿನ ಮುಜಾವರ, ಗಂಗೂಲಿ ಮಕಾನದಾರ ಉಪಸ್ಥಿತರಿದ್ದರು .

ಸುದ್ದಿ ಓದಿ