ಕಾಲೇಜಿನಿಂದ ಯುವಕ ಹಾಗೂ ಯುವತಿ ನಾಪತ್ತೆ
ಕಾರವಾರ 14 : ನಗರದ ನಂದನಗದ್ದಾದ ಪ್ರೀಮಿಯರ್ ಸೈನ್ಸ್ ಆ್ಯಂಡ್ ಕಾಮರ್ಸ್ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವಕ ಹಾಗೂ ಯುವತಿ ಜೂನ್ 24ರಂದು ಕಾಲೇಜಿನಿಂದ ನಾಪತ್ತೆಯಾಗಿದ್ದಾರೆ ಎಂದು ಮಹಿಳಾ ಪೊಲೀಸ್ ಠಾಣೆ ಪ್ರಕಟಣೆಯಲ್ಲಿ ತಿಳಿಸಿದೆ. ನಾಪತ್ತೆಯಾದವರನ್ನು ಪೂನಮ್ ಜಿತೇಂದ್ರ ವೈಷ್ಣವ್ (16) ಹಾಗೂ ಸಾಗರ ಬಿಷನುಪದ ಪೋರಿಯಾ (17) ಎಂದು ಗುರುತಿಸಲಾಗಿದೆ. ಪೂನಮ್ ಜಿತೇಂದ್ರ ವೈಷ್ಣವ್ ಅವರು ಬಿಳಿ ಮೈಬಣ್ಣ, ಸಾಧಾರಣ ಮೈಕಟ್ಟು, 5.6 ಅಡಿ ಎತ್ತರ ಹೊಂದಿದ್ದು, ಹಿಂದಿ, ರಾಜಸ್ಥಾನಿ, ಕೊಂಕಣಿ ಹಾಗೂ ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ.
ನಾಪತ್ತೆಯಾಗುವ ಸಂದರ್ಭದಲ್ಲಿ ಬಿಳಿ ಬಣ್ಣದ ಚೂಡಿದಾರ ಟಾಪ್ ಹಾಗೂ ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ್ದರು. ಸಾಗರ ಬಿಷನುಪದ ಪೋರಿಯಾ ಅವರು ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, 5.5 ಅಡಿ ಎತ್ತರ ಹೊಂದಿದ್ದು, ಹಿಂದಿ, ಬಂಗಾಳಿ, ಕೊಂಕಣಿ ಹಾಗೂ ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ. ಬೂದು ಬಣ್ಣದ ಟಿ-ಶರ್ಟ್ ಹಾಗೂ ಕಪ್ಪು ಜೀನ್ಸ್ ಪ್ಯಾಂಟ್ ಧರಿಸಿದ್ದರು. ನಾಪತ್ತೆಯಾದವರ ಕುರಿತು ಯಾವುದೇ ಮಾಹಿತಿ ದೊರೆತಲ್ಲಿ ಕಾರವಾರ ಪಿಐ, ಮಹಿಳಾ ಪೊಲೀಸ್ ಠಾಣೆ: 8277987514, ಪಿಎಸ್‌ಐ, ಮಹಿಳಾ ಪೊಲೀಸ್ ಠಾಣೆ: 8277987555 ಅಥವಾ ಕಾರವಾರ ಕಂಟ್ರೋಲ್ ರೂಂ: 9480805200 ಸಂಪರ್ಕಿಸುವಂತೆ ಮಹಿಳಾ ಪೊಲೀಸ್ ಠಾಣೆ ನೀರೀಕ್ಷಕರು ಮನವಿ ಮಾಡಿದ್ದಾರೆ.