ಬಳ್ಳಾರಿ

ಪಿತಾಮಹ ತ್ಯಾಗರಾಜ ಸ್ವಾಮಿಗಳ ಆರಾಧನೆ

ಪಿತಾಮಹ ತ್ಯಾಗರಾಜ ಸ್ವಾಮಿಗಳ ಆರಾಧನೆ

ಬಳ್ಳಾರಿ 02: ಪದಕವಿತಾ ಪಿತಾಮಹ ತ್ಯಾಗರಾಜ ಸ್ವಾಮಿಗಳ ಆರಾಧನೆಯ ಅಂಗವಾಗಿ ಇಂದು ಬಳ್ಳಾರಿ ನಾದಸ್ವರ ಡೋಲು ಕಲಾವಿದರ ಸಂಘದ ವತಿಯಿಂದ ತ್ಯಾಗರಾಜ ಸ್ವಾಮಿಗಳ ಭಾವಚಿತ್ರವನ್ನಿಟ್ಟು ಸತ್ಯನಾರಾಯಣಪೇಟೆ ವೆಂಕಟೇಶ್ವರ ದೇವಸ್ಥಾನದಿಂದ ರಾಘವೇಂದ್ರ ಸ್ವಾಮಿಗಳ ಮಠ, ಎಸ್.ಎನ್.ಪೇಟೆ 1, 2 ಮತ್ತು 3ನೇ ಅಡ್ಡರಸ್ತೆಯವರೆಗೆ ಅದ್ಧೂರಿಯಾಗಿ ನಾದಸ್ವತ ಮತ್ತು ಡೋಲು ಬಾರಿಸುವ ಮೂಲಕ ಮೆರವಣಿಗೆ ನಡೆಸಲಾಯಿತು.

ಈ ಸಂದರ್ಭದಲ್ಲಿ ನಾದಸ್ವರ ಡೋಲು ಕಲಾವಿದರ ಸಂಘದ ಗೌರವಾಧ್ಯಕ್ಷರು ಎಂ.ವೆಂಕಟಸುಬ್ಬಯ್ಯ, ಎಂ.ಗುರುಸ್ವಾಮಿ, ಅಧ್ಯಕ್ಷ ರಾಜಶೇಖರ್, ಚಂದ್ರ, ಪೆದ್ದರಘು, ಶ್ರೀನಿವಾಸುಲು, ಸಣ್ಣರಘು, ಚಿನ್ನರಾಯುಡು, ರವಿ, ಅಯ್ಯಪ್ಪ, ಮಣಿಕಂಠ, ಕಾಂತರಾಜ್, ಎರ್ರಿಸ್ವಾಮಿ, ಡೋಲು ಚಂದ್ರ, ಅಂಜಿನೇಯ, ಚೇಳ್ಳಗುರ್ಕಿ ಎರ್ರಿಸ್ವಾಮಿ, ಚೇಳ್ಳಗುರ್ಕಿ ಗುರು, ಗಂಗಾಧರ, ವೀರೇಶ್, ಗಾದಿಲಿಂಗ, ಗೋಪಿ, ವಾಸು, ಸೇರಿದಂತೆ ಹಲವಾರು ಕಲಾವಿದರು ಉಪಸ್ಥಿತರಿದ್ದರು.

ಸುದ್ದಿ ಓದಿ