ವಿಶ್ವ ಚಿಂತನಾ ದಿನ : ಸರ್ವಧರ್ಮ ಪ್ರಾರ್ಥನೆ
ಮಹಾಲಿಂಗಪುರ: ಸ್ಥಳೀಯ ಕೆಎಲ್ಇ ಸಂಸ್ಥೆಯ ಎಸ್ಸಿಪಿ ಪ್ರೌಢಶಾಲೆಯಲ್ಲಿ ಅಕ್ಕ ಮಹಾದೇವಿ ಸ್ಕೌಟ್ಸ್ ಕಂಪನಿ ಸಂಸ್ಥಾಪಕರ ದಿನವನ್ನು ವಿಶ್ವ ಚಿಂತನಾ ದಿನ ಹಾಗೂ ವಿಶ್ವ ಭ್ರಾತೃತ್ವ ದಿನವನ್ನಾಗಿ ಆಚರಿಸಲಾಯಿತು. ಸಂಸ್ಥಾಪಕರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು. ಗೈಡ್ಸ್ ವಿದ್ಯಾರ್ಥಿಗಳು ಭಗವದ್ಗೀತೆ, ಕುರಾನ, ಬೈಬಲ್ ಪಠಣ ಮಾಡುವ ಮೂಲಕ ಸಾಮೂಹಿಕವಾಗಿ ಸರ್ವಧರ್ಮ ಪ್ರಾರ್ಥನೆ ಮಾಡಿದರು. ವಿಶ್ವ ಭ್ರಾತೃತ್ವದ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಉಪಪ್ರಾಂಶುಪಾಲ ಬಿ.ಎನ್.ಅರಕೇರಿ, ಗೈಡ್ಸ್ ಕ್ಯಾಪ್ಟನ್ ಸಪನಾ ಅನಿಗೋಳ, ಪ್ರತಿಮಾ ಪಡೇಸೂರ, ಗೈಡ್ಸ್ ವಿದ್ಯಾರ್ಥಿಗಳಾದ ಸೌಮ್ಯ ಕಾಗಿ, ಪವಿತ್ರಾ ಕುಕ್ಕುಗೋಳ, ಸವಿತಾ ನಾಡಗೌಡ, ಸೃಷ್ಠಿ ಕಡಕೋಳ, ಪ್ರಿಯಾಂಕಾ ಮಾಳಿ, ಪ್ರೀತಿ ಚಿಪ್ಪಲಕಟ್ಟಿ, ಶ್ವೇತಾ ಕಾಗಿ, ಸಂಜನಾ ಹೊಸೂರ, ಸೌಜನ್ಯ ಬಿರಾದಾರ, ಗಂಗಮ್ಮ ನಜ್ಜರ, ಸೃಷ್ಠಿ ಕೆರೂರ ಇದ್ದರು.