ಯಡಿಯೂರಪ್ಪನವರು ಜನರನ್ನು ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ: ತಾರನಾಳ
ಮುದ್ದೇಬಿಹಾಳ13: ಪ್ರಧಾನಿ ನರೇಂದ್ರ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರಕಾರದ ದುರಾಡಳಿತ ಹಾಗೂ ಜನ ವಿರೋಧಿ, ರೈತ ವಿರೋಧಿ ಸರಕಾರವೆಂದು ಸಾರ್ವಜನಿಕರಿಗೆ ತಿಳಿಯುವಂತೆ ಮಾಡಿದ ಸಿದ್ರಾಮಯ್ಯನವರ ಹಾಗೂ ಕಾಂಗ್ರೇಸ್ ಪಕ್ಷದ ವಿರುದ್ಧ ಪ್ರತಿಭಟನೆ ಮಾಡಿ ಘಂಟಾಘೋಷವಾಗಿ ಕಾರ್ಯಕರ್ತರಿಗೆ ಕರೆ ನೀಡಿದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರ್ಪ ದೇಶದಲ್ಲಿ ಹಾಗೂ ರಾಜ್ಯದಲ್ಲಿ ತಮ್ಮ ಸರಕಾರ ನಡೆಸಿದ ಭ್ರಷ್ಠಾಚಾರ ಮತ್ತು ದುರಾಡಳಿತ ಜನರಿಗೆ ಗೊತ್ತಾಗಬಾರದು ಎಂದು ಕೋಮುಗಲಬೆ ಸೃಷ್ಠಿಸಿ ಅಶಾಂತಿ ವಾತಾವರಣ ನಿರ್ಮಿಸುವ ಮೂಲಕ ಜನರನ್ನು ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರು ಚುನಾವಣೆ ಪೂರ್ವದಲ್ಲಿ ಜನರಿಗೆ ಹೇಳಿದಂತೆ ಯಾವ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಕೇವಲ ಹಿಂದು ದೇವಾಲಯ, ಮುಸ್ಲಿಂರ ಮಸಿದಿಗಳ ವಿಷಯಗಳನ್ನು ಮುಂದಿಟ್ಟುಕೊಂಡು ಧರ್ಮ, ಧರ್ಮಗಳ ಹಾಗೂ ಜಾತಿ ಜಾತಿಗಳ ಮದ್ಯೆ ಕೋಮುವಾದ ಸೃಷ್ಠಿಸುವ ಯೋಜನೆಗಳನ್ನು ರೂಪಿಸುವುದರ ಜೊತೆಗೆ ವಾಮ ಮಾರ್ಗದ ಮೂಲಕ ಅಧಿಕಾರದ ಗದ್ದು ಹಿಡಿಯುವುದು ಮಾತ್ರ ಅವರಿಗೆ ಗೊತ್ತಿದೆ. ಆದರೇ ನಿಜವಾದ ಕಡು ಬಡವರಿಗೆ ಆಗಿರುವ ಅನ್ಯಾಯ, ನಿರುದ್ಯೋಗ, ಸಮಸ್ಯೆ ಬಗೆಹರಿಸುವ ಯಾವ ಮಹತ್ತರ ಯೋಜನೆಗಳನ್ನು ಇವರಿಂದ ರೂಪಿಸಲು ಸಾಧ್ಯವಾಗಿಲ್ಲ.
ರಾಜ್ಯ ಜನರಲ್ಲಿ ಈ ಸರಕಾರದ ಧುರಾಡಳಿತವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಎಐಸಿಸಿ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಹಾಗೂ ಅವರ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡಿ ಬಾಯಿ ಚಪಲ ತೀರಿಸಿಕೊಳ್ಳುತ್ತಿದ್ದಾರೆ. ಅದರಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರ್ಪನವರು ತಾವು ಬ್ರಷ್ಟಾಚಾರ ಮಾಡಿ ಸಿಕ್ಕಾಕ್ಕೊಂಡು ಜೈಲು ಅನುಭವಿಸಿ ನಿಮ್ಮನ್ನು ಜೈಲಿಗೆ ಕಳಿಸುತ್ತೇವೆ ಎಂದು ಹೇಳುತ್ತಾರೆ ಸಿದ್ರಾಮಯ್ಯನವರ ಬಗ್ಗೆ ಮಾತನಾಡುವ ಯಾವ ನೈತಿಕ ಹಕ್ಕಿಲ್ಲ ಎಂಬುದನ್ನು ಸ್ಪಷ್ಟವಾಗಿ ಅರ್ಥೈಸಿಕೊಳ್ಳಬೇಕಿದೆ.
ನಿಮ್ಮ ರಾಜಕೀಯ ಡೊಂಬರಾಟ, ಪೊಳ್ಳು ಆಸ್ವಾಸನೆಯನ್ನು ಜನರು ನಂಬದೇ ಬಿಜೆಪಿ ಸರಕಾರವನ್ನು ಕಿತ್ತೇಸೆದು ಈ ಬಾರಿ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯ ಹಾಗೂ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ ಅವರ ನೇತೃತ್ವದ ಕಾಂಗ್ರೇಸ್ ಪಕ್ಷವನ್ನು ಅತ್ಯಂತ ಬಹುಮತದಿಂದ ಗೆಲ್ಲಿಸುವ ಮೂಲಕ ಅಧಿಕಾರಕ್ಕೆ ತರಬೇಕೆಂದು ಈಗಾಗಲೇ ಜನ ತಿರ್ಮಾನಿಸಿದ್ದಾರೆ ಎಂದು ಹರಿಹಾಯ್ದರು.