ಸ್ವಸ್ಥ ಜೀವನಕ್ಕೆ ಯೋಗ ಅಗತ್ಯ: ಪಾಟೀಲ
ಮಹಾಲಿಂಗಪುರ 21 : ಸ್ವಚ್ಛ ಮನಸ್ಸು,ಸ್ವಸ್ಥ ಜೀವನ, ಬಲಿಷ್ಠ ರಾಷ್ಟ್ರ, ಯೋಗಕ್ಷೇಮಕ್ಕಾಗಿ ಯೋಗಾಭ್ಯಾಸ ನಮ್ಮದಾಗಲಿ. ಶರೀರ ಮತ್ತು ಮನಸ್ಸಿನ ನಡುವೆ ಸಾಮರಸ್ಯ ಸಾಧಿಸಿ ಜೀವನವನ್ನು ಸರ್ಥಕಗೊಳಿಸುವ ಯೋಗ ದಿನನಿತ್ಯದ ರೂಢಿಯಾಗಲಿ ಎಂದು ಗೋವಿಂದಗೌಡ ಪಾಟೀಲ ಹೇಳಿದರು.
ನಗರದ ಎಪಿಎಂಸಿ ಆವರಣದ ಗಣಪತಿ ದೇವಸ್ಥಾನದಲ್ಲಿ ಅರುಣ ಗುರೂಜಿ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆಯಲ್ಲಿ ಮಾತನಾಡಿದರು.
ಶಿವುಕುಮಾರ ಪಾಟೀಲ, ವೆಂಕಣ್ಣ ಬಿರಾದಾರ, ಗೋವಿಂದ ಲಿಂಗಸಾನಿ, ಈರ್ಪ ಕೋಳಿಗುಡ್ಡ, ಶ್ರೀಶೈಲ ಅಂಗಡಿ, ಸಧೀರ ಗುಂಡಾ,ಆನಂದ ಪಾಟೀಲ, ನಾಗೇಶ ಮುದಕವಿ,ನಾಗೇಶ ಪತ್ತಾರ, ಮಲ್ಲಿಕರು್ಜನಯ್ಯ, ಸುರಾ್ಣ ಕಂಡಿ,ರವಿ ಬರಗಿ, ಶ್ರೀಶೈಲ ನಿಂಬರಗಿ, ಶ್ರೀನಿವಾಸ ಗುಂಡಾ, ಶ್ರೀಶೈಲ ಬಾಗೋಜಿ,ವಿನಾಯಕ ಬಡಿಗೇರ,ಸಿದ್ದು ಗೊಂಬಿ ಇದ್ದರು.