ಹಗರಿಬೊಮ್ಮನಹಳ್ಳಿ

ಕೆಚ್ಚಿನಬಂಡಿ ಸರಕಾರಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಕೆಚ್ಚಿನಬಂಡಿ ಸರಕಾರಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಲೋಕದರ್ಶನ ವರದಿ 


ಹಗರಿಬೊಮ್ಮನಹಳ್ಳಿ 05: ತಾಲೂಕಿನ ಕೆಚ್ಚಿನ ಬಂಡಿ ಸರಕಾರಿ ಪ್ರಾಥಾಮಿಕ ಶಾಲೆಯಲ್ಲಿ ಭಾನುವಾರ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. 

ಈ ವೇಳೆ ಶಾಲಾ ಮುಖ್ಯ ಶಿಕ್ಷಕ ಆಂಜನೇಯ ಮಾತನಾಡಿ ನಮ್ಮ ಮುಂದಿನ ಪೀಳಿಗೆಗೆ ನಾವು ಆಸ್ತಿ ಅಂತಸ್ತು ಮಾಡುವುದಕ್ಕಿಂತ ಮೊದಲು ಉತ್ತಮ ಪರಿಸರ ಬಳುವಳಿಯಾಗಿ ನೀಡಿ ಇದರಿಂದ ಸ್ವಾಶ್ಥ ಸಮಾಜಕ್ಕೆ ಮುನ್ನುಡಿ ಬರೆದಂತಾಗುತ್ತದೆ, ಮೊದಲು ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛತೆಯಿಂದ ಇಟ್ಟುಕೊಳ್ಳುವ ಪಣತೊಡಬೇಕಿದೆ, ಇದರಿಂದ ಬೇರೆಯವರಿಗೆ ಮಾದರಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ, ಗ್ರಾಮದ ಹಿರಿಯರು ಸೇರಿದಂತೆ ಯುವ ಪೀಳಿಗೆಯು ಗಿಡಗಳನ್ನು ನೆಡುವುದಕ್ಕೆ ಮುಂದಾಗಿರುವುದು ನಿಜಕ್ಕೂ ಸಂಸತ ತಂದಿದೆ, ಪರಿಸರಕ್ಕೆ ಹಾನಿ ಮಾಡುವಂತಹ ವಸ್ತುಗಳ ಬಳಕೆಗೆ ಕಡಿವಾಣ ಹಾಕುವ ಜಾಗೃತಿಯನ್ನು ನೀಡಬೇಕಿದೆ, ಮನೆಗಳ ಮುಂದೆ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆ ಮನೆಯಂಗಳದಲ್ಲಿ ಗಿಡಗಳನ್ನು ಬೆಳಸಿ ಅಭಿವೃಧ್ಧಿ ಹೆಸರಲ್ಲಿ ಗಿಡಮರಗಳ ಹೋಮ ಮುಂದುವರೆದರೆ ನಾಳೆ ಉಸಿರಾಡುವ ಗಾಳಿಯನ್ನು ಕೊಂಡುಕೊಳ್ಳುವ ಕಾಲ ಬರಬಹುದಾಗಿದೆ ಹಾಗಾಗಿ ನೈಸರ್ಗಿಕ ಉತ್ಪನ್ನಗಳಿಗೆ ಮನ್ನಣೆ ದೊರೆತರೆ ಪರಿಸರಕ್ಕೆ ಹಾನಿ ಮಾಡುವ ವಸ್ತುಗಳ ಬಳಕೆ ವಿರಳವಾಗುತ್ತವೆ ಎಂದರು. 

ದೈಹಿಕ ಪರೀವೀಕ್ಷಕ ಕೊಟ್ರೇಶ್ ಮಾತನಾಡಿ ಕೆಚ್ಚಿನ ಬಂಡಿ ಗ್ರಾಮಸ್ಥರು ಸೇರಿದಂತೆ ಇಲ್ಲಿನ ಯುವ ಸಮೂಹ ಪರಿಸರ ದಿನಾಚರಣೆಗೆ 300ಗಿಡಗಳನ್ನು ನೆಡುತ್ತಿರುವುದು ನಿಜಕ್ಕೂ ಸಂತಸ ತಂದಿದೆ, ಪರಿಸರ ಸಂರಕ್ಷಣೆ ನಮ್ಮಲ್ಲರ ಹೊಣೆಯಾಗಿದೆ, ಪರಿಸರ ಹಾಳುಗೆಡವುದರಿಂದ ವಿವಿಧ ರೀತಿಯ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ, ನನಗೇಕೆ ಎಂಬುದನ್ನು ದೂರವಿಟ್ಟು ಪರಿಸರ ರಕ್ಷಣೆಯತ್ತ ಮುನ್ನಗ್ಗಬೇಕಿದೆ, ಪರಿಸರ ಹಾಳುಮಾಡುತ್ತಿರುವ ಹತ್ತಾರು ಕಾರ್ಖಾನೆಗಳಿರಬಹುದು, ತ್ಯಾಜ್ಯ ಉತ್ಫತ್ತಿಮಾಡಿ ಪರಿಸರವನ್ನು ಹಾಳು ಮಾಡುತ್ತಿರುವುದನ್ನು ತಡೆಗಟ್ಟುವ ಕಾರ್ಯವಾಗಬೇಕಿದೆ ಎಂದರು. 

ಈ ಸಂಧರ್ಭದಲ್ಲಿ ಸಿಆರ್‌ಪಿ ಮಂಜುಳಾ, ಗೆಳತಿಯರ ಬಳಗದ ರೇಖಾ, ಮಂಗಳಗೌರಿ, ಶ್ರೀದೇವಿ, ಎಸ್‌ಡಿಎಂಸಿ ಸದಸ್ಯ ಕಂದಗಲ್ಲ ನಾಗರಾಜ, ಅಜ್ಜಪ್ಪನವರ ಹನುಮಂತಪ್ಪ, ಅಲಬೂರು ಸಂತೋಷ, ಹುಲಿಮನಿ ಬಸವರಾಜ, ಮುಖಂಡರಾದ ಮ್ಯಗಳಮನಿ ರಾಮಸಜ್ಜ, ರಮೇಶ ಸೇರಿದಂತೆ ಗ್ರಾಮದ ಯುವಕರು ಉಪಸ್ಥಿತರಿದ್ದರು. 


ಸುದ್ದಿ ಓದಿ