ಮುದ್ದೆಬಿಹಾಲ್

ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ವಿರುದ್ಧ ಸುಮೋಟೋ ಕೇಸ್ ದಾಖಲಿಸಿ: ಪಾಟೀಲ್

ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ವಿರುದ್ಧ ಸುಮೋಟೋ ಕೇಸ್ ದಾಖಲಿಸಿ: ಪಾಟೀಲ್

ಮುದ್ದೇಬಿಹಾಳ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಕೊಲೆ ಬೆದರಿಕೆ ಹಾಕಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ವಿರುದ್ಧ ಸುಮೋಟೋ ಕೇಸ್ ದಾಖಲಿಸಬೇಕು ಎಂದು ಅಹಿಂದ ಮುಖಂಡ ಬಾಪುಗೌಡ ಪಾಟೀಲ್ ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರುಸಚಿವರಲ್ಲಿ ಬಹಳಷ್ಟು ಮಂದಿ ಮೀರ್ ಸಾದಿಕ್ ವಂಶಸ್ಥರಿದ್ದಾರೆ. ಉನ್ನತ ಶಿಕ್ಷಣ ಸಚಿವರಾಗಿದ್ದವರೇ ಈ ರೀತಿ ಹೇಳಿಕೆ ನೀಡಿದ್ದಾರೆಂದರೆ, ಅವರು ಚುನಾವಣೆಯಲ್ಲಿ ಸೋಲುವ ಭಯದಿಂದಲೇ ಜನರನ್ನು ಪ್ರಚೋದಿಸುತ್ತಿದ್ದಾರೆ ಎಂದು ಸಚಿವರ ವಿರುದ್ದ ಕಿಡಿ ಕಾರಿದ್ದಾರೆ.ಆಯುಷ್ಯ ಕೊಡುವುದು ದೇವರು. ಅದನ್ನ ತೆಗೆಯೋದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಕೆಲವು ಮೀರ್ ಸಾದಿಕ್ ವಂಶಸ್ಥರು ಹೊಡೆದು ಹಾಕಬೇಕು ಎಂದು ಹೇಳಿಕೆ ಕೊಟ್ಟರೂ, ಲಕ್ಷಾಂತರ ಮಂದಿ ಜನರು ಸಿದ್ದರಾಮಯ್ಯ ಅವರನ್ನ ಮತ್ತೆ ವಿಧಾನಸಭೆಗೆ ಕಳುಹಿಸುತ್ತಾರೆ. ಮತ್ತು ಅವರನ್ನು ತಮ್ಮ ಜಿವನಕ್ಕಿಂತ ಹೆಚ್ಚು ಪ್ರೀತಿಸುವರಿದ್ದಾರೆ. ಇಂತ ಅವಿವೇಕಿತನದ ಹೇಳಿಕೆಯನ್ನು ಹೇಳುವದು. ಸಚುವ ಸ್ಥಾನಕ್ಕೆ ಅರ್ಹರಲ್ಲಾ.ಆದ್ದರಿಂದ ಇಂಥ ಹೇಳಿಕೆ ಕೊಟ್ಟು ರಾಜಕೀಯ ಲಾಭ ಪಡೆಯುವ ಪ್ರಯತ್ನ ಮಾಡುವುದು ಬೇಡ ಎಂದು ಕೂಡಲೇ ಇಂತಹ ಅವಿವೇಕಿ ಮಂತ್ರಿಯನ್ನು ಸಚಿವ ಸಂಪುಟದಿಂದ ಕೈ ಬಿಡದ್ದಿದ್ದರೆ, ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಬಾಪುಗೌಡ ಪಾಟೀಲ್ ಆಗ್ರಹಿಸಿದ್ದಾರೆ 

ಸುದ್ದಿ ಓದಿ