ತ್ಯಾಗರಾಜಸ್ವಾಮಿಗಳ ಆರಾಧನಾ ಮಹೋತ್ಸವ
ಬಳ್ಳಾರಿ 23: ನಗರದ ಹೊರವಲಯದ ಸಂಗನಕಲ್ಲು ಗ್ರಾಮದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಬಳ್ಳಾರಿ ತಾಲ್ಲೂಕು ನಾದಸ್ವರ ಡೋಲು ಕಲಾವಿದರ ಸಂಘದ ವತಿಯಿಂದ ಪದಕವಿತಾ ಪಿತಾಮಹ ತ್ಯಾಗರಾಜಸ್ವಾಮಿಗಳ ಆರಾಧನಾ ಮಹೋತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಗನಕಲ್ಲು ಸುತ್ತಮುತ್ತಲಿನ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ತ್ಯಾಗರಾಜಸ್ವಾಮಿಗಳ ಭಾವಚಿತ್ರವನ್ನು ಮೆರವಣಿಗೆ ಮೂಲಕ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ತಲುಪಿ ನಾದಸ್ವರ ಮತ್ತು ಡೋಲು ಕಲಾವಿದರು ತಮ್ಮ ಸಂಗೀತ ಕಲೆಯನ್ನು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಬಳ್ಳಾರಿ ತಾಲ್ಲೂಕು ನಾದಸ್ವರ ಡೋಲು ಕಲಾವಿದರ ಸಂಘದ ಅಧ್ಯಕ್ಷರಾದ ರಾಜಶೇಖರ್, ಗೌರವಾಧ್ಯಕ್ಷರಾದ ವೆಂಕಟಸುಬ್ಬಯ್ಯ, ಎಂ.ಗುರುಸ್ವಾಮಿ, ಸದಸ್ಯರಾದ ಅಯ್ಯಪ್ಪ, ಚಿನ್ನ ರಘು, ಮಣಿ, ಎರಿ್ರಸ್ವಾಮಿ ಸೇರಿದಂತೆ ಹಲವಾರು ಕಲಾವಿದರು ಉಪಸ್ಥಿತರಿದ್ದರು.