ಕರವೇಯಿಂದ ವಿಶ್ವ ರಂಗಭೂಮಿ ದಿನಾಚರಣೆ
ಬಳ್ಳಾರಿ 27: ಕರ್ನಾಟಕ ರಕ್ಷಣಾ ವೇದಿಕೆ, ಜಿಲ್ಲಾ ಘಟಕದ ವತಿಯಿಂದ ದಿ. 27ರಂದು ಮುಂಡ್ಲೂರು ರಾಮಪ್ಪ ಸಭಾಂಗಣದಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯನ್ನು ಕರವೇ ರಾಜ್ಯ ಉಪಾಧ್ಯಕ್ಷ ಚಾನಾಳ್ ಶೇಖರ್ ಹಾಗೂ ಜಿಲ್ಲಾ ಅಧ್ಯಕ್ಷ ಡಿ.ಕಗ್ಗಲ್ ಶಂಕರ್ ಇವರ ನೇತೃತ್ವದಲ್ಲಿ ಆಚರಿಸಲಾಯಿತು.
ರಂಗಭೂಮಿ ಕಲಾವಿದರಾದ ಪುರುಷೋತ್ತಮ ಹಂದ್ಯಾಳ್, ಹಿರಿಯ ಮುಖಂಡರು, ಸಮಾಜ ಸೇವಕರು ಆದ ಕಲ್ಲುಕಂಬ ಪಂಪಾಪತಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕರವೇ ನೂತನ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರನ್ನಾಗಿ ಪೊಂಪನಗೌಡ. ಕೆ. ಇವರನ್ನು ನೇಮಕ ಮಾಡಲಾಯಿತು.
ಕೋಳೂರು ಜಿ.ತಿಪ್ಪಾರೆಡ್ಡಿ, ಚಂದ್ರಮೋಹನ್, ರವೀಂದ್ರ ಪೂಜಾರಿ, ಬಾವಿ ಶಿವಕುಮಾರ್, ಚಾಂದ್ಭಾಷ, ಆಟೋ ಅಂಜಿ ವಣೇನೂರು, ಗೋಟೂರು ರಾಮಕೃಷ್ಣ, ಮೋಕಾ ಲೇಪಾಕ್ಷಿ, ಕೆ.ಕೆ.ಹಾಳ್ ವಿನೋದ್, ಕರ್ಚೆಡು ಅಂಜಿ, ಗೋನಾಳು ರಘು, ಕುಮಾರ್, ಮಸ್ಕಿ ಮಹಾಂತೇಶ್, ಮಲ್ಲಿಕಾರ್ಜುನ ಚಾನಾಳ್ ಇನ್ನು ಮುಂತಾದವರು ಉಪಸ್ಥಿತರಿದ್ದರು.