ಹಗರಿಬೊಮ್ಮನಹಳ್ಳಿ

ಹಡಗಲಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ

ಹಡಗಲಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ

ಲೋಕದರ್ಶನ ವರದಿ 

ಹೂವಿನಹಡಗಲಿ 22: ಇಲ್ಲಿನ ಧರ್ಮಿಣಿ ತಾಲೂಕು ಬಂಜಾರ ಮಹಿಳಾ ಜಾಗೃತಿ ಟ್ರಸ್ಟ್‌ನಿಂದ ಸೋಮವಾರ ಸೇವಾಲಾಲ್ ಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. 

ಬಂಜಾರ ನಿಗಮದ ನಿರ್ದೇಶಕಿ ಸವಿತಾಬಾಯಿ ಕಾರ‌್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾಳೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಅಧ್ಯಕ್ಷತೆ ವಹಿಸಿದ್ದ ಲಕ್ಷ್ಮಿಬಾಯಿ ಮಾತನಾಡಿ ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಸ್ವವಲಂಬನೆ ಜೀವನ ಕಂಡು ಕೊಂಡಿದ್ದಾರೆ ಎಂದರು.ಕೌಶಲ್ಯಬಾಯಿ ಮಾತನಾಡಿ ಮಕ್ಕಳಿಗೆ ಶಿಕ್ಷಣ ಕೊಡಲು ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ನಾನಾ ಕ್ಷೇತ್ರಗಳಲ್ಲಿ ಸಾಧನೆ ಗೈದ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು. 

ಗೋರಸಿಕವಾಡಿ,ಗೋರ್ ಸೇನಾ ಪದಾಧಿಕಾರಿಗಳಾದ ಬಿ.ಪರಮೇಶ್ವರ​‍್ಪ, ಶಾಂತನಾಯ್ಕ,ಡಾ.ಕಠಾರಿ, ಸೇವ್ಯನಾಯ್ಕ, ನೀಲಾನಾಯ್ಕ, ಕೃಷ್ಣನಾಯ್ಕ,ಬಾಬುಲಾಳ್, ರಮೇಶನಾಯ್ಕ, ಶಂಕರನಾಯ್ಕ,ಕುಬೇರನಾಯ್ಕ, ಲಲಿತಾಬಾಯಿ, ಶಿಲ್ಪಾ,ಧರ್ಮಿಣಿ, ಮೀರಬಾಯಿ,ಹೇಮಾಬಾಯಿ ಇದ್ದರು. 


ಸುದ್ದಿ ಓದಿ