ಬಳ್ಳಾರಿ

ಆಯುಕ್ತ ಖಲಿಲಾಸಾಬ್‌ರಿಂದ ಶ್ರೀಕೃಷ್ಣ ಭಾವಚಿತ್ರಕ್ಕೆ ಪೂಜೆ, ಮೆರವಣಿಗೆ

ಆಯುಕ್ತ ಖಲಿಲಾಸಾಬ್‌ರಿಂದ ಶ್ರೀಕೃಷ್ಣ ಭಾವಚಿತ್ರಕ್ಕೆ ಪೂಜೆ, ಮೆರವಣಿಗೆ

ಬಳ್ಳಾರಿ 26: ನಗರದ ಮಹಾನಗರ ಪಾಲಿಕೆ ಆವರಣದಲ್ಲಿ ಬೆಳಿಗ್ಗೆ  ಮೇಯರ್ ಮೂಲಂಗಿ ನಂದೀಶ್ ಹಾಗೂ ಮಹಾನಗರ ಪಾಲಿಕೆಯ ಆಯುಕ್ತರು ಖಲಿಲಾಸಾಬ್ ಅವರು ಶ್ರೀಕೃಷ್ಣ ಭಾವಚಿತ್ರಕ್ಕೆ ಪೂಜೆ ಮಾಡಿ ಪುಷ್ಪ ನಮನ ಸಲ್ಲಿಸಿ ಮೆರವಣಿಗೆ ಆರಂಭ ಮಾಡಿದರು. 

ಇದೆ ವೇಳೆಯಲ್ಲಿ ಗಡಿಗೆ ಚನ್ನಪ್ಪ ವೃತದ ಮೂಲಕ  ಮೋತಿ ಸರ್ಕಲ್ ಮೆರವಣಿಗೆ ಸಾಗಿ ಹಾಗೂ ಜೋಳದ ರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ತಲುಪಿತು,ತರುವಾಯ ಪೂಜಾ ಕಾರ್ಯಕ್ರಮ ನೆರವೇರಿವಿವು ಎಂದು ಬಳ್ಳಾರಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷರು ಕೆ ಇ ಚಿದಾನಂದಪ್ಪ ಲೋಕ ದರ್ಶನ ವರದಿಗಾರರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ವೀರೇಶ, ರಾಮಾಂಜನಿ,  ಗಾದೆಪ್ಪ, ಗೊಲ್ಲರ ಸಂಘದ ಉಪಾಧ್ಯಕ್ಷರಾದ ಸೋಮಪ್ಪ, ಬಸರೆಡ್ಡಿ,ಆನಂದ, ಲೊಕೇಶ, ರಾಘವೇಂದ್ರ,ಗೋಪಾಲ, ಮೆಟ್ರಿ ಆನಂದ ಮೆಟ್ರಿ ಎರ್ರಿಸ್ವಾಮಿ,ಉಪ್ಪಾರ್ ಹೊಸಹಳ್ಳಿ ಜಗದೀಶ, ಗಿರಿ ಯಾದವ್, ಇನ್ನು ಮುಂತಾದ ಸಂಘದ ವಿವಿಧ ಪದಾಧಿಕಾರಿಗಳು ಸದಸ್ಯರು ಹಾಗೂ ಕುಟುಂಬಸ್ಥರು  ಇತರರು ಸಹ ಪುಜೆ ಮತ್ತು ಮೆರವಣಿಗೆಯಲ್ಲಿ ಪಾಲ್ಗೊಂಡು ಶ್ರೀಕೃಷ್ಣನ ಕೃಪೆಗೆ ಪಾತ್ರರಾದರು. 


ಸುದ್ದಿ ಓದಿ