ಯುವ ಕಲಾವಿದರನ್ನು ಬೆಳಕಿಗೆ ತರಬೇಕು - ಮುಂಡರಗಿ ನಾಗರಾಜ್
ಬಳ್ಳಾರಿ 02:ಇಂದಿರಾ ನಗರದ ಶ್ರೀ ಹುಲಿಗೆಮ್ಮ ದೇವಸ್ಥಾನದ ಆವರಣದಲ್ಲಿ ಅಕ್ಷಯ ಕಲಾ ಟ್ರಸ್ಟ್ ಹೊಸ ಎರಗುಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ವಿಶೇಷ ಘಟಕ ಯೋಜನೆಯಡಿ ನಿನ್ನೆ ಸಂಜೆ ಹಮ್ಮಿಕೊಂಡಿದ್ದ ಜಾನಪದ ಸಾಂಸ್ಕೃತಿಕ ಮುಂಗಾರು ಉತ್ಸವ 2024ರ ಕಾರ್ಯಕ್ರಮವನ್ನು ಡಾ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಮುಂಡರಗಿ ನಾಗರಾಜ್ ಉದ್ಘಾಟಿಸಿ ಮಾತನಾಡಿದವರು.
ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಕರ್ನಾಟಕದ ಸಂಸ್ಕೃತಿಯನ್ನು ಬಿಂಬಿಸುವ ಜಾನಪದ ಸಂಗೀತ ನಾಟಕ ಸಾಹಿತ್ಯ ವಿವಿಧ ಪ್ರಕಾರದ ಕಲೆಗಳನ್ನ ಉಳಿಸುವ ನಿಟ್ಟಿನಲ್ಲಿ ಇಂಥ ಕಾರ್ಯಕ್ರಮಗಳಿಗೆ ಆರ್ಥಿಕ ಸಹಾಯ ನೀಡಿ ಸಾಂಸ್ಕೃತಿಕ ವಾತಾವರಣ ಜೊತೆಗೆ ಮನೋರಂಜನ ಕಾರ್ಯಕ್ರಮಕ್ಕೆ ಹೆಚ್ಚು ಒತ್ತು ನೀಡಿ ಯುವ ಕಲಾವಿದರನ್ನು ಬೆಳಕಿಗೆ ತರುವ ಮೂಲಕ ಉತ್ತಮ ವೇದಿಕೆಗಳನ್ನು ಕಲ್ಪಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿವೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ 35 ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯ ಮಿಂಚು ಶ್ರೀನಿವಾಸ್ ವಹಿಸಿದರೆ ಮುಖ್ಯ ಅತಿಥಿಗಳಾಗಿ ಹುಲಿಗಮ್ಮ ದೇವಸ್ಥಾನ ಕಮಿಟಿ ಅಧ್ಯಕ್ಷರಾದ ಗಜಣ್ಣ ಹಾಗೂ ಮೋಹನ್ ದಾಸ, ಎಂ ಮಲ್ಕಪ್ಪ ಗಂಗಣ್ಣ ಕಲಾವಿದರಾದ ಅಭಿಷೇಕ್ ಎಸ್ ಎಂ ಮುಲುಗಪ್ಪ ವೀರೇಶ್ ದಳವಾಯಿ ಹುಸೇನಪ್ಪ ಹಿರಿಯ ಮುಖಂಡರು ಭಾಗವಹಿಸಿದರು ಕಾರ್ಯಕ್ರಮದಲ್ಲಿ ಜಾನಪದ ಸಂಗೀತ ಹನುಮಯ್ಯ ತಂಡ ಹೊಸಪೇಟೆ ಜಾನಪದ ನೃತ್ಯ ಗಂಗಮ್ಮ ತಂಡ ಬಳ್ಳಾರಿ ಗೀಗಿ ಪದ ತಾಯಪ್ಪ ಎಮ್ಮಿಗನೂರು ಸುಗಮ ಸಂಗೀತ ಉಷಾ ದಳವಾಯಿ ಸಂಗನಕಲ್ ಹಾಗೂ ಬುದ್ಧನ ಬೆಳಕು ಎಂಬ ಐತಿಹಾಸಿಕ ನಾಟಕವನ್ನು ಎಸ್ಎಂ ಹುಲುಗಪ್ಪ ತಂಡದವರಿಂದ ನಡೆಸಿಕೊಡಲಾಯಿತು ಕಾರ್ಯಕ್ರಮದ ಕಲಾವಿದ ಯರಿಸ್ವಾಮಿ ಇಬ್ರಾಂಪುರ ಆನಂದ ಬುಡ್ಡಿ ಕಲಕಂಬ ಅಕ್ಷಯ ಕಲಾ ಟ್ರಸ್ಟಿನ ಅಧ್ಯಕ್ಷ ಹೆಚ್ ಜಿ ಸುಂಕಪ್ಪ ಉಪಸ್ಥಿತರಿದ್ದರು ಕಾರ್ಯಕ್ರಮದ ನಿರೂಪಣೆ ಎಚ್. ಯೇಸಯ್ಯ ಶಿಕ್ಷಕರು ನಿರ್ವಹಿಸಿದರು.