ಯತ್ನಾಳ್, ಕಾಶಪ್ಪ ವ್ಯೆಂಗ ಮಾತು : ತಾಲೂಕು ಬಣಜಿಗ ಸಮಾಜದಿಂದ ಪ್ರತಿಭಟನೆ
ಹಗರಿಬೊಮ್ಮನಹಳ್ಳಿ.ನ.07 : ಬಣಜಿಗ ಸಮಾದಾಯದ ಬಗ್ಗೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪ ಸಮಾವೇಶಗಳಲ್ಲಿ ಅವಹೇಳನಕಾರಿ ಮಾತು ಮತ್ತು ವ್ಯೆಂಗವಾಡುತ್ತಾ ಸಮಾಜಕ್ಕೆ ಅವಮಾನ ಮಾಡಿದ್ದಾರೆ ಕೂಡಲೇ ಸಮಾಜಕ್ಕೆ ಕ್ಷಮೆ ಯಾಚಿಸುವಂತೆ ಕರ್ನಾಟಕ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃಧ್ಧಿ ಸಂಘದ ತಾಲೂಕು ಘಟಕವು ಸೋಮವಾರ ಪ್ರತಿಭಟಿಸಿ ತಹಶಿಲ್ದಾರ್ಗೆ ಮನವಿ ನೀಡಿದರು.
ಈ ವೇಳೆ ಸಮಾಜದ ಮುಖಂಡ ಶಿವಕುಮಾರ್ ಬೆಲ್ಲದ್ ಮಾತನಾಡಿ ಬಣಜಿಗ ಸಮಾಜ ಹಾಗೂ ಪಂಚಮಸಲಿ ಸಮಾಜವು ಒಂದು ನಾಣ್ಯದ ಎರೆಡು ಮುಖವಿದ್ದಂತೆ, ಪಂಚಮಸಾಲಿ ಸಮಾಜಕ್ಕೆ 2ಎ ಹೋರಾಟಕ್ಕೆ ನಮ್ಮ ಬಣಜಿಗ ಸಮುದಾಯವು ಸಂಪೂರ್ಣ ಬೆಂಬಲ ನೀಡಿದೆ ಹಗೂ ಯಾವುದೇ ಸಮಾಜವನ್ನು ವಿರೋಧಿಸಿಯೂ ಇಲ್ಲ ಇಂತಹ ಸೌಹಾರ್ಥತೆ ಇರುವ ಸಮುದಾಯದ ಬಗ್ಗೆ ಇಲ್ಲಸಲ್ಲದ ಅವಹೇಳನಕಾರಿ ಹೇಳಿಕೆಗಳು ಮತ್ತು ಅವರ ವೃತ್ತಿಯ ಬಗ್ಗೆ ಸಮಾವೇಶಗಳಲ್ಲಿ ವ್ಯೆಂಗವಾಡುವುದು ಈ ನಾಯಕರಿಗೆ ಶೋಭೆ ತರುವಂತಹುದಲ್ಲ ಈಗಾಗಲೇ ಕಾಶಪ್ಪನವರು ಸಮುದಾಯಕ್ಕೆ ಕ್ಷಮೆಯಾಚಿಸಿದ್ದು ಸ್ವಾಗತಾರ್ಹ ಮತ್ತೊರ್ವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಕೂಡಲೇ ಕ್ಷಮೆಯಾಚಿಸಿಬೇಕು ಇಲ್ಲವಾದರೆ ಇವರ ವಿರುದ್ಧ ಉಗ್ರ ಹೋರಾಟ ಕೈಗೊಳ್ಳಲಾಗುವುದು, ಸಮುದಯಗಳ ಮಧ್ಯೆ ಸಾಮರಸ್ಯೆವನ್ನು ಹುಟ್ಟು ಹಾಕಬೇಕೆ ಹೊರತು ವ್ಯಷ್ಮ್ಯಮ ಸಋಷ್ಟಿಸುವ ಹೇಳಿಕೆಗಳನ್ನು ನೀಡಬಾರದೆಂದು ಉಗ್ರವಾಗಿ ಖಂಡಿಸಿದರು.
ಸಮುದಾಯದ ಜಿಲ್ಲಾ ಉಪಾಧ್ಯಕ್ಷ ಹಾಲ್ದಾಳ್ ವಿಜಯಕುಮಾರ್, ಗೌರವ ಕಾರ್ಯದರ್ಶಿ ಸಿದ್ದಮಲ್ಲಪ್ಪ ಪಟ್ಟೇದ್, ಕಾರ್ಯದರ್ಶಿ ವಾಲಿ ಮಲ್ಲಿಕಾರ್ಜುನ, ಚಿನಿವಾಲರ ಕೊಟ್ರೇಶ್, ಆರ್.ಬಿ.ಚನ್ನಪ್ಪ, ಬಿ.ಎಸ್ ವೀರೇಶ್, ಕೋರಿ ಪ್ರಕಾಶ್, ಅಶೋಕ ಜಾಲಿ, ಹಿಮರಾಜ ಎಂ.ಎಸ್., ಎ.ರಾಚಪ್ಪ, ಲಿಂಗದಹಳ್ಳಿ ಬಸವರಜ, ಇಕ್ಕೇರಿ ಕೊಟ್ರೇಶ್, ಬಿ.ಮಂಜುನಾಥ್ ಸೇರಿದಂತೆ ಬಣಜಿಗ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.