ಅಂತರಾಷ್ಟ್ರೀಯ 12ನೇ ಯೋಗ ದಿನಾಚರಣೆಯ ಅಂಗವಾಗಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಯೋಗಾಭ್ಯಾಸ ಕಾರ್ಯಕ್ರಮ
ಲೋಕದರ್ಶನ ವರದಿ
ಯರಗಟ್ಟಿ 21 : ಅಂತರಾಷ್ಟ್ರೀಯ 12ನೇ ಯೋಗ ದಿನಾಚರಣೆಯ ಅಂಗವಾಗಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಯೋಗಾಭ್ಯಾಸ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ನ್ಯಾಯಾಧಿಶ ಕೃಷ್ಣಪ್ಪ ಪಮ್ಮಾರ ಚಾಲನೆ ನೀಡಿ ಮಾತನಾಡಿದ ಅವರು ಭಾರತೀಯರಾದ ನಾವು ವಿಶ್ವಕ್ಕೆ ಕೊಟ್ಟ ಏಕೈಕ ದಿನಾಚರಣೆ ಎಂದರೆ ಅದುವೇ ಅಂತರಾಷ್ಟ್ರೀಯ ಯೋಗ ದಿನಾಚರಣೆ. ಪ್ರಾಚೀನ ಕಾಲದಲ್ಲಿ ಯೋಗಕ್ಕೆ ಬಹಳಷ್ಟು ಪ್ರಾಮುಖ್ಯತೆ ನೀಡುತ್ತಿದ್ದರು ಇದು ಮನುಷ್ಯನನ್ನು ವ್ಯವಸ್ಥಿತವಾಗಿ ದೈಹಿಕವಾಗಿ ಮಾನಸಿಕವಾಗಿ ದೀರ್ಘ ಕಾಲದವರೆಗೆ ಬಾಳಿ ಬದುಕುವಂತೆ ನೆಮ್ಮದಿಯ ಜೀವನ ನೀಡುತ್ತಿತ್ತು. ಎಂದು ಹೇಳಿದರು
ಯೋಗದ ಮಹತ್ವ, ಆರೋಗ್ಯಕರ ಜೀವನದಲ್ಲಿ ಯೋಗದ ಪಾತ್ರ ಹಾಗೂ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಲ್ಲಿ ಯೋಗದ ಕೊಡುಗೆ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ನಂತರ ತರಬೇತುದಾರರ ಮಾರ್ಗದರ್ಶನದಲ್ಲಿ ನ್ಯಾಯಾಲಯದ ಸಿಂಬದ್ದಿ ಹಾಗೂ ನ್ಯಾಯವಾಧಿಗಳು ವಿವಿಧ ಯೋಗಾಸನಗಳು ಮತ್ತು ಪ್ರಾಣಾಯಾಮಗಳನ್ನು ಅಭ್ಯಾಸವನ್ನು ನಿವೃತ್ತ ಶಿಕ್ಷಕ ಎಸ್. ಎಸ್. ಕುರುಬಗಟ್ಟಿಮಠ ಮಾಡಿದರು. ಈ ವೇಳೆ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್. ಆರ್. ರೆಬ್ಬಣ್ಣವರ, ಉಪಾಧ್ಯಕ್ಷ ವ್ಹಿ. ಜಿ. ಬಿರಾದಾರಪಾಟೀಲ, ಎಂ. ಎಂ. ಮಡಿವಾಳರ, ಈರಣ್ಣಾ ಗೌಡರ ಸೇರಿದಂತೆ ನ್ಯಾಯಾಲಯದ ಸಿಬ್ಬಂದಿ ವರ್ಗದವರು ಇದ್ದರು.