ಪ್ರತಿಯೊಬ್ಬರ ಬದುಕು ಸಮೃದ್ಧತೆಯಿಂದ ಕೂಡಿ, ಸ್ವಾವಲಂಬಿಗಳಾಗಿ ಜೀವನ ಸಾಗಿಸಿ: ಅಂಬಾದಾಸ್
ಮಹಾಲಿಂಗಪುರ : ಪ್ರತಿಯೊಬ್ಬರ ಬದುಕು ಸಮೃದ್ಧತೆಯಿಂದ ಕೂಡಿ, ಸ್ವಾವಲಂಬಿಗಳಾಗಿ ಜೀವನ ಸಾಗಿಸಲು ಅನುವು ಆಗುವಂತೆ ತೇರದಾಳ ಕ್ಷೇತ್ರದಲ್ಲಿ ಆಡಳಿತ ನಡೆಸುತ್ತೇನೆ ಎಂದು ಸ್ವಾಭಿಮಾನಿ ಸಮಾವೇಶದ ರೂವಾರಿ ತೇರದಾಳ ಮತ ಕ್ಷೇತ್ರದ ಭಾವಿ ಪಕ್ಷೇತರ ಅಭ್ಯಥರ್ಿ ಅಂಬಾದಾಸ ಕಾಮೂತರ್ಿ ಹೇಳಿದರು.
ಸಮೀಪದ ಬನಹಟ್ಟಿಯ ಎಸ್ ಆರ್. ಎ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ಮೂಲಕ ಸ್ವಾಭಿಮಾನಿ ಸಮುದಾಯಗಳ ಸಮಾವೇಶದಲ್ಲಿ ಸೇರಿದ ಜನತೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಎಲ್ಲ ವರ್ಗಗಳ ಜನರಿಗೆ ಶ್ರೀಗಳ ಆಶೀವರ್ಾದ ದೊರೆಯಬೇಕು ಮತ್ತು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕವಾಗಿ ಹಿಂದುಳಿದ, ನೇಕಾರ, ರೈತ ಮತ್ತು ಇನ್ನಿತರ ಸಮುದಾಯಗಳ ಸ್ಥಿತಿ-ಗತಿ ಬಗ್ಗೆ ಎಲ್ಲರಿಗೂ ಮನವರಿಕೆಯಾಗಬೇಕು ಹಾಗೂ ತಾವು ಪರಸ್ಪರ ಚರ್ಚೆ ಮಾಡಿ ನಾವು ಪ್ರಗತಿ ಹೊಂದುವಲ್ಲಿ ಎಲ್ಲಿ ಎಡುವಿದ್ದೇವೆ ಎಂಬ ವಿಚಾರ ನಿಮ್ಮಲ್ಲಿಯೂ ಸಹ ಹುಟ್ಟಬೇಕು ಎಂಬ ಸದುದ್ದೇಶದಿಂದ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಹೊರತು ಇದರಲ್ಲೆನೂ ನನ್ನ ಸ್ವಾರ್ಥ ಅಡಗಿಲ್ಲ, ನಾನು ಬಣ್ಣದ ಮಾತುಗಳನ್ನು ಆಡುವ ಸಂಸ್ಕೃತಿಯವನೂ ಅಲ್ಲ, ನಿಮ್ಮ ಬದುಕಿನ ಮಾರ್ಗ ಬದಲಾಗಬೇಕೆಂಬ ನಿಟ್ಟಿನಲ್ಲಿ ನಾನು ಸಹ ಪರೋಪಕಾರಿ ಕನಸ್ಸು ಕಂಡಿದ್ದೇನೆ ಅದು ನನಸಾಗಲು ಸ್ವಾಭಿಮಾನಿ ಮತದಾರರಾದ ತಾವು ನನಗೆ ಆಶಿರ್ವಾದ ಮಾಡಬೇಕು ಎಂದರು.
ಮಹಾಲಿಂಗಪುರದ ಸಹಜಾನಂದ ಶ್ರೀಗಳು ಆಶೀರ್ವಚನ ನೀಡಿ, ಅಂಬಾದಾಸ ಕಾಮೂರ್ತಿ ಅವರಿಗೆ ದೇವರು ಐಶ್ವರ್ಯವನ್ನು ಕರುಣಿಸಿದ್ದಾನೆ ಅವರು ನಿಷ್ಕಾಮ ಮನಸ್ಸಿನಿಂದ ಆಥರ್ಿಕ ಹಿಂದುಳಿದ ವರ್ಗಗಳ ಜನತೆಯ ಸೇವೆ ಮಾಡಲು ಬಂದಿದ್ದಾರೆ. ಇದು ದೇವರ ಕೃಪೆಯಿಂದ ಮಾತ್ರ ಸಾಧ್ಯವಾಗಿದೆ ಎಂದರು.
ಸಾಹಿತಿ ಸಿಧ್ಧರಾಜ ಪೂಜಾರಿ ಪ್ರಾಸ್ತಾವಿಕ ಮಾತನಾಡಿ, ಕಾಮೂರ್ತಿ ಅವರು ಪ್ರತಿಭಾವಂತ ಇಂಜಿನಿಯರ ಮತ್ತು ಉದ್ಯಮಿಯಾಗಿ ಅಷ್ಟೇ ವಿನಯಶೀಲರೂ ಹೌದು. ಈ ಭಾಗದಲ್ಲಿ ಅವರು ಕೈಗಾರಿಕೆ, ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆ, ಮಹಿಳೆಯರಿಗೆ, ಯುವಕರಿಗೆ ತಜ್ಞರಿಂದ ಉದ್ಯೋಗ ತರಬೇತಿ ಶಿಬಿರಗಳು ಏರ್ಪಡಿಸಿ ಎಲ್ಲರ ಸ್ವಾಭಿಮಾನ ಬದುಕಿಗೆ ಸಾಕ್ಷಿಯಾಗಲಿದ್ದಾರೆ. ಅಷ್ಟೇ ಅಲ್ಲ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಆಥರ್ಿಕ, ಸಾಂಸ್ಕೃತಿಕ ಬದಲಾವಣೆಗೂ ಮನಸ್ಸು ಮಾಡಿದ್ದಾರೆ ಅವರ ಕನಸು ನನಸಾಗಲಿ ಮತ್ತು ಅವರು ರಾಜಕೀಯ ಕ್ಷೇತ್ರದಲ್ಲಿ ಉತ್ತರೋತ್ತರವಾಗಿ ಯಶಸ್ಸು ಕಾಣಲಿ ಎಂದು ಹಾರೈಸಿದರು.
ಬನಹಟ್ಟಿಯ ಶರಣ ಬಸವ ಶಿವಾಚಾರ್ಯ ಶ್ರೀಗಳು, ಚಿಕ್ಕಾಲಗುಂಡಿಯ ಶಿವಶರಣಾನಂದ ಶ್ರೀಗಳು ಇನ್ನೂ ಅನೇಕ ಸ್ವಾಮಿಜಿಗಳು ಮಾತನಾಡಿದರು. ವೇದಿಕೆ ಮೇಲಿರುವ ಎಲ್ಲ ಶ್ರೀಗಳು ಮತ್ತು ಅಂಬಾದಾಸ ದಂಪತಿಗಳಿಗೆ ಸನ್ಮಾನ ಜರುಗಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಚಿನ್ಮಯಾನಂದ ಶ್ರೀಗಳು, ಬಸವರಾಜ ಪಟ್ಟದಾರ್ಯ ಶ್ರೀಗಳು, ಚಿಕ್ಕ ರೇವಣಸಿಧ್ಧ ಶ್ರೀಗಳು, ಶಿವಶಂಕರ್ ಶಿವಾಚಾರ್ಯ ಶ್ರೀಗಳು, ಶ್ರೀ ನೀಲಕಂಠ ಪಟ್ಟದಾರ್ಯ ಶ್ರೀಗಳು, ಶಂಕರಾರೂಢ ಶ್ರೀಗಳು, ಯೋಗಿ ಕಲ್ಲಿನಾಥ ಶ್ರೀಗಳು, ಲಕ್ಷಣ ಮುತ್ಯಾ ಶ್ರೀಗಳು, ಕುಂಬಾರ ಗುಂಡಯ್ಯ ಶ್ರೀಗಳು, ಸೋಮಲಿಂಗ ಶ್ರೀಗಳು, ಬಾಪೂಸಾ ಬಾಲಕೃಷ್ಣ ಶ್ರೀಗಳು, ಘನ ಲಿಂಗೇಶ್ವರ ಶ್ರೀಗಳು, ಪರಮಾನಂದ ಶ್ರೀಗಳು, ಸಂಗಮೇಶ್ವರ ಶ್ರೀಗಳು, ಪ್ರಭುಜಿ ಶ್ರೀಗಳು, ಶಿವಕುಮಾರ ದೇವರು, ಶ್ರೀಮಂತ ಶ್ರೀಗಳು, ಬಸಯ್ಯ ಶ್ರೀಗಳು, ಪ್ರಭು ಮಹಾರಾಜ ಶ್ರೀಗಳು ಇನ್ನೂ ಅನೇಕ ಶ್ರೀಗಳು ವೇದಿಕೆ ಮೇಲೆ ಉಪಸ್ಥಿತರಿದ್ದರು. ರ/ಬ ತಾಲೂಕಿನ ಸಾಹಿತ್ಯ ಪರಿಷತ್ ಅಧ್ಯಕ್ಷ ಮ ಕ್ರ.ಮೇಗಾಡಿ ಸ್ವಾಗತಿಸಿ, ಮಾಧವಾನಂದ ಗುಡ್ಲಿ ಮತ್ತು ಸಂಗೀತ ಹಿರೇಮಠ ನಿರೂಪಿಸಿ ವಂದಿಸಿದರು.