ಡಿ.31 ರಂದು ವಿಶ್ವ ವಿಕಲಚೇತನರ ಒಕ್ಕೂಟದ ದಿನಾಚರಣೆ
ಸಾಧಕರಿಗೆ ಸನ್ಮಾನ:
ಮುದ್ದೇಬಿಹಾಳ : ಅವಳಿ ತಾಲೂಕುಗಳ ಸಹಯೋಗದಲ್ಲಿ ವಿಶ್ವವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಡಿ.31 ರಂದು ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ವಿಕಲಚೇತನ ಒಕ್ಕೂಟದ ಪದಾಧಿಕಾರಿಗಳು ಮನವಿ ಮಾಡಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆ ಜಿಲ್ಲಾಧ್ಯಕ್ಷ ಎಸ್.ಕೆ.ಘಾಟಿ,ಸಂಗಣ್ಣ ಹುಣಶ್ಯಾಳ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮುದ್ದೇಬಿಹಾಳ ಹಾಗೂ ತಾಳಿಕೋಟಿ ವಿಕಲಚೇತನರ ವಿವಿಧೋದ್ಧೇಶ ಗ್ರಾಮೀಣ ನಗರ ಪುನರ್ವಸತಿ ಕಾರ್ಯಕರ್ತರ ಒಕ್ಕೂಟ,ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆ ಹಾಗೂ ಗಾನಯೋಗಿ ಪಂ.ಪುಟ್ಟರಾಜ ಗವಾಯಿಗಳ ಸೇವಾ ಸಂಘದ ಆಶ್ರಯದಲ್ಲಿ ಈ ಕಾರ್ಯಕ್ರಮ ಜರುಗಲಿದ್ದು ಅಂದು ಬೆಳಗ್ಗೆ 9 ಗಂಟೆಗೆ ಪ್ರಮುಖ ಬೀದಿಗಳಲ್ಲಿ ತ್ರಿಚಕ್ರ ವಾಹನ ಜಾಥಾ ನಡೆಯಲಿದೆ. ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ.ಕುಂಟೋಜಿ ಹಿರೇಮಠದ ಡಾ.ಚೆನ್ನವೀರ ದೇವರು,ತಾಳಿಕೋಟಿ ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು ಸಾನಿಧ್ಯ ವಹಿಸುವರು.
ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಉದ್ಘಾಟಿಸುವರು.ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ ಅಧ್ಯಕ್ಷತೆ ವಹಿಸುವರು.ಮಾಜಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ,ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ,ಕುರುಬರ ಸಂಘದ ತಾಲೂಕಾಧ್ಯಕ್ಷ ಎಂ.ಎನ್.ಮದರಿ,ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ,ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಬಿ.ನಾವದಗಿ,ಜಿಪಂ ಮಾಜಿ ಸದಸ್ಯ ನಿಂಗಪ್ಪಗೌಡ ಬಪ್ಪರಗಿ,ಜೆಡಿಎಸ್ ಅಭ್ಯರ್ಥಿ ಡಾ.ಸಿ.ಎಸ್.ಸೋಲಾಪೂರ,ಜೆಡಿಎಸ್ ರಾಜ್ಯ ಕಾರ್ಯದರ್ಶಿ ಕೆ.ಎಂ.ರಿಸಾಲ್ದಾರ್,ಅರವಿಂದ ಕೊಪ್ಪ,ಶಹಜಾದಬಿ ಹುಣಸಗಿ,ಶಂಕರಗೌಡ ಹಿರೇಗೌಡರ,ಗುರು ತಾರನಾಳ,ಪವಾಡೆಪ್ಪ ಹವಾಲ್ದಾರ,ಪಿ.ಬಿ.ಮಾತಿನ,ಶರಣಬಸ್ಸು ಸಜ್ಜನ,ಶಾಂತಪ್ಪ ಕಂಬಳಿ,ಸಿ.ಜಿ.ವಿಜಯಕರ್,ಡಾ.ಎಸ್.ವಾಯ್.ಪಾಟೀಲ್ ಮೊದಲಾದವರು ಆಗಮಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕಾಧ್ಯಕ್ಷ ಅಡಿವೆಪ್ಪ ಕೊಡಗಾನೂರ,ಈರಯ್ಯ ಹಿರೇಮಠ,ಉಮೇಶ ಜತ್ತಿ,ಬಾಲಪ್ಪ ಬೀಸಲದಿನ್ನಿ,ನಾಗೇಶ ಅಮರಾವತಿ,ಗದ್ದೆಪ್ಪ ಮೂಲಿಮನಿ,ಬಾಬು ಸಾತಿಹಾಳ,ಶಿವಯೋಗಿ ತೆಗ್ಗಿನಮಠ,ಸಂಗಣ್ಣ ಬಗಲಿ ಮೊದಲಾದವರು ಇದ್ದರು. ಮುದ್ದೇಬಿಹಾಳ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ವಿಕಲಚೇತನ ಒಕ್ಕೂಟದ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿದರು.