ಮಹಲಿಂಗಪುರ

ವಿದ್ಯಾರ್ಥಿನಿಯರು ಪುರೋಭಿವೃದ್ಧಿಗೆ ಹೆಚ್ಚು ಗಮನ ನೀಡಬೇಕು: ಕುಂದಗೋಳ

ವಿದ್ಯಾರ್ಥಿನಿಯರು ಪುರೋಭಿವೃದ್ಧಿಗೆ ಹೆಚ್ಚು ಗಮನ ನೀಡಬೇಕು: ಕುಂದಗೋಳ
ಮಹಾಲಿಂಗಪುರದ ಎಸ್ಸಿಪಿ ಪಪೂ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಕೆಎಲ್ಇ ಪಾಲಿಟೆಕ್ನಿಕ್ ಪ್ರಾಚಾರ್ಯ ಎಸ್.ಐ,.ಕುಂದ

ಮಹಾಲಿಂಗಪುರ: ಶಿಕ್ಷಣ ಕೇವಲ ಜ್ಞಾನಕ್ಕೆ ಸೀಮಿತವಾಗದೇ ಅದು ಪರಿಜ್ಞಾನವಾಗಿ ಬದುಕಿಗೆ ಆಧಾರವಾಗಬೇಕು. ವಿದ್ಯಾರ್ಥಿನಿಯರು ಪುರೋಭಿವೃದ್ಧಿಗೆ ಹೆಚ್ಚು ಗಮನ ನೀಡಬೇಕು ಎಂದು ಕೆಎಲ್ಇ ಪಾಲಿಟೆಕ್ನಿಕ್ ಪ್ರಾಚಾರ್ಯ ಎಸ್.ಐ,.ಕುಂದಗೋಳ ಹೇಳಿದರು. 

ಸ್ಥಳೀಯ ಎಸ್ಸಿಪಿ ಪಪೂ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ವಿದ್ಯಾರ್ಥಿನಿಯರು ಓದಿನಲ್ಲಿ ಯಾವಾಗಲೂ ಮುಂದೆ ಇದ್ದು ಶೈಕ್ಷಣಿಕ ಪರೀಕ್ಷೆಯಲ್ಲಿ ಪಾಸಾಗುತ್ತಾರೆ. ಆದರೆ ಜೀವನ ಪರೀಕ್ಷೆಯಲ್ಲಿ ಫೇಲಾಗದಂತೆ ಎಚ್ಚರ ವಹಿಸಬೇಕು. ಔದ್ಯೋಗಿಕ ರಂಗದಲ್ಲಿ ಸಕ್ರೀಯರಾಗಿ ತಮ್ಮ ಆರ್ಥಿ ಕ ಭದ್ರತೆ ಮತ್ತು ಜೀವನ ಸುರಕ್ಷತೆಗೆ ಬೇಕಾದ ಸಿದ್ದತೆ ಮಾಡಿಕೊಳ್ಳಬೇಕು ಎಂದರು. 

ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ. ಕೃಷ್ಣಪ್ಪ ಪಿ ಮಾತನಾಡಿ ಶಿಕ್ಷಣ ಸಂಸ್ಥೆಗಳು ನಿರುದ್ಯೋಗಿಗಳನ್ನು ಉತ್ಪಾದಿಸುವ ಕಾರ್ಖಾನೆಗಳಾಗಬಾರದು ಎಂದರು. ಕಸಾಪ ಸ್ಥಳೀಯ ಘಟಕದ ಅಧ್ಯಕ್ಷ ಬಸವರಾಜ ಮೇಟಿ ಮಾತನಾಡಿ, ವಿದ್ಯಾರ್ಥಿಗಳು ನೈತಿಕ ಚೌಕಟ್ಟನ್ನು ಮೀರದಂತೆ ಮೌಲ್ಯಾಧರಿತ ಶಿಕ್ಷಣದ ಅಗತ್ಯವಿದೆ ಎಂದರು. ಪತ್ರಕರ್ತ ಮಹೇಶ ಮನ್ನಯ್ಯನವರಮಠ ಅವರನು ಸನ್ಮಾನಿಸಲಾಯಿತು.

ವಿದ್ಯಾರ್ಥಿ  ಸಮೀರ ಮುಲ್ಲಾ ಚಿತ್ರಿಸಿದ ತಮ್ಮ ಉಪನ್ಯಾಸಕರ ಭಾವಚಿತ್ರಗಳನ್ನು ಗುರುಕಾಣಿಕೆಯಾಗಿ ನೀಡಿದ್ದು ವಿಶೇಷವಾಗಿತ್ತು. ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಪ್ರತಿಭಾವಂತರಿಗೆ ಸನ್ಮಾನಿಸಲಾಯಿತು. ಪ್ರಾಚಾರ್ಯ ಡಿ.ಬಿ.ಕೋಳಿ ಅಧ್ಯಕ್ಷತೆ ವಹಿಸಿದ್ದರು. ಕೆಎಲ್ಇ ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಡಾ.ಬಿ.ಎಸ್.ಅಂಬಿ, ಅಶೋಕ ಅಂಗಡಿ, ಸಂತೋಷ ಹುದ್ದಾರ, ಬಸವರಾಜ ಢಪಳಾಪೂರ, ಡಾ.ಪ್ರವೀಣ ಪಾಶ್ಚಾಪೂರ, ಪ್ರಾಚಾರ್ಯ ಡಾ.ಕೆ.ಎಂ.ಅವರಾದಿ, ಉಪಪ್ರಾಚಾರ್ಯ ಬಿ.ಎನ್.ಅರಕೇರಿ, ದುಂಡಪ್ಪ ಜಾಧವ ಹಾಗೂ ಉಪನ್ಯಾಸಕ ಸಿಬ್ಬಂದಿ ಇದ್ದರು. 



ಸುದ್ದಿ ಓದಿ