ಮಹಲಿಂಗಪುರ

ಅರ್ಥಪೂರ್ಣವಾಗಿ ವಿಶ್ವ ಜಲ ದಿನ ಆಚರಣೆ

ಅರ್ಥಪೂರ್ಣವಾಗಿ ವಿಶ್ವ ಜಲ ದಿನ ಆಚರಣೆ

ಮಹಾಲಿಂಗಪುರ 23: ಚಿಮ್ಮಡ ಗ್ರಾಮದ ಸರಕಾರಿ ಹೆಣ್ಣು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಇಕೋಕ್ಲಬ್ ಹಾಗೂ ಪ್ರೇರಣ ತಂಡದ ವತಿಯಿಂದ ವಿಶ್ವ ಜಲ ದಿನದ ಅಂಗವಾಗಿ ಪ್ರೇರಣಾ ಕಾರ್ಯಚಟುವಟಿಕೆ  ಅರ್ಥಪೂರ್ಣವಾಗಿ ಜರುಗಿತು.

ತನ್ನಿಮಿತ್ತ ಸ್ಥಳದಲ್ಲೇ ನಿಸರ್ಗ ಚಿತ್ರ ಬಿಡಿಸಿ, ನಿಸರ್ಗದ ಮಾದರಿ ತಯಾರಿಸುವ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಪ್ರೇರಣಾ ಕಾರ್ಯಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ನೇಮಗೌಡ ಬಹುಮಾನ ವಿತರಿಸಿದರು. 

ನಂತರ ಮಾತನಾಡಿ, ಜಾಗತಿಕ ತಾಪಮಾನ ಹೆಚ್ಚಿದಂತೆ ಭೂಮಿಯ ಮೇಲಿನ ವೈವಿಧ್ಯತೆಯು ನಾಶ ಹೊಂದಿ ಜೀವಸಂಕುಲಕ್ಕೆ ಧಕ್ಕೆಯಾಗುತ್ತಿದೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನಿಸರ್ಗವನ್ನು ರಕ್ಷಿಸಿ ಅದರೊಂದಿಗೆ ನೀರು ಹಾಗೂ ಗಿಡಮರಗಳ ಬಗ್ಗೆ ಜಾಗೃತಿ ವಹಿಸುವಂತೆಯೂ ಕರೆ ನೀಡಿದರು.

ಶಿಕ್ಷಕ ಬಿ.ಡಿ.ನೇಮಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಮುಖ್ಯಗುರು ಆರ್.ಎಸ್.ರೋಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಶಿಕ್ಷಣ ಸಂಯೋಜಕ ಶ್ರೀಶೈಲ ಬುರ್ಲಿ, ಗುಚ್ಚ್ ಸಂಪನ್ಮೂಲ ವ್ಯಕ್ತಿ ರವೀಂದ್ರ ಸಂಪಗಾಂವಿ, ಜಿಲ್ಲಾ ಪ್ರೇರಣಾ ನೋಡಲ್ ಅಧಿಕಾರಿ ಸಂತೋμï ಪೂಜಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಟಿಎಲ್‍ಎಂ ಗಳನ್ನು ವೀಕ್ಷಿಸಿದರು. 

ಶಿಕ್ಷಕರಾದ ಎಸ್.ಎ.ಬಿರಾದಾರ ಪಿ.ಕೆ ಮಳಲಿ, ಎಲ್.ಎಂ. ಮಾದರ, ವೈ.ಜಿ.ಕಲ್ಯಾಣಕರ, ಜೆ.ಎಸ್.ಗಡೆನ್ನವರ್, ವ್ಹಿ.ಎನ್.ನಾರಯನಕರ, ಡಿ.ಡಿ.ಕಣಗೊಂಡ ಇದ್ದರು. ಎ.ವೈ.ಬಂಗಾರಿ ನಿರೂಪಿಸಿದರು. ಡಿ.ಪಿ.ಪರಿಟ ಸ್ವಾಗತಿಸಿದರು.

ಸುದ್ದಿ ಓದಿ