ಮುಧೋಳ

ಉತ್ತೂರ ಹೆಸರನ್ನು ಎತ್ತರಕ್ಕೆ ತಂದ ಯಲ್ಲಪ್ಪ

ಉತ್ತೂರ ಹೆಸರನ್ನು ಎತ್ತರಕ್ಕೆ ತಂದ ಯಲ್ಲಪ್ಪ
ಮುಧೋಳ ತಾಲ್ಲೂಕಿನ ಉತ್ತೂರ ಹಿರಂಜಣಗಿ ಮಧ್ಯದಲ್ಲಿ ಇರುವ ಗಿಡಗಳ ಪೋಷಣೆ ಮಾಡುತ್ತಿರುವ ಯಲ್ಲಪ್ಪ ಶಿಂಧೆ

1500 ಗಿಡಗಳ ಪೋಷಣೆ: ಅತಿಕ್ರಮಣ ಮಾಡಿದ 13 ಎಕರೆ ಜಾಗವನ್ನು ಸರ್ಕಾರಕ್ಕೆ ಕೊಡಿಸಿ ಕಾಡು ಮಾಡಿದ ಧೀರ 

ವೆಂಕಟೇಶ ಗುಡೆಪ್ಪನವರ  

ಮುಧೋಳ: ಯಲ್ಲಪ್ಪ ಶಿಂಧೆ ಪರಿಸರವಾದಿ ಮಾತ್ರವಲ್ಲ ಹಠವಾದಿಯೂ ಸಹ ಹೌದು. ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಉತ್ತೂರ ಗ್ರಾಮದಿಂದ ಸುಮಾರ 1 ಕಿ.ಮಿ ದೂರದಲ್ಲಿರುವ ಉತ್ತೂರ-ರಂಜಣಗಿ ವಸತಿಯ ಹತ್ತಿರ ಅತಿಕ್ರಮಣ ಮಾಡಿಕೊಂಡ ಸುಮಾರು 13 ಎಕರೆ ಜಾಗವನ್ನು ನಿರಂತರ ಉಪವಾಸ, ವನವಾಸ ಏಕವ್ಯಕ್ತಿ ಧರಣಿ ಉಪವಾಸ ನಡೆಸಿ ಕೊನೆಗೂ ಆ ಜಾಗವನ್ನು ತಾಲೂಕಾ ಆಡಳಿತದ ಸಹಾಯದಿಂದ ಮತ್ತೆ ಸರ್ಕಾರಕ್ಕೆ ಕೊಡಿಸಿ ಅಲ್ಲಿ ಅರಣ್ಯ ಇಲಾಖೆಯ ಸಹಕಾರದಿಂದ ಸಸಿಯನ್ನು ನೆಟ್ಟು ಸುಂದರ ಕಾಡು ನಿರ್ಮಾಣ ಮಾಡಿ ಅಲ್ಲಿ ಹಕ್ಕಿಗಳ ಜೊತೆಗೆ ಸಂತಸವಾಗಿ ಕಾಲ ಕಳೆಯುವ ಆ ವ್ಯಕ್ತಿಯ ಹೆಸರೇ ಯಲ್ಲಪ್ಪ. 

ಎಲ್ಲವನ್ನು ಮಾಡುವ ಯಲ್ಲಪ್ಪ ಶಿಂಧೆ ಸುಮಾರು 15 ವರ್ಷಗಳ ಹಿಂದೆ ಹೊಟೆಲ್ ಇಟ್ಟುಕೊಂಡು ಉದರ ತುಂಬಿಸಿಕೊಳ್ಳುತ್ತಿದ್ದ ಇವರಿಗೆ ತನ್ನ ಸುತ್ತ ಮುತ್ತ ಇರುವ ಸರ್ಕಾರ ಜಮೀನು ಅಕ್ರಮವಾಗಿ ವಶಪಡಿಸಿಕೊಂಡು ಅತಿಕ್ರಮಣ ಮಾಡಿಕೊಳ್ಳುವ ದೃಶ್ಯ ನೋಡಿ ರೋಸಿ ಹೋಗಿ ತನ್ನ ಮೂಲ ಉದ್ಯೋಗವನ್ನು ಕುಟುಂಬಕ್ಕೆ ಬಿಟ್ಟು ನಿರಂತರವಾಗಿ ತಹಸೀಲ್ದಾರ ಕಚೇರಿ ಹತ್ತಿರ ಉಪವಾಸ ಬಿದ್ದು  ಆಜಾಗವನ್ನು ಪಡೆಯುವವರೆಗೂ ಬಿಡದೇ ಹೋರಾಟ ಮಾಡಿ ಸುಮಾರು 1300 ಗಿಡಗಳನ್ನು ನೆಟ್ಟು ನಿತ್ಯವೂ  ನೀರು ಹಾಕಿ ಫೋಷಣೆ ಮಾಡುತ್ತಾ ಬಂದರೂ ಈ ಸಂದರ್ಭದಲ್ಲಿ 2009ರಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವಾಸ್ತವ್ಯವಿದ್ದು ಸರ್ಕಾರಿ ಪ್ರೌಢ ಶಾಲೆಯಲ್ಲಿ ಗಿಡಗಳಿಲ್ಲದೆ ಬಣಗುಡುತ್ತಿದ್ದುದನ್ನು ನೋಡಿ ಎರಡು ನೂರು ಗಿಡಗಳನ್ನು ಅರಣ್ಯ ಇಲಾಖೆಯಿಂದ ತಂದು ಅವುಗಳಿಗೆ ನಿತ್ಯವೂ ನೀರು ಹಾಕಿ ಫೋಷಣೆ ಮಾಡಿದ ಈ ಕಾರಣಕ್ಕಾಗಿ ಇಲ್ಲೊಂದು ಪುಟ್ಟ ಕಾಡು ನಮಗೆ ನೋಡಲು ಸಿಗುವಂತಾಂಗಿದೆ.ಎಲ್ಲೇ ಗಿಡಗಳ ಬಗ್ಗೆ ಹೋರಾಟ ನಡೆದರೆ ಮುಂದೆ ಇರುವ ಈ ವ್ಯಕ್ತಿ ಮುಧೋಳ  ರನ್ನ ಕ್ರೀಡಾಂಗಣದಲ್ಲಿ ಮತ್ತು ಬಸ್ ನಿಲ್ದಾಣದಲ್ಲಿ ಕಾನಿಪ ಸಂಘದ ಸದಸ್ಯರು ನೆಟ್ಟ ಗಿಡಗಳಿಗೆ ಸದಸ್ಯರ ಜೊತೆಗೆ ನೀರು ಹಾಕುವ ಕಾರ್ಯ ಮಾಡುತ್ತಾರೆ. 

ಹಕ್ಕಿಗಳಿಗೆ ಆಹಾರ ಹಾಕುವ ಪ್ರೇಮಿ: ಇವರ ಈ ಕಾರ್ಯವನ್ನು ನಿರಂತರವಾಗಿ ನೋಡುತ್ತಾ ಬಂದ  ಅರಣ್ಯ ಇಲಾಖೆಯು ಕೆಲವು ತಿಂಗಳ ಹಿಂದಿನಿಂದ ಇವರಿಗೆ ಗೌರವಧನ ನೀಡಲು ಪ್ರಾರಂಭಿಸಿದರು ಈ ಹಣದಲ್ಲಿ ಸಜ್ಜೆ ಹಾಗೂ ಅಕ್ಕಿಯನ್ನು ತಂದು ಅಲ್ಲಲ್ಲಿ ಕಟ್ಟಿದ ಡಬ್ಬದಲ್ಲಿ ನೀರು ಹಾಗೂ ಕಾಳು ಹಾಕಿದ ಕಾರಣ ಈಗ ಈ ಪುಟ್ಟ ಕಾಡಲ್ಲಿ ಹಕ್ಕಿಗಳ ಇಂಚರ ಕೇಳಿ ಬರುತ್ತಿದೆ. ಮೊದ ಮೊದಲು ಇವರು ಬಂದ ತಕ್ಷಣ ಹಕ್ಕಿ ಹಾರಿ ಹೋಗುತ್ತಿದ್ದು ಈಗ ಇವರು ಕಾಳು ತಂದರೆ ಸಾಕು ತಿನ್ನಲು ಬರುತ್ತವೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಯಲ್ಲಪ್ಪ. 

‘ ನನಗೆ ಈ ರೀತಿಯ ಗಿಡಗಳ ಪೋಷಣೆಯಿಂದ ಸಂತಸ ಹಾಗೂ ನೆಮ್ಮದಿ ಸಿಗುತ್ತದೆ, ಕರೋನಾ ವೇಳೆಯಲ್ಲಿ ಇಲ್ಲಿ ಬಂದು ಕುಳಿತುಕೊಳ್ಳುವದರಿಂದ ಮನಸ್ಸಿಗೆ ನೆಮ್ಮದಿ ಸಿಕ್ಕ ಅದೆಷ್ಟೋ ಜನ ನನಗೆ ಕೃತಜ್ಞತೆ ಸಲ್ಲಿಸಿದ್ದು ಹೆಮ್ಮೆ ಎನಿಸುತ್ತದೆ” 

ಯಲ್ಲಪ್ಪ ಶಿಂಧೆ ಪರಿಸರ ಪ್ರೇಮಿ ಉತ್ತೂರ 


ಸುದ್ದಿ ಓದಿ