ಶಿಗ್ಗಾವ್

ತಮ್ಮೆಲ್ಲರ ಸಹಕಾರ ಬೆಂಬಲ ಅಗತ್ಯವಿದೆ : ಯಾಸೀರಖಾನ ಪಠಾಣ

ತಮ್ಮೆಲ್ಲರ ಸಹಕಾರ ಬೆಂಬಲ ಅಗತ್ಯವಿದೆ : ಯಾಸೀರಖಾನ ಪಠಾಣ

ಶಿಗ್ಗಾವಿ 27 :ತಾಲೂಕಿನ ಹುಲಗೂರಗ್ರಾಮದಲ್ಲಿಅಂಜುಮನ್‌ಕಮಿಟಿ ಹಾಗೂ ಜಮಾತಗಳ ಅಧ್ಯಕ್ಷರು, ಪದಾಧಿಕಾರಿಗಳು ಕಾಂಗ್ರೆಸ್ ಮುಖಂಡ  ಯಾಸೀರಖಾನ ಪಠಾಣ ಅವರಿಗೆ ವಿಶೇಷವಾಗಿ ಆಹ್ವಾನಿಸಿ ಸನ್ಮಾನಿಸಿದರು. 

ಮುಂಬರುವ ಶಿಗ್ಗಾವಿ ವಿಧಾನಸಭಾಕ್ಷೇತ್ರದ ಉಪ ಚುನಾವಣೆಯಲ್ಲಿ ಬೆಂಬಲಿಸುವುದಾಗಿ ಭರವಸೆ ನೀಡಿದರು. 

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಯಾಸೀರ್ ಅಹ್ಮದಖಾನ ಪಠಾಣ ತಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ಅಗತ್ಯವಿದೆ.ಈ ಹಿಂದೆ ಕಳೆದ ಸಾರ್ವತ್ರಿಕ ವಿಧಾನಸಭೆಚುನಾವಣೆಯಲ್ಲಿ ಸುಮಾರು 64038 ಮತಗಳನ್ನು ಎಲ್ಲ ಸಮುದಾಯದವರ ಆಶೀರ್ವಾದದಿಂದ ನಮ್ಮ ಪಕ್ಷಕ್ಕೆ ನೀಡಿದ್ದಾರೆ,ಇದೇರೀತಿ ಲೋಕಸಭೆಚುನಾವಣೆಯಲ್ಲಿಅಭ್ಯರ್ಥಿ ವಿನೋದ್‌ಅಸೂಟಿಅವರಿಗೆ ಸುಮಾರು 92000 ಮತಗಳ ಆಶೀರ್ವಾದ ಮಾಡಿ 8500 ಮತಗಳ ಮುನ್ನಡೆ ನೀಡಿದ ಮತದಾರ ಬಾಂಧವರಿಗೆ ಈ ಸಂದರ್ಭದಲ್ಲಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆಎಂದರು. 

ಈ ಸಂದರ್ಭದಲ್ಲಿ ಹುಲಗೂರಅಂಜುಮನ್‌ಕಮಿಟಿಅಧ್ಯಕ್ಷ  ರಿಯಾಜ್ ಮುಲ್ಲಾ, ಶಿಗ್ಗಾವಿಅಂಜುಮನ್‌ಕಮಿಟಿಅಧ್ಯಕ್ಷ ಸುಲೇಮಾನಖಾಜೇಖಾನವರ,ಗ್ರಾಮ ಪಂಚಾಯತ್‌ಅಧ್ಯಕ್ಷಜಾವೀದ ಸವಣೂರ,ಅಸಾರ ಮೊಹಲ್ಲಾಜಮಾತಅಧ್ಯಕ್ಷ  ಮೌಲಾಸಾಬ ಚಂದರಗಿ,ಸಂದಲಗರಜಮಾತ್‌ಅಧ್ಯಕ್ಷ  ಆರ್‌.ಬಿ.ಮುಲ್ಲಾ, ಪ್ಲಾಟ್‌ಜಮಾತ್‌ರಿಯಾಜ್ ಗುಳೇದ ಹಾಗೂ ಪದಾಧಿಕಾರಿಗಳು, ಕುಲಾಲ್ ಮೊಹಲ್ಲಾಜಮಾತ್‌ಅಧ್ಯಕ್ಷ  ಮೌಲಾನಾ ಕಳ್ಳಿಮನಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು. 


ಸುದ್ದಿ ಓದಿ