ಒತ್ತಡದ ಬದುಕಿಗೆಯೋಗ ಸಂಜೀವಿನಿ ಆಗಿದೆ: ಪ್ರಾಚಾರ್ಯ ಶಿವಣ್ಣನವರ
ಶಿಗ್ಗಾವಿ :ಮಾಡಿದರೆ ಯೋಗಾ ಓಡುವುದು ರೋಗ ಮಾನವನ ಒತ್ತಡದ ಜೀವನಕಷ್ಟಮಯವಾಗಿದೆ ಒತ್ತಡದ ಬದುಕಿಗೆಯೋಗ ಸಂಜೀವಿನಿ ಆಗಿದೆಎಂದು ಮಾರ್ಮಿಕವಾಗಿ ಪ್ರಾಚಾರ್ಯ ಪ್ರೊಎಫ್ಎಸ್ ಶಿವಣ್ಣನವರ ಹೇಳಿದರು.
ಪಟ್ಟಣದಶ್ರೀ ರಂಭಾಪುರೀ ಜಗದ್ಗುರು ವೀರಗಂಗಾಧರ ಸ್ವ ಪ ಪೂರ್ವಕಾಲೇಜು ಶಿಗ್ಗಾಂವಿ ಯಲ್ಲಿ ಇಂದು ರಾಷ್ಟ್ರೀಯ ಸೇವಾ ಯೋಜನಾಘಟಕ, ಭಾರತ ಸೇವಾದಳ ಹಾಗೂ ರೋವರ್ ಮತ್ತುರೇಂಜರ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಅಂತಾರಾಷ್ಟ್ರೀಯ 10 ನೇ ಯೋಗ ದಿನಾಚರಣೆಯೋಗ ದಿನಾಚರಣೆ ಧ್ಯೇಯವಾದ ಮಹಿಳಾ ಸಬಲೀಕರಣಕ್ಕಾಗಿ ಯೋಗ ಎಂಬ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಮಾತನಾಡಿದ ಸಂಸ್ಥೆಯ ಸಲಹಾ ಸಮಿತಿಯ ಸದಸ್ಯಡಾ ಡಿ ಎ ಗೊಬ್ಬರಗುಂಪಿ ಸೂರ್ಯನಿಗೆ ನಮನ ಸರ್ವ ರೋಗಗಳಿಂದ ಶಮನ ಮನುಷ್ಯನ ಜೀವನ ಸಾರ್ಥಕವಾಗಬೇಕಾದರೆ ಯೋಗ ಇಂದು ಅತೀ ಅವಶ್ಯಕವಾಗಿದೆ ಎಂದು ವಿಧ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಪ್ರೊಎಸ್ಎನ್ ತೀರ್ಥಮುಖ್ಯ ಅತಿಥಿಗಳಾಗಿ ಮಾತನಾಡಿ ಯೋಗವೇಜೀವನ ಪಾಲಿಸಿದರೆ ಪಾವನ ಎಂದರಲ್ಲದೇ ಪ್ರಾಚೀನ ಕಾಲದಿಂದಲೂ ನಡೆದು ಬಂದ ಪತಂಜಲಿ ಯಯೋಗ ಇಂದು ಜಗತ್ತೇ ಯೋಗದಕಡೆ ಹೊರಟಿರುವುದು ಅವಿಸ್ಮರಣೀಯ, ಎಂದರು.
ಎನ್ಎಸ್ಎಸ್ ಕಾರ್ಯಕ್ರಮದ ಆಧಿಕಾರಿ ಪ್ರೊ ಶಿವಯ್ಯ ಪೂಜಾರ ರವರು ಯೋಗಕ್ಕೆ ಬನ್ನಿ ರೋಗ ಇಲ್ಲ ಎನ್ನಿ ಮತ್ತು ಬಿಪಿ ಶುಗರ್ ಬಂದರೇ ಹೇಗಪ್ಪಾ ಅಂದು ಕೊರಗುವುದುಕ್ಕಿಂತ ನಾಡಿ ಶುದ್ಧಗೊಳಿಸಿದರೆ ನಾಡು ಅಂದವಾದೀತು ಎಂದರು.
ಕಾರ್ಯಕ್ರಮದಲ್ಲಿ ಪ್ರೋಎನ್ ಸಿ ನಾಯಕ ,ರೇಖಾ ಮಲ್ಲಯ್ಯನವರಮಠ ಮುಂತಾದವರು ಉಪಸ್ಥಿತರಿದ್ದರು. ವಿಧ್ಯಾರ್ಥಿಗಳಿಗೆ ದೈಹಿಕ ಉಪನ್ಯಾಸಕ ಬಿ ಸಿ ಹೊನ್ನಣ್ಣವರ ಯೋಗ ತರಬೇತಿ ನೀಡಿದರು. ಪ್ರೋಎಸ್ ವಿ ಕುಲಕರ್ಣಿ ಸ್ವಾಗತಿಸಿದರು. ಪ್ರೊ ಎಮ್ಎಸ್ ಸಂಗಣ್ಣನವರು ವಂದಿಸಿದರು. ಕುಮಾರಿ ಸಂಧ್ಯಾಕು ಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.