ವಿಶ್ವ ರಕ್ತದಾನಿಗಳ ದಿನಾಚರಣೆ ಜಾಗೃತಿ ಕಾರ್ಯಕ್ರಮ

ವಿಶ್ವ ರಕ್ತದಾನಿಗಳ ದಿನಾಚರಣೆ ಜಾಗೃತಿ ಕಾರ್ಯಕ್ರಮ

ಜಮಖಂಡಿ: 23: ದಾನಗಳಲ್ಲಿ ಶ್ರೇಷ್ಠವಾದ ದಾನ ರಕ್ತದಾನವಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿರುವ ವ್ಯಕ್ತಿ ಜೀವವನ್ನು ಕಾಪಾಡುತ್ತದೆ. ವಿಶ್ವ ರಕ್ತದಾನಿಗಳ ದಿನಾಚರಣೆ 2005 ರಿಂದ ವಿಶ್ವಸಂಸ್ಥೆ ಜಗತ್ತಿನಾದ್ಯಾಂತ ಪ್ರತಿವರ್ಷ ಜೂ.14 ರಂದು ಆಚರಿಸಲಾಗುತ್ತಿದೆ ಎಂದು ಜೀವನ ರಕ್ತನಿಧಿ ಅಧ್ಯಕ್ಷ ಡಾ.ಸಿ.ಎನ್‌.ರುದ್ರಸ್ವಾಮಿಮಠ ಹೇಳಿದರು. 

ತಾಲೂಕಿನ ಹುನ್ನೂರ ಗ್ರಾಮದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಭಾಭವನದಲ್ಲಿ ರೆಡ್‌ಕ್ರಾಸ್ ಘಟಕ, ಐ.ಕ್ಯೂ.ಎ.ಸಿ., ಎನ್‌.ಎಸ್‌.ಎಸ್‌. ಸ್ವ-ಆರ್ಥಿಕ ಘಟಕ ಮತ್ತು ರಾ.ಚ.ವಿ ಘಟಕ ಹಾಗೂ ಸಾರ್ವಜನಿಕ ಆಸ್ಪತ್ರೆ ಜಮಖಂಡಿ, ಜೀವನ ರಕ್ತನಿದಿ ಕೇಂದ್ರ ಜಮಖಂಡಿ ಸಹಯೋಗದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಯಾವುದೇ ವ್ಯಕ್ತಿ ರಕ್ತ ದಾನವಾಗಿ ನೀಡಬೇಕೆಂದರೆ 18 ರಿಂದ 60 ವರ್ಷ ವಯಸ್ಸಿನವರಾಗಿರಬೇಕು. ಕಳೆದ ಆರು ತಿಂಗಳಲ್ಲಿ ಯಾವುದೇ ಸಾಂಕ್ರಮಿಕ ಖಾಯಿಲೆಗೆ ತುತ್ತಾಗಿರಬಾರದು. ಯುವಕರು ಪಾಸ್ಟ ಪುಡ್, ಜಂಕ್ ಪುಡ್ ತಿಂದು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ನಮ್ಮ ಪೂರ್ವಜರ ಆಹಾರದಲ್ಲಿಯೇ ಆರೋಗ್ಯವಿದೆ ನಮ್ಮ ಆಹಾರ ಪದ್ದತಿ ನಮ್ಮ ಆರೋಗ್ಯ ಕಾಪಾಡುವಂತಹದು ಎಂದರು. 

ಸಂಪನ್ಮೂಲ ವ್ಯಕ್ತಿ ವಿ.ಎ.ದಳವಾಯಿ ಮಾತನಾಡಿ, ಯುವಕರು ಉತ್ತಮ ಹವ್ಯಾಸ, ಜೀವನಶೈಲಿಯನ್ನು ರೂಡಿಸಿ ಕೊಳ್ಳಬೇಕು. ರಕ್ತದಾನ ಒಂದು ವಿಶೇಷ ದಾನವಾಗಿದೆ ಏಕೆಂದರೆ ಇಂದು ವಿಜ್ಞಾನ ಎಲ್ಲವನ್ನು ಕಂಡುಹಿಡಿದಿದೆ ಮನುಷ್ಯ ಮಂಗಳಯಾನ, ಚಂದ್ರಯಾನ ಮಾಡಿದ್ದಾನೆ ತಾಂತ್ರಿಕವಾಗಿ ಹಲವಾರು ಕ್ಷೇತ್ರದಲ್ಲಿ ಮುಂದುವರೆದರು ಸಹ ಕೃತಕವಾಗಿ ರಕ್ತ ಉತ್ಪಾದಿಸಲು ಸಾದ್ಯವಾಗಿಲ್ಲ ಎಂದರು. 

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ಡಾ.ಸುನಂದಾ ಶಿರೂರ ಮಾತನಾಡಿದರು. ವೇದಿಕೆಯಲ್ಲಿ ಡಾ.ಎನ್‌.ವಿ.ಅಸ್ಕಿ, ಐ.ಕ್ಯೂ.ಎ.ಸಿ. ಸಂಯೋಜಕ ಟಿ.ಎಸ್‌.ಮೈಗೂರ, ಡಾ.ಬನಶಂಕರಯ್ಯ, ವಿಪ್ರೊ.ಮುಸ್ತಫಾ ಮುಂಡರಗಿ,ವಿದ್ಯಾರ್ಥಿ ಒಕ್ಕೂಟ ಕಾರ್ಯದರ್ಶಿ ಪ್ರವೀಣ ಬಾಗಲಕೋಟ, ಡಾ.ಕೆ.ಡಿ.ಗೊಳಸಂಗಿ, ಪ್ರೊ.ಎಲ್‌.ಎಸ್‌.ಕೋರೆ, ಡಾ.ಸತೀಶಗೌಡ, ಡಾ.ರವಿಕುಮಾರ, ಡಾ.ಗುರು ಹಿರೇಮಠ, ಪ್ರೊ.ಗುರವ್ವ, ಪ್ರೊ.ಭಾರತಿ ಜಮಖಂಡಿ, ಡಾ.ಕೊಕಟನೂರ, ಪ್ರೊ. ಸಂತೋಷ ಇಟ್ಟಿ, ಡಾ.ಎಸ್‌.ಎಸ್‌.ಸುವರ್ಣಖಂಡಿ ಪ್ರೊ.ರಾಠೋಡ, ಪ್ರೊ.ಪೋತಿ ಇದ್ದರು. ಪ್ರೊ.ಪರ್ವಿನ್ ನವಾಲ್ದಾರ ಪ್ರಾರ್ಥಿಸಿದರು. ಡಾ.ಪಿ.ಜೈಪ್ರಕಾಶ ಸ್ವಾಗತಿಸಿದರು. ಪ್ರೊ.ಪಿ.ಡಿ.ಬಡಿಗೇರ ನಿರೂಪಿಸಿದರು. ಪ್ರೊ.ಎಂ.ಬಿ.ಮುಂಡರಗಿ ವಂದಿಸಿದರು. 


ಸುದ್ದಿ ಓದಿ