ಮಹಲಿಂಗಪುರ

ಸಚಿವ ಈಶ್ವರಪ್ಪ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ

ಸಚಿವ ಈಶ್ವರಪ್ಪ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ
ಮಹಾಲಿಂಗಪುರ ; ರಾಣಿ ಚನ್ನಮ್ಮ ವೃತ್ತದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಜಿ.ಪಂ ಮಾಜಿ

ಮಹಾಲಿಂಗಪುರ : ರಾಷ್ಟ್ರ ದ್ವಜ ಕುರಿತು ವಿವಾದಾತ್ಮಕ ಹೇಳಿಕೆ ಹಾಗೂ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ವಿರುದ್ದ ಅವಾಚ್ಚ ಶಬ್ದಗಳ ನಿಂದನೆ ಮಾಡಿರುವ ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಯುವ ಕಾಂಗ್ರೆಸ್ ಕಾರ್ಯಕರ್ತರು ರಾಣಿ ಚನ್ನಮ್ಮ ವೃತ್ತದಲ್ಲಿ ಗುರುವಾರ ಸಂಜೆ ಪ್ರತಿಭಟನೆ ನಡೆಸಿ ಕೆ.ಎಸ್ ಈಶ್ವರಪ್ಪ ವಿರುದ್ದ ಘೋಷಣೆಗಳೊಂದಿಗೆ ಆಕ್ರೋಶ ವ್ಯಕ್ತಪಡಿಸಿದರು.  

ಪ್ರತಿಭಟನೆಯಲ್ಲಿ ಪಾಲ್ಗೊಂಡ ಜಿ.ಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನ್ನವರ ಮಾತನಾಡಿ ರಾಷ್ಟ್ರ ಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ದೇಶದ್ರೋಹದ ಉದ್ದಟತನದ ಹೇಳಿಕೆ ಮತ್ತು ಸದನದಲ್ಲಿ ಅಪ್ರಬುದ್ಧರು ಸಂಬೋಧಿಸುವ ಪದಗಳನ್ನು ಕಾಂಗ್ರೆಸ್ ನಾಯಕರಿಗೆ ಸಚಿವ ಕೆ. ಎಸ್‌. ಈಶ್ವರಪ್ಪ ಬಳಸಿದ್ದಾರೆ ಇದು ಅಕ್ಷಮ್ಯ ಅಪರಾಧವಾಗಿದೆ. ದೇಶದ ಹಾಗೂ ನಾಯಕರ ಕ್ಷಮೆ ಕೇಳಬೇಕು. ರಾಷ್ಟ್ರಧ್ವಜಕ್ಕೆ ಅವಮಾನಿಸಿರುವುದಕ್ಕೆ ತಕ್ಷಣ ಸರಕಾರ ಅವರನ್ನು ಬಂಧಿಸಬೇಕು. ಇದೇ ರೀತಿಯ ಅವರ ಧೋರಣೆ ಮುಂದುವರೆದರೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ರಾಜ್ಯಾದ್ಯಂತ ಅವರ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. 

 ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಕಲೂತಿ ಮಾತನಾಡಿ ಸದನದಲ್ಲಿ ಡಿಕೆ ಯವರ ಮೇಲೆ ಕೆಟ್ಟ ಪದಗಳ ಪ್ರಯೋಗ ಅಪರಾಧ, ಈಶ್ವರ​‍್ಪನವರು ವಿಧಾನಸೌಧದಲ್ಲಿ ಒಳ್ಳೆಯ ನಡವಳಿಕೆ ಪ್ರದರ್ಶಿಸಿ ಸದನಕ್ಕೆ ಗೌರವ ಕೊಡುವುದನ್ನು ಕಲಿಯಬೇಕು ಮತ್ತು ದೇಶದ ಹೆಮ್ಮೆಯ ಸಂಕೇತ ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿದ್ದಾರೆ ಅದಕ್ಕಾಗಿ ಅವರು ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಪ್ರಜಾಪ್ರಭುತ್ವದ ಘನತೆಯನ್ನು ಎತ್ತಿ ಹಿಡಿಯಬೇಕೆಂದು ಆಗ್ರಹಿಸಿದರು. 

 ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಪಾರಸಮಲ್ ಜೈನ್, ಕಿಸಾನ ಜಿಲ್ಲಾ ಕಾರ್ಯದರ್ಶಿ ಗೀರೀಶ ಅಂಕಲಗಿ, ಕೆ.ಪಿ.ಸಿ.ಸಿ ಸಂಚಾಲಕ ನಿಸಾರಹಮ್ಮದ ಖಾಜಿ, ಸ್ಥಳೀಯ ಮುಖಂಡರಾದ ಪು ಸ ಸದಸ್ಯ ಜಾವೇದ ಭಾಗವಾನ, ಮುಖಂಡರಾದ ಸೈಯದ್ ಯಾದವಾಡ, ಸಿದ್ದು ಭೂಸಣ್ಣವರ, ರಫೀಕ ಅಮರಗೋಳ, ಮಹಾಲಿಂಗ ಮಾಳಿ, ವಿನೋದ ಸಿಂಪಿ, ಅರುಣ ಗಾಣಿಗೇರ, ನಿಯಾಜ ಪಟೇಲ, ಯಶವಂತ ಮಗರಿ, ಅರ್ಜುನ ದೊಡಮನಿ, ಲಕ್ಷ್ಮಣ ಮಾಂಗ, ಮಹಾಲಿಂಗ ಪಾಟೀಲ, ಚನ್ನಪ್ಪ ಆದೆಪ್ಪನವರ, ಬಸವರಾಜ ನ್ಯಾಮಗೌಡ, ದಾನೇಶ ಆದೆಪ್ಪನವರ, ಲಾಲಸಾಬ ಪಠಾಣ ಸೇರಿದಂತೆ ಹಲವರಿದ್ದರು. 

ಸುದ್ದಿ ಓದಿ