ಬಳ್ಳಾರಿ

ವಿಜೃಂಭಣೆಯಿಂದ ಗುರುಸಾರ್ವಭೌಮರ ಆರಾಧನೆ ಸಂಪನ್ನ: ರಥೋತ್ಸವ

ವಿಜೃಂಭಣೆಯಿಂದ ಗುರುಸಾರ್ವಭೌಮರ ಆರಾಧನೆ ಸಂಪನ್ನ: ರಥೋತ್ಸವ

ಬಳ್ಳಾರಿ 22 : ಬೇಡಿದ ವರ ಕೊಡುವ, ಕಲ್ಪವೃಕ್ಷ ಕಾಮಧೇನು, ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಉತ್ತಾರರಾಧನೆ ಹಿನ್ನೆಲೆ ಗುರುವಾರ ನಗರದಲ್ಲಿ ರಥೋತ್ಸವ ಸಾವಿರಾರು ಭಕ್ತರ ಮಧ್ಯೆ ವಿಜೃಂಭಣೆಯಿಂದ ನೆರವೇರಿತು. 

ನಗರದ ಸತ್ಯನಾರಾಯಣ ಪೇಟೆ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಬೆಳಿಗ್ಗೆ ಮಠದ ವ್ಯವಸ್ಥಾಪಕ ಪಂ.ನರಹರಿ ಆಚಾರ ಅವರ ನೇತೃತ್ವದಲ್ಲಿ ವಿಶೇಷ ಪೂಜೆ, ಶ್ರೀರಾಘವೇಂದ್ರ ತೀರ್ಥರ ಅಷ್ಟೋತ್ತರ ಪಾರಾಯಣ, ಹರಿವಾಯುಸ್ತುತಿ ಮಂತ್ರ ಪಠಣ, ವಿವಿಧ ಪಂಡಿತರಿಂದ ಉಪನ್ಯಾಸ ಸೇರಿದಂತೆ ಗುರುರಾಯರಿಗೆ ವಿಶೇಷ ಅಲಂಕಾರ, ಮಹಾ ನೈವೇದ್ಯ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಪೂಜೆಗಳು ವಿಜೃಂಭಣೆಯಿಂದ ನಡೆದವು.  ಇದಕ್ಕೂ ಮುನ್ನ ಬೆಳಿಗ್ಗೆ ಮಠದಿಂದ ಪ್ರಾರಂಭವಾದ ಮಹಾ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.  ಮಠದ ಅರ್ಚಕ ಪಂ.ಪ್ರಸನ್ನ ಆಚಾರ ರರ್ಥೋತ್ಸವಕ್ಕೆ ಚಾಲನೆ ನೀಡಿದರು.  ಈ ವೇಳೆ ವಿವಿಧ ಭಜನಾ ಮಂಡಳಿ ಸದಸ್ಯರಿಂದ ಸಾಮೂಹಿಕ ಭಜನೆ, ಕೋಲಾಟ, ಡೊಳ್ಳು ಕುಣಿತ ಗಮನಸೆಳೆಯಿತು.  ನಗರ ಸೇರಿದಂತೆ ನಾನಾ ಕಡೆಯಿಂದ ಆಗಮಿಸಿದ ನೂರಾರು ಭಕ್ತರು ದೇವರ ದರ್ಶನ ಪಡೆದು ಭಕ್ತಿ ಸಮರ​‍್ಿಸಿದರು. ನಂತರ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಠದ ನೂರಾರು ಭಕ್ತರು ಭಾಗವಹಿಸಿದ್ದರು. 


ಸುದ್ದಿ ಓದಿ