ರೋಣ

ಯೋಗಿ ನಾರಾಯಣ ಯತೀಂದ್ರ ಜಯಂತಿ ಹಿನ್ನೆಲೆ ಪೂರ್ವಭಾವಿ ಸಭೆ

ಯೋಗಿ ನಾರಾಯಣ ಯತೀಂದ್ರ ಜಯಂತಿ ಹಿನ್ನೆಲೆ ಪೂರ್ವಭಾವಿ ಸಭೆ

ರೋಣ03:ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿಂದು ಮಾ. 07ರಂದು ನಡೆಯಲಿರುವ ಯೋಗಿ ನಾರಾಯಣ ಯತೀಂದ್ರ ಜಯಂತಿ ಹಿನ್ನೆಲೆ  ತಹಶೀಲ್ದಾರ ವಾಣಿ ಉಂಕಿ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಯಿತು. ಸಭೆಯಲ್ಲಿ ತಹಶೀಲ್ದಾರ ವಾಣಿ ಉಂಕಿ ಮಾತನಾಡಿ ಮಾ. 07ರಂದು ನಡೆಯಲಿರುವ ಯೋಗಿ ನಾರಾಯಣ ಯತೀಂದ್ರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಶಿರಸ್ತೇದಾರ ಮಿನಾಕ್ಷಿ ರತ್ನಾಲರ ಹಾಗೂ ವಿವಿಧ ಇಲಾಖೆ  ಅಧಿಕಾರಿಗಳು ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಸುದ್ದಿ ಓದಿ