ಮಹಲಿಂಗಪುರ

ವಲಯಮಟ್ಟಕ್ಕೆ ಆಯ್ಕೆ: ವೀರಾಗ್ರಣಿ ಪ್ರಶಸ್ತಿ

ವಲಯಮಟ್ಟಕ್ಕೆ ಆಯ್ಕೆ: ವೀರಾಗ್ರಣಿ ಪ್ರಶಸ್ತಿ

ಮಹಾಲಿಂಗಪುರ 21:  ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡುವ ಮೂಲಕ ವಲಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  

ಬಾಲಕಿಯರ ಕಬಡ್ಡಿಯಲ್ಲಿ ದ್ವಿತೀಯ, 100ಮೀ ಓಟದಲ್ಲಿ ಪ್ರಥಮ, 200ಮೀ ಓಟದಲ್ಲಿ ಪ್ರಥಮ, ಉದ್ದ ಜಿಗಿತದಲ್ಲಿ ಪ್ರಥಮ, 600ಮೀ ಓಟದಲ್ಲಿ ತೃತೀಯ, ಚಕ್ರ ಎಸೆತದಲ್ಲಿ ತೃತೀಯ, ಎತ್ತರ ಜಿಗಿತದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. 

ಬಾಲಕರ ಥ್ರೋಬಾಲ್‌ನಲ್ಲಿ ದ್ವಿತೀಯ, ಎತ್ತರ ಜಿಗಿತದಲ್ಲಿ ಪ್ರಥಮ, 600ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ವಲಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 6ನೇ ತರಗತಿಯ ಬಾಲಕಿ ಅಮೃತಾ ರಮೇಶ ಪವಾರ 100ಮೀ ಓಟದಲ್ಲಿ ಪ್ರಥಮ, 200ಮೀ ಓಟದಲ್ಲಿ ಪ್ರಥಮ, ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾಳೆ. 

ಸಾಧಕ ಕ್ರೀಡಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ್ಷಕ ರವಿ ಮಠಪತಿ ಮಾರ್ಗದರ್ಶನ ಮಾಡಿದ್ದರು. ವೀರಾಗ್ರಣಿ ಬಾಲಕಿಯ ತಂದೆ-ತಾಯಿಗಳನ್ನು ಕರೆಸಿ ಅವರ ಸಮ್ಮುಖದಲ್ಲಿ ಶಾಲೆಯ ಆಡಳಿತ ಮಂಡಳಿಯವರು ಸನ್ಮಾನಿಸಿದರು. ಆಕೆಗೆ ಉಚಿತ ಶಿಕ್ಷಣ ನೀಡುವ ವಾಗ್ದಾನ ಮಾಡಿದರು. 

ಚಿತ್ರಕಲಾ ಶಿಕ್ಷಕ ಶಿವಾನಂದ ನೀಲನ್ನವರ ಆ ಬಾಲಕಿಯ ಭಾವಚಿತ್ರ ಚಿತ್ರಿಸಿ ಉಡುಗೊರೆ ನೀಡಿದರು. ಕೆಎಲ್‌ಇ ಪಾಲಿಟೆಕ್ನಿಕ್ ಪ್ರಾಚಾರ್ಯ ಎಸ್‌.ಐ.ಕುಂದಗೋಳ, ಪ್ರೌಢಶಾಲೆಯ ಉಪಪ್ರಾಂಶುಪಾಲ ಬಿ.ಎನ್‌.ಅರಕೇರಿ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜಯಶ್ರೀ ಹಿರೇಮಠ ಹಾಗೂ ಶಿಕ್ಷಕ ಸಿಬ್ಬಂದಿ ಇದ್ದರು. 


ಸುದ್ದಿ ಓದಿ