ಎಸ್‌ಎಫ್‌ಎಸ್ ಶಾಲೆಯ ವಿದ್ಯಾರ್ಥಿನಿ ವಿಶ್ವದಾಖಲೆ
ಲೋಕದರ್ಶನ ವರದಿ
ಮುಂಡರಗಿ 08: ಇತ್ತಿಚೀಗೆ ಜರುಗಿದ ಕಲಾಮ್ ವರ್ಲ್ಡ್‌ರೆಕಾರ್ಡ್ ಸ್ಥಳೀಯ ಎಸ್.ಎಫ್.ಎಸ್. ಶಾಲೆಯ ವಿದ್ಯಾರ್ಥಿನಿ ವಿಶ್ವದಾಖಲೆ ಮಾಡಿದ್ದಾಳೆ ಕುಮಾರಿ ಜೇಷ್ಠಾ ಜ ಅಂದ್ರಾಳ ವಿದ್ಯಾರ್ಥಿನಿ ಕೇವಲ 4 ನಿಮಿಷಗಳಲ್ಲಿ ಎರಡು ದ್ವಿಚಕ್ರ ವಾಹನಗಳನ್ನು ತನ್ನ ಬಾಯಿಯಿಂದ 100 ಮೀಟರ್ ವರೆಗೆ ಎಳೆದು ವಿಶ್ವದಾಖಲೆಯನ್ನು ತನ್ನ ಮುಡಿಗೇರಿಸಿಕೊಂಡಿರುವುದರಿಂದ ವಿದ್ಯಾರ್ಥಿನಿಗೆ ಎಸ್.ಎಫ್.ಎಸ್. ಶಾಲೆಯ ಪ್ರಾಂಶುಪಾಲರು, ಶಾಲೆಯ ಎಲ್ಲ ಸಿಬ್ಬಂದಿ ವರ್ಗದವರು, ಹಾಗೂ ಮಾನ್ಯಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಊರಿನ ಗಣ್ಯವ್ಯಕ್ತಿಗಳು, ಪಾಲಕರು ಶುಭಕೋರಿದ್ದಾರೆ. ಈ ದಾಖಲೆಯು ನಮ್ಮ ಗದಗ ಜಿಲ್ಲೆಗೆ ಪ್ರಥಮವಾಗಿ ಕೀರ್ತಿ ತಂದಿದ್ದು ನಮ್ಮ ತಾಲ್ಲೂಕಿಗೆ ಸಲ್ಲುತ್ತದೆ ಎಂದು ವಿದ್ಯಾರ್ಥಿನಿಗೆ ತರಬೇತಿ ನೀಡಿದ ತರಬೇತುದಾರ ಮಲ್ಲಿಕಾರ್ಜುನ ಪುಂಡಿಕಾಳದ ಅವರು ಸಂತಸ ವ್ಯಕ್ತಪಡಿಸಿದ್ದಾರೆ.