ಯಮಕನಮರಡಿ ಸಿಪಿಐ ಜಾವೇದ್ ಮುಶಾಪುರೆ ಅವರ ತಾಯಿ ಸುರಯ್ಯ ವಿಧಿವಶ

ಯಮಕನಮರಡಿ ಸಿಪಿಐ ಜಾವೇದ್ ಮುಶಾಪುರೆ ಅವರ ತಾಯಿ ಸುರಯ್ಯ ವಿಧಿವಶ

ಬೆಳಗಾವಿ : ಯಮಕನಮರಡಿ ಪೊಲೀಸ ಠಾಣೆಯ ಸಿಪಿಐ ಜಾವೇದ್ ಮುಶಾಪೂರೆ ಅವರ ತಾಯಿ ಹಾಗೂ ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದ ನಿವಾಸಿಯಾಗಿದ್ದ ಸುರಯ್ಯ ಫಕ್ರುಸಾಬ್ ‌ಮುಶಾಪುರಿ (69)ಅವರು ವಿಧಿವಶವಾಗಿದ್ದಾರೆ.

     ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು‌ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ  ಮಂಗಳವಾರ ಮಧ್ಯರಾತ್ರಿ ನಿಧನರಾದರು.

   ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ, ಸೊಸೆ, ಅಳಿಯ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಹೊಂದಿದ್ದರು. 

ಸುದ್ದಿ ಓದಿ